ಗುರುಪೂರ್ಣಿಮೆ ಪ್ರಯುಕ್ತ ಸಪ್ತ ನೇಕಾರರ ಸೇವಾ ಸಂಘದಲ್ಲಿ ಗುರುಪೂಜ್ಯೋತ್ಸವ

ಗುರುಪೂರ್ಣಿಮೆ ಪ್ರಯುಕ್ತ ಸಪ್ತ ನೇಕಾರರ ಸೇವಾ ಸಂಘದಲ್ಲಿ ಗುರುಪೂಜ್ಯೋತ್ಸವ
ಕಲಬುರಗಿ, ಜು. 10:ನಗರದ ಸಪ್ತ ನೇಕಾರರ ಸೇವಾ ಸಂಘದ ಕಚೇರಿಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಗುರುಪೂಜ್ಯೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ಜರಗಿತು. ಸಂಜೆ 7 ಗಂಟೆಗೆ ನಡೆದ ಈ ಕಾರ್ಯಕ್ರಮದಲ್ಲಿ ತೊಗಟವೀರ ಕ್ಷತ್ರಿಯ ಸಮುದಾಯದ ಕುಲಗುರು ಶ್ರೀ ಶ್ರೀ ಶ್ರೀ ಪುಷ್ಪಾಂಡಜ ಮಹಾಋಷಿ ಹಾಗೂ ನೇಕಾರರ ಧರ್ಮಗುರು ಸದ್ಗುರು ದಾಸಿಮಯ್ಯ ಹಾಗೂ ಏಕೋರಾಮರಾದ್ಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ನಮನ ಅರ್ಪಿಸಲಾಯಿತು.
ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲಪುರ ಅವರ ನೇತೃತ್ವದಲ್ಲಿ ಡಾ. ಬಸವರಾಜ್ ಚೆನ್ನಾ ಪ್ರಾರ್ಥನೆಯ ಮೂಲಕ ಆರಂಭಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಶ್ರೀ ಶಿವಲಿಂಗಪ್ಪ ಅಷ್ಟಗಿ ವಹಿಸಿದ್ದರು.
ಅತಿಥಿಗಳ ಭಾಷಣ:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, “ಯಾರು ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಾರೆ, ಅವರಿಗೆ ಫಲ ತಡವಾದರೂ ಖಂಡಿತ ದೊರೆಯುತ್ತದೆ,”ಎಂದು ಅಭಿಪ್ರಾಯಪಟ್ಟರು.
ವಿಶೇಷ ಸನ್ಮಾನ:ಈ ಸಂದರ್ಭದಲ್ಲಿ 2025ರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡುವ *ವಚನ ಪಿತಾಮಹ ಡಾ. ಫಕೀರಪ್ಪ ಗುರಪ್ಪ ಹಳಕಟ್ಟಿ ಪ್ರಶಸ್ತಿಗೆ* ಭಾಜನರಾದ ಶ್ರೀ ಶಿವಲಿಂಗಪ್ಪ ಅಷ್ಟಗಿ ಅವರನ್ನು ಸಂಘದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
:ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಕೋಟೆ ಮಲ್ಲಿಕಾರ್ಜುನ ರಾಜಾಪುರ, ಜಿಲ್ಲಾ ಕುರವಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ ಕರದಳ್ಳಿ, ಖಜಾಂಚಿ ಮಲ್ಲಿಕಾರ್ಜುನ ಕುಂಟೋಜಿ, ಛಾಯಾಗ್ರಾಹಕ ರಾಜು ಕೋಷ್ಟಿ, ಚಿಂತಕ ಘನಾತೆ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅಂತಿಮವಾಗಿ ನ್ಯಾಯವಾದಿ ಜೆ.ಎಸ್. ವಿನೋದಕುಮಾರ್ ಧನ್ಯವಾದಗಳು ಅರ್ಪಿಸಿದರು.