ಗ್ವಾಲಿಯರ್‌ನಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ 22ನೇಸಂಸ್ಥಾಪನ ದಿನಾಚರಣೆ

ಗ್ವಾಲಿಯರ್‌ನಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ 22ನೇಸಂಸ್ಥಾಪನ ದಿನಾಚರಣೆ

ಗ್ವಾಲಿಯರ್‌ನಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ 22ನೇಸಂಸ್ಥಾಪನ ದಿನಾಚರಣೆ                                                            "ರೈತರಹೊಲಗಳೇಮುಂದಿನ ಸರ್ಕಾರದ ತೀರ್ಮಾನ ಕೇಂದ್ರ":ಮಹಾದೇವ್ ಜಾನಕರ್

                 ಕಲಬುರಗಿ : ರಾಷ್ಟ್ರೀಯ ಸಮಾಜ ಪಕ್ಷದ 22ನೇ ರಾಷ್ಟ್ರೀಯ ಸಮಾವೇಶದ ಸಮಾರೋಪ ಗ್ವಾಲಿಯರ್‌ನಲ್ಲಿ ದಿನಾಂಕ 29.08.2025 ರಂದು ಭವ್ಯವಾಗಿ ನೆರವೇರಿತು. ಮಧ್ಯಪ್ರದೇಶ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಸ್ತುವಾರಿ ಪ್ರಾಣ್ ಸಿಂಗ್ ಪಾಲ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಮಹಾರಾಣಾ ಪ್ರತಾಪ್, ಅಂಬೇಡ್ಕರ್, ಅಹಲ್ಯಾಬಾಯಿ ಹೋಳ್ಕರ್, ಸ್ವಾಮಿ ವಿವೇಕಾನಂದ, ರಾಣಿ ಲಕ್ಷ್ಮಿಬಾಯಿ ಮುಂತಾದ ವೀರರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಭವ್ಯ ಮೆರವಣಿಗೆಯಿಂದ ಸಮಾರಂಭ ಆರಂಭವಾಯಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕ, ತಮಿಳುನಾಡು, ದೆಹಲಿ, ರಾಜಸ್ಥಾನ, ಬಿಹಾರ, ತೆಲಂಗಾಣ, ಗುಜರಾತ್ ರಾಜ್ಯಗಳ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿರುತ್ತಾರೆ

ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಹಾದೇವ್ ಜಾನಕರ್ ತಮ್ಮ ಭಾಷಣದಲ್ಲಿ ಮಧ್ಯಪ್ರದೇಶದ ಕೃಷಿ, ಕೈಗಾರಿಕೆ, ನಿರುದ್ಯೋಗ, ಅಪೌಷ್ಟಿಕತೆ ಸಮಸ್ಯೆಗಳ ಬಗ್ಗೆ ತೀವ್ರ ಟೀಕೆ ನಡೆಸಿ, “ರೈತರಿಂದ ಹಾಗೂ ದೇಶದ ಮತದಾರರಿಂದ ಅಧಿಕಾರ ಬರಬೇಕು, ಆಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಸಾಧ್ಯ” ಎಂದು ಹೇಳಿದರು. 22 ವರ್ಷಗಳಿಂದ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಸಮಾಜ ಪಕ್ಷ ನಿರ್ಲಕ್ಷಿತ-ಶೋಷಿತ ಸಮಾಜಕ್ಕೆ ನ್ಯಾಯ ಒದಗಿಸುವ ಗುರಿ ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಆಚಾರ್ಯ ಮಹಾಂತ ರಾಜರಾಜೇಶ್ವರಿ ಗಿರಿ ಮಹಾರಾಜ್ ವಹಿಸಿದ್ದು, ದೀನಬಂಧು ದಾಸ್ ಮಹಾರಾಜ್, ಎಸ್.ಎಲ್. ಅಕ್ಕಿಸಾಗರ್, ಗೋವಿಂದರಾಮ್ ಸುರ್ನರ್, ಕುಮಾರ್ ಸುಶೀಲ್ ಅಜಿತ್ ಪಾಟೀಲ್, ಕರ್ನಾಟಕದಿಂದ ಶಿವಲಿಂಗಪ್ಪ ಜೋಗಿನ, ಸಿದ್ದರಾಜು ಕಿನ್ನೂರು, ಶರಣಬಸಪ್ಪ ದೊಡ್ಮನಿ, ಅಯ್ಯಪ್ಪ ಸಿಂದಗಿ, ದೇವೇಂದ್ರ ಕೆ. ಚಿಗರಳ್ಳಿ, ಶ್ರೀಮಂತ ಮಾವನೂರು, ಬಸವರಾಜ್ ಮುಕ್ಕಾ, ಮಾಂತೇಶ್ ದೊಡ್ಡಮನಿ, ರಮೇಶ್ ಶಾಬಾದಿ ಸೇರಿದಂತೆ ಹಲವರು ಭಾಗವಹಿಸಿದರು.

ಸಭೆಯಲ್ಲಿ ಕೃಷಿ, ಉದ್ಯೋಗ, ಉಚಿತ ಗುಣಮಟ್ಟದ ಶಿಕ್ಷಣ, ಕೈಗಾರಿಕೆ, ಆರೋಗ್ಯ, ಸಾಮಾಜಿಕ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಎಂಬ ಏಳು ಅಂಶಗಳ ಆಧಾರದ ಮೇಲೆ ಕ್ರಿಯಾ ಯೋಜನೆ ರೂಪಿಸಲಾಯಿತು.

ಆ.13ರಂದು ಅಹಲ್ಯಾದೇವಿ ಹೋಳ್ಕರ್ ಪುಣ್ಯತಿಥಿಯಿಂದ ಆರಂಭವಾದ ಸ್ವರಾಜ್ ಮಹಾರ‍್ಯಾಲಿ ಈ ಸಮಾರೋಪ ಸಮಾರಂಭದೊಂದಿಗೆ ಸಂಪನ್ನವಾಯಿತು.