ಸಂಭ್ರಮದ ಕನ್ನಡ ರಾಜ್ಯೋತ್ಸವ. ಆದೋನಿ
ಸಂಭ್ರಮದ ಕನ್ನಡ ರಾಜ್ಯೋತ್ಸವ.
ಆದೋನಿ; (ಆಂಧ್ರಪ್ರದೇಶ) ತಾಲೂಕಿನ ಹೊಳಗುಂದ ಮಂಡಲವಂದವಾಗಲಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು ಹೆಡ್ ಮಾಸ್ಟರ ಎಚ್.ವೈ.ಶೇಷಾದ್ರಿ ಶಿಕ್ಷಕರಾದ ಕಲಾಂ ಭಾಷಾ ಕೆ.ಜಂಬುನಾಥ ಎನ್ ಈರಣ್ಣ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾತೃಭಾಷೆ ಕನ್ನಡವಾಗಿದ್ದು ಕರ್ನಾಟಕದಿಂದ ದೂರ ಉಳಿದಿರುವುದು ನೋವಿನ ಸಂಗತಿ ಎಂದು ಕನ್ನಡ ಪರ ಹೋರಾಟಗಾರ ಹಾಗೂಕನ್ನಡ ಶಿಕ್ಷಕರಾದ ಜಂಬುನಾಥಯವರು ಆಂಧ್ರದಲ್ಲಿ ಕನ್ನಡ ಶಾಲೆಗಳು ಅಳಿವಿನ ಅಂಚಿನಲ್ಲಿದೆ ಈ ವಿಷಯವನ್ನು ಕರ್ನಾಟಕ ಸರ್ಕಾರಕ್ಕೆ ಹಲವು ಬಾರಿ ವಿನಂತಿ ಮಾಡಿಕೊಂಡರೂ ಕೂಡ ಕರ್ನಾಟಕ ಸರ್ಕಾರ ಆಂಧ್ರದ ಕನ್ನಡ ಶಾಲೆಯ ಉಳಿಯುವಿಗಾಗಿ ಮುಂದೆ ಬರುತ್ತಿಲ್ಲ. ಈಗಲಾದರೂ ಆಂಧ್ರದ ಕನ್ನಡ ವಿದ್ಯಾರ್ಥಿಗಳನ್ನು ಗಡಿನಾಡ ಕನ್ನಡ ವಿದ್ಯಾರ್ಥಿಗಳೆಂದು ಗುರುತಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ 5% ವೀಸಲಾತಿ ನೀಡಿದರೆ ಕನ್ನಡ ಶಾಲೆಗಳು ಉಳಿಯುತ್ತವೆ ಇಲ್ಲದಿದ್ದರೆ ಕನ್ನಡ ಶಾಲೆಗಳ ಅಳಿವು ಖಚಿತ ಎಂದು ತಮ್ಮ ನೋವು ವ್ಯಕ್ತಪಡಿಸಿದರು.