ಕಲಬುರಗಿಯಲ್ಲಿ ಭವ್ಯ ಗಣೇಶ ಸಾರ್ವಜನಿಕ ವಿಸರ್ಜನೆ ಸಮಾರಂಭ

ಕಲಬುರಗಿಯಲ್ಲಿ ಭವ್ಯ ಗಣೇಶ ಸಾರ್ವಜನಿಕ ವಿಸರ್ಜನೆ ಸಮಾರಂಭ

ಕಲಬುರಗಿಯಲ್ಲಿ ಭವ್ಯ ಗಣೇಶ ಸಾರ್ವಜನಿಕ ವಿಸರ್ಜನೆ ಸಮಾರಂಭ

ಕಲಬುರಗಿ : ಕಲಬುರಗಿ ಗಣೇಶ ಮಹಾ ಮಂಡಳ ವತಿಯಿಂದ ನಗರದ ಚೌಕ್ ಪೊಲೀಸ್ ಠಾಣೆ ಎದುರಿನಲ್ಲಿ ಶನಿವಾರ ರಾತ್ರಿ ಗಣೇಶ ಸಾರ್ವಜನಿಕ ವಿಸರ್ಜನೆ ಸಮಾರಂಭವನ್ನು ಭವ್ಯವಾಗಿ ಆಯೋಜಿಸಲಾಯಿತು. ಸಮಾರಂಭವನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಂಡಳಿ ಕಾರ್ಯಾಧ್ಯಕ್ಷ ಶಶೀಲ ಜಿ. ನಮೋಶಿ, ಅಧ್ಯಕ್ಷ ಬಾಬುರಾವ ಜಹಾಗೀರದಾರ, ಉಪಾಧ್ಯಕ್ಷ ರಾಘವೇಂದ್ರ ಮೈಲಾಪೂರ, ಪ್ರಧಾನ ಕಾರ್ಯದರ್ಶಿ ಅಣವೀರ ಕಾಳಗಿ, ಸಹ ಕಾರ್ಯದರ್ಶಿ ಕಿರಣ್ ಚವ್ಹಾಣ್, ಸದಸ್ಯರಾದ ಸುಭಾಷ ಜಾಧವ್, ಸಿದ್ದರಾಮ ತಾಳಿಕೋಟಿ, ಶಿವಾನಂದ ತೋರವಿ, ನಾಗಣ್ಣ ಸರಡಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ನಗರದ ವಿವಿಧ ಗಣಪತಿ ಮೂರ್ತಿಗಳನ್ನು ಸಂಭ್ರಮಭರಿತ ಮೆರವಣಿಗೆಯ ಮೂಲಕ ಸಾಗಿಸಿ ಭಕ್ತಿ ಭಾವದಿಂದ ವಿಸರ್ಜಿಸಲಾಯಿತು. ಸಮಾರಂಭವು ಶಿಸ್ತುಬದ್ಧವಾಗಿ ಹಾಗೂ ಹರ್ಷೋಲ್ಲಾಸದಿಂದ ಜರುಗಿತು.