ಬೇವೆಂಬುದು ಬೆಲ್ಲವಾಗಲಿ

ಬೇವೆಂಬುದು ಬೆಲ್ಲವಾಗಲಿ

ಬೇವೆಂಬುದು ಬೆಲ್ಲವಾಗಲಿ

ಕಹಿಯ ಬೇವು ಕರಗಿ

ಸಿಹಿಯ ಬೆಲ್ಲವಾಗಲಿ

ದ್ವೇಶವೆಂಬ ಬೇವು ಮರೆತು

ಪ್ರೀತಿಯೆಂಬ ಬೆಲ್ಲವಾಗಲಿ

ಅಜ್ಞಾನವೆಂಬ ಬೇವು ತಿದ್ದಿ

ಜ್ಞಾನವೆಂಬ ಬೆಲ್ಲವಾಗಲಿ

ಚಿಂತೆಯೆಂಬ ಬೇವು ಮರೆತು

ಚೈತನ್ಯವೆಂಬ ಬೆಲ್ಲವಾಗಲಿ

ಸಮಸ್ಯೆಯೆಂಬ ಬೇವಿಗೆ

ಉತ್ತರವೆಂಬ ಬೆಲ್ಲ ಸಿಗಲಿ

ಸೋಲೆಂಬ ಬೇವು ಸೋತು 

ಗೆಲುವೆಂಬ ಬೆಲ್ಲವಾಗಲಿ

ನೋವೆಂಬ ಬೇವು ಮರೆಯಾಗಿ

ನಲಿವೆಂಬ ಬೆಲ್ಲ ಹರಡಲಿ

ದುಃಖವೆಂಬ ಬೇವು ಅಳಿದು 

ಸುಖವೆಂಬ ಬೆಲ್ಲ ಬರಲಿ

ಜಗತ್ತಿನ ಅದೇಷ್ಟೋ ಬೇವು 

ಹೀಗೆಯೇ ಬೆಲ್ಲವಾಗಿಬಿಡಲಿ

ಬೇವಿನಲ್ಲಿಯ ಬೆಲ್ಲವು

ಎಲ್ಲರಿಗೂ ಸಿಗುವಂತಾಗಲಿ

ಎಚ್ ಜಿ ಸಂಗೀತಾ ಮಠಪತಿ(ರಾಮಭಕ್ತೆ)