ಶಿಕ್ಷಕ ಸ್ಥಾನದ ಘನತೆಗೆ ಅಗೌರವ ತರದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಾಠ ಮಾಡಿ : ಬಿಇಓ

ಶಿಕ್ಷಕ ಸ್ಥಾನದ ಘನತೆಗೆ ಅಗೌರವ ತರದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಾಠ ಮಾಡಿ : ಬಿಇಓ

ಶಿಕ್ಷಕ ಸ್ಥಾನದ ಘನತೆಗೆ ಅಗೌರವ ತರದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಾಠ ಮಾಡಿ : ಬಿಇಓ

ಚಿಂಚೋಳಿ :ದೇಶ ಬಲಿಷ್ಠವಾಗಿ ಬೆಳೆಯಲು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ದೇಶ ಬದಲಾವಣೆ ತರುವ ಶಕ್ತಿ ಶಿಕ್ಷಕರು ಹೊಂದಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಬೋದನೆಯೊಂದಿಗೆ ಮಕ್ಕಳಿಗೆ ಸಂಸ್ಕಾರದ ಪಾಠ ಕಲಿಸಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ವಿ.ಲಕ್ಷ್ಮಯ್ಯ ಅವರು ಹೇಳಿದರು.

ಇಲ್ಲಿನ ಬಂಜಾರ ಭವನದಲ್ಲಿ 2025-26ನೇ ಸಾಲಿನ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕ ಅಂದರೆ ಶಿಸ್ತು. ಭವಿಷ್ಯ ರೂಪಿಸುವ ಗುರು ಸ್ಥಾನ ಹೊಂದಿರುವ ಶಿಕ್ಷಕನಾಗಿದ್ದಾನೆ. ಈ ಶಿಕ್ಷಕ ಸ್ಥಾನದ ಘನತೆಗೆ ಅಗೌರವ ತರದಂತೆ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಬೋಧನೆ ಮಾಡಿ ಗೌರವ ಪಡೆದುಕೊಳ್ಳಬೇಕು ಎಂದರು.

ಸರಕಾರದ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ ಮಲಿ ಮಾತನಾಡಿದರು.

ಈ ವೇಳೆ ಪ್ರಾಥಮಿಕ ಶಾಲೆಯ 18 ಶಿಕ್ಷಕರಿಗೆ ಮತ್ತು ಪ್ರೌಢ ಶಾಲೆ 8 ಶಿಕ್ಷಕರಿಗೆ ತಾಲೂಕ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಫಲಕ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ರಾಧಬಾಯಿ ಓಲಗೇರಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವ್ಹಾಣ, ದೇವೀಂದ್ರಪ್ಪ ಹೋಳ್ಕರ್, ಡಾ. ಮಲ್ಲಿಕಾರ್ಜುನ ಪಾಲಾಮೂರ, ಸುರೇಶ ಕೊರವಿ, ಮಾರುತಿ ಪತಂಗೆ, ಖುರ್ಷಿದಮಿಯಾ, ಜಯಪ್ಪ ಚಾಪೆಲ್, ಅಶೋಕ ಹೂವಿನಭಾವಿ, ಶಾಮರಾವ ಮೋಘ, ಮಕ್ಸೂದ್ ಅಲಿ, ರಾಜೇಖರ ಮುಸ್ತರಿ, ಶ್ರೀ ಶೈಲ್ ನಾಗಾವಿ ಅವರು ಉಪಸ್ಥಿತರಿದರು.  

• ಶಿಕ್ಷಕರಿಗೆ ನೀಡಿರುವ ನೆನಪಿನ ಕಾಣಿಕೆಯ ಫಲಕದ ಮೇಲೆ ಸರಕಾರಿ ಚಿನ್ನೆದೊಂದಿಗೆ ಖಾಸಗಿ ಒಡೆತನದ ಬೆಂಗಳೂರಿನ ಕೇತಕಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಪ್ರೈವೆಟ್ ಲಿಮಿಟೆಡ್ನ ಮಾಲೀಕನ ಭಾವಚಿತ್ರದೊಂದಿಗೆ ಮುದ್ರಿಸಿ, ಬಿಲ್ಡರ್ಸ್ ಜೊತೆ ಕೈ ಜೊಡಿಸಿ ಅವರ ಪರ ಘನ ಸರಕಾರದ ಅನುಮತಿ ಇಲ್ಲದೇ ಸಾರ್ವಜನಿಕ ಶಿಕ್ಷಣ ಇಲಾಖೆ ತಂಡ ಹಣಪಡೆದು ದಲ್ಲಾಳಿ ಕಾರ್ಯದ ಕೆಲಸದಲ್ಲಿ ತೊಡಗಿಕೊಂಡಿರುವುದು ಕಂಡಿತು.

• ಘನ ಸರಕಾರದ ಚಿನ್ನೆಯೊಂದಿಗೆ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಪ್ರೈವೆಟ್ ಲಿಮಿಟೆಡ್ನ ಮಾಲೀಕನ ಭಾವಚಿತ್ರದೊಂದಿಗೆ ಮುದ್ರಿಸಿ, ನೀಡಿರುವುದು ಕಾನೂನು ಪ್ರಕಾರ ತಪ್ಪು. ನಾನು ತಡವಾಗಿ ವೇದಿಕೆ ಕಾರ್ಯಕ್ರಮಕ್ಕೆ ಬಂದಿದ್ದರಿಂದ ಅದು ನನ್ನ ಗಮನಕ್ಕೆ ಬಂದಿಲ್ಲ. - ಸಂತೋಷ ರಾಠೋಡ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಚಿಂಚೋಳಿ

ಸರಕಾರ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆಗೆ ನಿಯಮದಂತೆ ಅನುದಾನ ನೀಡುತ್ತದೆ. ಆದರೆ ಅಧಿಕಾರಿಗಳು ಕಾರ್ಯಕ್ರಮವನ್ನು ಡೆವಲಪರ್ಸ್ಗಳೊಂದಿಗೆ ಕೈಗೊಡಿಸಿ ಮಾಡುತ್ತಿರುವುದರ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ವಿಚಾರಿಸಲಾಗುತ್ತದೆ.

-ಸೂರ್ಯಕಾಂತ ಮದಾನೆ ಡಿಡಿಪಿಐ ಕಲಬುರಗಿ