ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು
ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು
ಕಲಬುರಗಿ: ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೀರಪುರದಲ್ಲಿ ಸ್ಲಂ ಜನರ ಸಂಘಟನೆ ಕರ್ನಾಟಕ, ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಪ್ರಗತಿ ಅಭಿವೃದ್ಧಿ ಸಂಸ್ಥೆ ಇವುಗಳ ಸಂಯುಕ್ತಾ ಶ್ರಯದಲ್ಲಿ ಹಮ್ಮಿಕೊಂಡ 68ನೇ ಧಮ್ಮ ಚಕ್ರ ಪ್ರವರ್ತನ ದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ವಿಭಾಗಿಯ ಸಹ ನಿರ್ದೇಶಕರಾದ ಡಾ. ಅಂಬಾರಾಯ ಎಸ್. ರುದ್ರವಾಡಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಡಾ.ಸಂಧ್ಯಾ ಎಸ್.ಕಾನೇಕಾರ, ಪಾಲಿಕೆ ಸದಸ್ಯ ಅಲಿ ಮೂದ್ದಿನ್ ಪಟೇಲ್, ಸ್ಲಂ ಜನರ ಸಂಘಟನೆಯ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಮುಖಂರಾದ ಬ್ರಹ್ಮಾನಂದ ಮಿಂಚಾ, ಕರುಣಕುಮಾರ ಬಂಡಾರವಾಡ, ಶಿವಕುಮಾರ್ ಚಿಂಚೋಳಿ, ಕಿರಣಕುಮಾರ ತೆಲ್ಲೂರ, ಪಂಡಿತ್ ಬೈರಾಮಡಗಿ, ಅನುಪೂರ್ಣ ನಾಯ್ಕೋಡಿ, ಅರ್ಚನ, ಓಂಕಾರ, ಅನ್ನಪೂರ್ಣ ನಾಯ್ಕೋಡಿ, ಅರ್ಚನಾ, ಓಂಕಾರ್ ಬಡಾವಣೆಗೆ ಹಿರಿಯರು, ಶಿಬಿರದ ಫಲಾನುಭವಿಗಳು ಭಾಗವಹಿಸಿದ್ದರು. ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ತಮ್ಮ ನೇತ್ರ ತಪಾಸಣೆ ಮಾಡಿಕೋಂಡರು. ಇದರಲ್ಲಿ ಸುಮಾರು 38 ಜನರು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡರು.