ಸಮಸಮಾಜ ಕಟ್ಟುವಲ್ಲಿ ಶರಣರ ಕೊಡುಗೆ ಅಪಾರ: ಶಿವಲಿಂಗ ಬೆಂಬುಳಗೆ"

ಸಮಸಮಾಜ ಕಟ್ಟುವಲ್ಲಿ ಶರಣರ ಕೊಡುಗೆ ಅಪಾರ: ಶಿವಲಿಂಗ ಬೆಂಬುಳಗೆ"

ಕಮಲನಗರ: ಕಾಯಕ ಶರಣರ ಜಯಂತಿ ಆಚರಣೆ,

"ಸಮಸಮಾಜ ಕಟ್ಟುವಲ್ಲಿ ಶರಣರ ಕೊಡುಗೆ ಅಪಾರ: ಶಿವಲಿಂಗ ಬೆಂಬುಳಗೆ"

ಕಮಲನಗರ: ಮೂಢನಂಬಿಕೆಗಳು, ಜಾತಿ ಪದ್ಧತಿ,್ಧಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜವನ್ನು ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಯುವಮುಖಂಡ ಶಿವಲಿಂಗ ಬೆಂಬುಳಗೆ ಅಭಿಪ್ರಾಯಿಸಿದರು. 

ಪಟ್ಟಣದಲ್ಲಿ ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. 

ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಚಿರಪರಿಚಿತವಾಗಿದೆ ಎಂದರು. 

ಶಾಲೆ ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಮಾತನಾಡಿ, 12ನೇ ಶತನಮಾನವು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಕ್ರಾಂತಿ ಉಂಟುಮಾಡಿದೆ. ಇವತ್ತಿನ ನಮ್ಮ ಸಂವಿಧಾನದ ಪಾರ್ಲಿಮೆಂಟ್ ಮಾದರಿಯಲ್ಲಿ ಅಂದಿನ ಅನುಭವ ಮಂಟಪ ಇತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ಸಮಾನತೆಯ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ ಎಂದು ಹೇಳಿದರು. 

ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿದೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದು ತಿಳಿಸಿದರು. 

ಮುಖ್ಯಶಿಕ್ಷಕ ಬಾಲಾಜಿ ಸೂರ್ಯವಂಶಿ, ಮುಖ್ಯಶಿಕ್ಷಕ ಕಿಶನ ಗಾಯಕವಾಡ್, ಶಿಕ್ಷಕ ಶೇಕ್ ಇಜಾಜ್, ಮಲ್ಲಿಕಾರ್ಜುನ ಸೆಳಕೆ, ದ್ವಿತೀಯ ದರ್ಜೆ ಸಹಾಯಕ ಅಧಿಕಾರಿ ಅಶೋಕ ಮೇತ್ರೆ, ಪ್ರಕಾಶ ಮಿಸ್ತ್ರಿ ಮತ್ತು ಶಿಕ್ಷಕ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.