ಕುಟುಂಬ ರಾಜಕಾರಣ ಕಾಂಗ್ರೆಸ್ಸಿಗೆ ಪುರಸ್ಕಾರ ಬಿಜೆಪಿ ಜೆಡಿಎಸ್ ಗೆ ತಿರಸ್ಕಾರ.
ಕುಟುಂಬ ರಾಜಕಾರಣ ಕಾಂಗ್ರೆಸ್ಸಿಗೆ ಪುರಸ್ಕಾರ ಬಿಜೆಪಿ ಜೆಡಿಎಸ್ ಗೆ ತಿರಸ್ಕಾರ.
ಇತ್ತೀಚಿಗೆ ನಡೆದ ಉಪಚುನಾವಣೆಯ ಫಲಿತಾಂಶವನ್ನು ಗಮನಿಸಿದಾಗ ಮತದಾರರು ಕುಟುಂಬ ರಾಜಕಾರಣವನ್ನು ಕುರಿತು ಅಚ್ಚುಕಟ್ಟಾಗಿ ವಿಶ್ಲೇಷಣೆ ಮಾಡಿದ್ದಾರೆ ಕಾಂಗ್ರೆಸ್ಸಿಗೆ ಪುರಸ್ಕಾರ ನೀಡಿ ಬಿಜೆಪಿ ಮತ್ತು ಜೆಡಿಎಸ್ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಯಾಕೆ ಹೀಗೆ ಎಂಬುದರ ಹಿಂದೆ ಬಹುದೊಡ್ಡ ರಾಜಕೀಯ ಷಡ್ಯಂತರ ಮತ್ತು ಕಾರಣವಿದೆ ಕಾಂಗ್ರೆಸ್ ಪಕ್ಷ ತ್ಯಾಗ ಸೇವೆ ಬಲಿದಾನದಿಂದ ತನ್ನ ಅಸ್ತಿತ್ವವನ್ನುಇಂ ದಿಗೂ ಉಳಿಸಿಕೊಂಂಡು ಬಂದಿದೆ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ನೆಹರು ಮನೆತನದವರು ಅಲಹಾಬಾದ್ ಯಮುನಾ ನದಿಯ ದಂಡಿಯ ಮೇಲಿನ ಅವರ ಮನೆ ಆನಂದ ಭವನ ಸ್ವಾತಂತ್ರ್ಯ ವೀರ ಯೋಧರಿಗೆ ವಾಸಿಸಲು ಮತ್ತು ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಅನುಕೂಲ ಮಾಡಿಕೊಟ್ಟರು ಈ ಒಂದು ತ್ಯಾಗ ಸೇವೆಯ ಪ್ರತಿಫಲವಾಗಿ ನೆಹರು ಮನೆತನದವರು ದೇಶ ಸ್ವತಂತ್ರಗೊಳಿಸಲು ತ್ಯಾಗ ಮಾಡಿದ ಅವರ ಮನೆಗೆ ಪ್ರತಿಯಾಗಿ ಅಂದರೆ ದೇಶದ ಒಳಿತಿಗಾಗಿ ತಮ್ಮ ಮನೆಯನ್ನು ನೀಡಿದಕ್ಕಾಗಿ ಭಾರತದ ಜನತೆ ಇಡೀ ದೇಶವನ್ನೇ ಅವರ ಮನೆತನಕ್ಕೆ ನೀಡಿದ್ದಾರೆ ಎಂಬ ಮಾತನ್ನು ನಾವು ಒಪ್ಪಿಕೊಳ್ಳಬೇಕು ಅದಕ್ಕಾಗಿ ನೆಹರು ಅವರನ್ನು ಈ ದೇಶದ ಮೊದಲ ಪ್ರಧಾನಿಯನ್ನಾಗಿ ಮಾಡಲಾಯಿತು. ನಂತರ ಅವರ ಮಗಳು ಇಂದಿರಾಜಿಯವರಿಗೆ ಪ್ರಧಾನಿಯನ್ನು ಮಾಡಲಾಯಿತು ತದನಂತರ ರಾಜೀವ್ ಗಾಂಧಿ ಅವರನ್ನು ಪ್ರಧಾನಿ ಮಾಡಲಾಯಿತು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿ ಇಡೀ ದೇಶದ ಪ್ರಧಾನಿ ಸೋನಿಯಾ ಗಾಂಧಿ ಎಂಬುದನ್ನು ಎರಡು ಅವಧಿಗಳಿಗೆ ತೋರಿಸಿಕೊಟ್ಟರು ಮುಂದೆ ಇತ್ತೀಚಿನ ದಿನಗಳಲ್ಲಿ ಸೋನಿಯಾ ಗಾಂಧಿಯವರನ್ನು ರಾಜ್ಯಸಭೆಯಿಂದ ರಾಹುಲ್ ಗಾಂಧಿಯವರನ್ನು ಲೋಕಸಭೆಯಿಂದ ಮತ್ತೆ ಪ್ರಿಯಾಂಕ ಗಾಂಧಿ ಅವರನ್ನು ವೈಯನಾಡು ಲೋಕಸಭೆಯಿಂದ ಆಯ್ಕೆ ಮಾಡಿ ಕಳುಹಿಸಲಾಗಿದೆ ಮೂರು ಜನರು ದೆಹಲಿ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ ಮತ್ತು ಪ್ರಭಾವಶಾಲಿಯಾಗಿದ್ದಾರೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ವರ್ಚಸ್ ಪೂರ್ಣವಾಗಿ ಬೆಳೆಸುವ ದಿಶೆಯಲ್ಲಿ ಮೂವರು ಸಮರ್ಪಿತರಾಗಿ ಕೆಲಸ ಮಾಡುತ್ತಿದ್ದಾರೆ ಇದು ಈ ದೇಶ ನೆಹರು ಮನೆತನಕ್ಕೆ ನೀಡಿದ ಗೌರವ ಮಹಾತ್ಮ ಗಾಂಧಿ ಮತ್ತು ನೆಹರು ಅವರ ಪರಂಪರೆಯನ್ನು ಕಾಂಗ್ರೆಸ್ ಪಕ್ಷ ಮುಂದುವರಿಸಿಕೊಂಡು ಬರುತ್ತಿದೆ ಅವರ ಋಣವನ್ನು ತೀರಿಸಲು ಈ ಕೆಲಸ ನಡೆಯುತ್ತಿದೆಯೋ ಅಥವಾ ಅವರ ಕುಟುಂಬದ ಹಿರಿಯರು ಮಾಡಿದ ತ್ಯಾಗ ಸೇವೆ ಬಲಿದಾನಕ್ಕೆ ಗೌರವ ಸಲ್ಲಿಸುತ್ತಿದೆಯೊ ಎಂಬುದು ನಮಗೆ ಇಂದಿಗೂ ಕೂಡ ಒಂದು ಪ್ರಶ್ನಾರ್ಥಕವಾಗಿ ಉಳಿದಿದೆ ಇತ್ತೀಚಿಗೆ ಕರ್ನಾಟಕ ಮತ್ತು ಕೇರಳದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಕುಟುಂಬ ರಾಜಕೀಯವನ್ನು ವಿರೋಧಿಸುತ್ತಿದ್ದ ಮೋದಿ ಅವರಿಗೆ ಮುಖಭಂಗವಾಗಿದೆ ಅವರಿಗೆ ಮತ್ತೊಮ್ಮೆ ಆ ವಿಷಯವನ್ನು ಪ್ರಸ್ತಾಪಿಸದಂತೆ ಮಾತನಾಡದಂತೆ ಮತದಾರರು ಬಾಯಿಗೆ ಬೀಗ ಜಡದಿದ್ದಾರೆ ಯಾಕೆಂದರೆ ಕರ್ನಾಟಕದ ಉಪಚುನಾವಣೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರ ಮಗ ಭರತನಿಗೆ ಟಿಕೆಟ್ ನೀಡಿದ್ದು ಮಿತ್ರ ಪಕ್ಷವಾದ ಜೆಡಿಎಸ್ಸಿಗೆ ಕುಮಾರಸ್ವಾಮಿ ಅವರ ಮಗ ನಿಖಿಲಗೆ ಟಿಕೆಟ್ ನೀಡಿದ್ದು ಜನ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಅಷ್ಟೇ ಅಲ್ಲ ಯಡಿಯೂರಪ್ಪನವರ ಮಗ ಎಂಬ ಕಾರಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ನೀಡಿ ಯುವಕನ ಕೈಗೆ ರಾಜ್ಯದ ದೊಡ್ಡ ಹುದ್ದೆಯನ್ನು ಕೊಟ್ಟಿದ್ದು ಜನ ಒಪ್ಪಿಕೊಂಡಿಲ್ಲವೆಂಬುದನ್ನು ಈ ಚುನಾವಣೆಯಿಂದ ತೋರಿಸಿಕೊಟ್ಟಿದ್ದಾರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇನ್ನಾದರೂ ಕೂಡ ಕುಟುಂಬ ರಾಜಕಾರಣವನ್ನು ಬಿಟ್ಟು ತಮ್ಮ ಹೆಂಡತಿ ಮಕ್ಕಳು ಶಾಸಕ ಸಚಿವರನ್ನಾಗಿ ಮಾಡುವುದನ್ನು ಬಿಟ್ಟು ಕಾರ್ಯಕರ್ತರನ್ನು ಬೆಳೆಸುವಂತಹ ಕೆಲಸ ಮಾಡಬೇಕು ಇಲ್ಲದಿದ್ದರೆ ಭಸ್ಮಾಸುರನಂತೆ ತಮ್ಮ ತಲೆಯ ಮೇಲೆ ತಾವೇ ಕೈ ಇಟ್ಟುಕೊಂಡು ನಾಶವಾಗುತ್ತಾರೆ ಈ ಕೆಲಸವನ್ನು ಈಗಲಾದರೂ ಈ ಎರಡು ಪಕ್ಷಗಳು ಮಾಡುವುದರ ಮೂಲಕ ಮೋದಿ ಅವರ ಮರ್ಯಾದೆಯನ್ನು ಉಳಿಸಬೇಕು ಮೋದಿ ಒಬ್ಬ ತ್ಯಾಗಿ ಒಬ್ಬ ಯೋಗಿ ಒಬ್ಬ ಮಹಾನ್ ರಾಜಕೀಯ ಸಂತ ಅವತಾರಿ ಪುರುಷ ಅವರ ಹೆಸರಿನಲ್ಲಿ ರಾಜಕೀಯ ಮಾಡಿ ತಮ್ಮ ಸ್ವಾರ್ಥದ ಬೇಳೆಯನ್ನು ಬೇಯಿಸಿಕೊಳ್ಳುವವರು ಈಗಲಾದರೂ ಮೋದಿ ಅವರು ಮುಜುಗರಕ್ಕೆ ಒಳಗಾಗದಂತೆ ಮಾಡಬೇಕಾದದ್ದು ಅವರ ಕರ್ತವ್ಯವಾಗಿದೆ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ಸಿನ ನೆರಳಿನಂತೆ ಕುಟುಂಬ ರಾಜಕಾರಣವನ್ನು ಬೆಳೆಸುವ ದಿಶೆಯಲ್ಲಿ ಮತ್ತು ಸ್ವಾರ್ಥ ಸಾಧನೆಗಾಗಿ ಶ್ರಮಿಸುವ ದಿಸೆಯಲ್ಲಿ ಕೆಲಸ ಮಾಡಬಾರದು ಆರೆಸ್ಸೆಸ್ ಸಂಘಪರಿವಾರ ಭಜರಂಗದಳ ವಿ ಎಚ್ ಪಿ ಇವೆಲ್ಲ ದೇಶವನ್ನು ಕಟ್ಟುವುದಕ್ಕಾಗಿ ಹುಟ್ಟಿದ ಸಂಘ ಸಂಸ್ಥೆಗಳು ಪ್ರಗತಿ ಸುಧಾರಣೆ ಬದಲಾವಣೆ ತರುವುದರ ಮೂಲಕ ವಿಶ್ವದಲ್ಲಿ ಹಿಂದೂಸ್ತಾನ್ ಗುರು ಆಗುವ ಕನಸು ಕಂಡಂತಹ ಸಂಘಟನೆಗಳು ಇದರಲ್ಲಿ ಭಾರತೀಯ ಜನತಾ ಪಕ್ಷದ ರಾಜಕೀಯ ಗಣ್ಯರು ತಮ್ಮ ಸ್ವಾರ್ಥ ಸಾಧನೆಗಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ಈಗ ಸಿದ್ಧವಾಗಿದೆ ಎಂಬುದು ಜನರ ಅರಿವಿಗೆ ಬರದಂತೆ ನಡೆದುಕೊಳ್ಳಬೇಕು ತಿದ್ದಿಕೊಳ್ಳಬೇಕು ಬುದ್ಧಿಯನ್ನು ಸುಧಾರಿಸಿಕೊಳ್ಳಬೇಕು ಇಲ್ಲದಿದ್ದರೆ ಕಾಂಗ್ರೆಸ್ಸಿನಂತೆ ಇಲ್ಲಿಯೂ ಕೂಡ ಬಣ ರಾಜಕೀಯ ಗುಂಪುಗಾರಿಕೆ ಜಾತೀಯತೆ ಸ್ವಜನ ಪಕ್ಷಪಾತ ಹೆಚ್ಚಾಗಿ ತನ್ನಷ್ಟಕ್ಕೆ ತಾನೇ ಕುಸಿದು ಬೀಳುವ ಸಾಧ್ಯತೆ ಇದೆ ಬಿಜೆಪಿ ಅವರನ್ನು ನಾಶಪಡಿಸಲು ಈಗ ಮತ್ತಾರು ಬೇಕಾಗಿಲ್ಲ ಅವರಲ್ಲಿರುವ ಗುಂಪುಗಳು ಪರಸ್ಪರ ಹೊಡೆದಾಡಿ ಬೈದಾಡಿ ಬೀದಿಗೆ ಬಂದು ರಂಪ ಮಾಡಿ ತಮ್ಮ ಮಾನ ಮರ್ಯಾದೆ ತಾವೇ ಕಳೆದುಕೊಳ್ಳುವ ಕೆಟ್ಟ ಪರಿಸ್ಥಿತಿಗೆ ಹೋಗುತ್ತಿದ್ದಾರೆ ಇದು ಆರೋಗ್ಯಕರವಾದ ಬೆಳವಣಿಗೆ ಅಲ್ಲ ಒಂದು ಕಡೆ ಯಡಿಯೂರಪ್ಪನವರ ಗುಂಪು ಇನ್ನೊಂದು ಕಡೆ ಬಸನಗೌಡ ಪಾಟೀಲ್ ಯತ್ನಾಳರ ಗುಂಪು ಸ್ಪಷ್ಟವಾಗಿ ಗೋಚರವಾಗುತ್ತಿದೆ ಮುಂದಿನ ದಿನಗಳಲ್ಲಿ ನಮ್ಮ ತಂಡದವರೇ ಮುಖ್ಯಮಂತ್ರಿಯಾಗುತ್ತಾರೆ ಮತ್ತು ಮುಂಬರುವ ಚುನಾವಣೆಯಲ್ಲಿ ಜನ ಕಾಂಗ್ರೆಸ್ಸನ್ನು ತಿರಸ್ಕರಿಸಿ ಬಿಜೆಪಿಯನ್ನು ಪುರಸ್ಕರಿಸಬೇಕಾದರೆ ಶಾಸಕ ಸ್ಥಾನದ ಅಭ್ಯರ್ಥಿಗಳಿಗೆ ನೀಡುವ ಟಿಕೆಟು ಅಧಿಕಾರ ನಮ್ಮ ಕೈಯಲ್ಲಿ ಇರುತ್ತದೆ ಎಂದು ಬಸನಗೌಡರು ಹೇಳುವುದರ ಮೂಲಕ ಈಗಿರುವ ಅಧ್ಯಕ್ಷರಿಗೆ ಮತ್ತು ರಾಜ್ಯದ ಬಿಜೆಪಿಗೆ ಸವಾಲು ಹಾಕಿದ್ದಾರೆ ಹೈಕಮಾಂಡ್ನಲ್ಲಿ ಒಂದು ಗುಂಪು ಇವರ ಬೆಂಬಲಕ್ಕೆ ನಿಂತಿದೆ ಎಂಬುದು ಸ್ಪಷ್ಟವಾಗುತ್ತಿದೆ ಮತ್ತು ಒಬ್ಬ ಲಿಂಗಾಯತ ರಾಜಕಾರಣಿಯನ್ನು ದಮನ ಮಾಡಲು ಇನ್ನೊಬ್ಬ ಲಿಂಗಾಯತ ರಾಜಕಾರಣಿಯನ್ನು ಹುಟ್ಟು ಹಾಕಿ ಬೆಳೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ತಿಳಿಯದಂತಾಗಿದೆ ಹೈಕಮಾಂಡ್ ಕೂಡಲೇ ಇದನ್ನು ಗಮನಿಸಿ ಆಪರೇಷನ್ ಮಾಡದಿದ್ದರೆ ಮುಂದೆ ಪಕ್ಷದಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆದು ನಿಲ್ಲುತ್ತದೆ ಎಂಬುದು ಮತ್ತು ಬಿಜೆಪಿ ಅವಸಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ರಾಷ್ಟ್ರ ನಾಯಕರು ಅರಿತುಕೊಳ್ಳಬೇಕು ಕರ್ನಾಟಕದಲ್ಲಿನ ಬಿಜೆಪಿ ವರ್ಚಸ್ ಅಧಿಕವಾಗಬೇಕಾದರೆ ಮತ್ತು ಪುನಃ ಮುಂದಿನ ದಿನಗಳಲ್ಲಿ ಅಧಿಕಾರ ಪಡೆದುಕೊಳ್ಳಬೇಕಾದರೆ ಏನು ಮಾಡಬೇಕೆಂಬುದು ಎಲ್ಲರೂ ಕುಳಿತು ಚರ್ಚಿಸಬೇಕು ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಒಂದಾಗಿ ಚೆಂದಾಗಿ ಬಾಳಿ ಬದುಕಬೇಕೆಂದು ಈ ಮಾತನ್ನು ಯಡಿಯೂರಪ್ಪನವರು ಕೂಡ ಪುನರ್ ಉಚ್ಚರಿಸಿದ್ದಾರೆ ಎಲ್ಲರೂ ಕುಳಿತು ಮಾತನಾಡಬೇಕಿದೆ ಕರ್ನಾಟಕದ ಉಪಚುನಾವಣೆಯಲ್ಲಿ ಮೂರು ಸ್ಥಾನಗಳು ಕಳೆದುಕೊಂಡ ಬಿಜೆಪಿ ಯಡಿಯೂರಪ್ಪ ವಿಜೇಂದ್ರ ಕಾರಣವೆಂದು ಹೇಳಬಾರದೆಂದು ಸ್ಪಷ್ಟವಾದ ಸಂದೇಶವನ್ನು ಮಾಧ್ಯಮದ ಮೂಲಕ ತಿಳಿಸಿದ್ದಾರೆ ಆ ಕೆಲಸ ಹೈಕಮಾಂಡ್ ಈಗ ಮಾಡಬೇಕಾದ ತುರ್ತು ಅಗತ್ಯವಾಗಿದೆ
-ಪ್ರೊ ಶಿವರಾಜ್ ಪಾಟೀಲ್ ಚಿಂತಕರು ಹಾಗೂ ರಾಜಕೀಯ ವಿಶ್ಲೇಷಕರು ಕಲ್ಬುರ್ಗಿ