ಸೆ.18. ಹೈದರಾಬಾದ್ ನಿಜಾಮ್ ಪತನದ ದಿನವನ್ನು ಕಲ್ಯಾಣ ಕರ್ನಾಟಕ ಮರು ಸ್ವಾತಂತ್ರ್ಯ ದಿನ ಎಂದು ಆಚರಿಸಲು : ನ್ಯಾಯವಾದಿ ಜೇನೆವರಿ ಆಗ್ರಹ

ಸೆ.18. ಹೈದರಾಬಾದ್ ನಿಜಾಮ್ ಪತನದ ದಿನವನ್ನು ಕಲ್ಯಾಣ ಕರ್ನಾಟಕ ಮರು ಸ್ವಾತಂತ್ರ್ಯ ದಿನ ಎಂದು ಆಚರಿಸಲು : ನ್ಯಾಯವಾದಿ ಜೇನೆವರಿ ಆಗ್ರಹ
ಕಲಬುರಗಿ, ಸೆಪ್ಟೆಂಬರ್ 11: 1948 ರ ಸೆಪ್ಟೆಂಬರ್ 18 ರಂದು ನಡೆದ ಹೈದರಾಬಾದ್ ನಿಜಾಮ್ ಪತನ ಹಾಗೂ ಹೈದರಾಬಾದ್ ರಾಜ್ಯವನ್ನು ಭಾರತದೊಳಗಿನ ವಿಲೀನ ದಿನಾಂಕವನ್ನು ಅಧಿಕೃತವಾಗಿ “ಮರು ಸ್ವಾತಂತ್ರ್ಯ ದಿನ” ಅಥವಾ “Liberation Day” ಎಂದು ರಾಜ್ಯ ಹಬ್ಬವಾಗಿ ಘೋಷಿಸಿ, ಈ ಭಾಗಕ್ಕೆ ಸಾರ್ವಜನಿಕ ರಜೆ ನೀಡುವಂತೆ ಸರ್ಕಾರಕ್ಕೆ ತೀವ್ರ ಒತ್ತಾಯ ವ್ಯಕ್ತವಾಗಿದೆ.
ನ್ಯಾಯವಾದಿ ಜೇ.ಎಸ್. ವಿನೋದ ಕುಮಾರ, ಪ್ರಧಾನ ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿ (ರಿ), ಕಲಬುರಗಿಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ:
“ಸರ್ಕಾರವು ಸ್ವಯಂ ಯೋಚನೆ ಮೂಲಕ ತ್ವರಿತವಾಗಿ, ಹೈದರಾಬಾದ್ ನಿಜಾಮ್ ಪತನಗೊಂಡ ಇತಿಹಾಸವನ್ನು ಅವಲೋಕಿಸಿ, ಸರಿಯಾದ ದಿನಾಂಕವನ್ನು ಸರಿಪಡಿಸಿ, ಸೂಕ್ತ ತಿದ್ದುಪಡಿಗಾಗಿ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ Ph.D. ಪಡೆದ ಇತಿಹಾಸಜ್ಞರು, ಪ್ರಜ್ಞಾವಂತರು ಹಾಗೂ ಪ್ರಗತಿಪರರು ಒಟ್ಟಾಗಿ ಒತ್ತಡ ಹೇರುವ ಸಮಯ ಬಂದಿದೆ” ಎಂದು ಅವರು ಹೇಳಿದರು.
ನೈಜ ಇತಿಹಾಸದ ಹಿನ್ನೆಲೆ ಭಾರತ ಸ್ವಾತಂತ್ರ್ಯ ಪಡೆದ ನಂತರವೂ, ಹೈದರಾಬಾದ್ ನಿಜಾಮ್ ಮೀರ ಓಸಮಾನ್ ಅಲಿಖಾನ್ ಸ್ವಾಯತ್ತ ರಾಜ್ಯವಾಗಿ ಉಳಿಯಲು ಪ್ರಯತ್ನಿಸಿದನು. ಆದರೆ ರಾಜ್ಯದೊಳಗಿನ ರಜಾಕಾರರ ಹಿಂಸೆ, ರಾಜಕೀಯ ಅಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯ ಹಿನ್ನಲೆಯಲ್ಲಿ, ಭಾರತ ಸರ್ಕಾರವು 1948 ರ ಸೆಪ್ಟೆಂಬರ್ 13 ರಂದು Operation Polo (Police Action) ಕೈಗೊಂಡಿತು. ಕೇಲವೇ ದಿನಗಳ ಯುದ್ಧದ ಬಳಿಕ, ಸೆಪ್ಟೆಂಬರ್ 18 ರಂದು ನಿಜಾಮ್ ಸರಕಾರ ತನ್ನ ಶಕ್ತಿ ಮೋಟಕು ಗೊಳಿಸಿ ಭಾರತ ಸರಕಾರಕ್ಕೆ ರಾಜ್ಯ ವಿಲೀನ ಗೊಳಿಸಲು ಸಮರ್ಪಿಸಿದರು. ಇದರಿಂದ ಹೈದರಾಬಾದ್ ರಾಜ್ಯವು ಅಧಿಕೃತವಾಗಿ ಭಾರತದ ಅಂಗವಾಗಿತು ಎಂದು ಅಧಿಕೃತ ಗೆಜೆಟ್ ದಾಖಲೆ ಇದೆ
“ಮೊದಲ ಆದ್ಯತೆ ಮೇರೆಗೆ ಕಲ್ಯಾಣ ಕರ್ನಾಟಕದ ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯ ಶಾಸಕರು ಹಾಗೂ ಸಚಿವ ಸಂಪುಟದ ಸದಸ್ಯರು ಈ ವಿಷಯವನ್ನು ಒಗ್ಗಟ್ಟಿನ ಧ್ವನಿಯಲ್ಲಿ ಅವಲೋಕಿಸಿ, ಸಭೆಯಲ್ಲಿ ದಿನಾಂಕ ತಿದ್ದುಪಡಿ ಮಾಡಿ ಕ. ಕ. ಉತ್ಸವ ಆಚರಿಸಲು ಆಗ್ರಹಿಸುತ್ತೇವೆ” ಎಂದು ಜೇ. ವಿನೋದ ಕುಮಾರ ತಿಳಿಸಿದರು.
ಅವರು ಮುಂದುವರೆದು, “ಈ ನೆಲದಲ್ಲಿ ರಾಷ್ಟ್ರದ ಹಬ್ಬದಂತೆ ಈ ದಿನವನ್ನು ರಾಜ್ಯ ಹಬ್ಬವನ್ನಾಗಿ ಘೋಷಿಸಿ, ಸಾರ್ವಜನಿಕ ರಜೆ ನೀಡಬೇಕು. ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಈ ಭಾಗದ ಹೋರಾಟಗಾರರ ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯಬೇಕು. ಇದಕ್ಕೆ ಸರ್ಕಾರ ತನ್ನ ತಪ್ಪು ದಿನಾಂಕ ವನ್ನು ತಿದ್ದುಪಡಿಯ ಮೂಲಕ ಹೊಸ ಗೆಜೆಟ್ ಆದೇಶ ಹೊರಡಿಸಬೇಕಾಗಿದೆ” ಎಂದು ಒತ್ತಾಯಿಸಿದರು.
ಇತಿಹಾಸ ತಜ್ಞರು, ಸಂಶೋಧಕರು, ಪ್ರಗತಿಪರ ಸಂಘಟನೆಗಳು ಹಾಗೂ ಸ್ಥಳೀಯ ಹೋರಾಟ ಸಮಿತಿಗಳು ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಜಾಗ್ರತಿ ಸಮಿತಿ ಮನವಿ ಮಾಡಿದೆ.