ಇಂದು ಅಂತರಾಷ್ಟ್ರೀಯ ಶಾಂತಿಯ ದಿನ ಶಾಂತಿಯುತ ಜಗತ್ತು ನಿರ್ಮಿಸುವುದು 2024 ಧೆಯ್ಯ
ಇಂದು ಅಂತರಾಷ್ಟ್ರೀಯ ಶಾಂತಿಯ ದಿನ ಶಾಂತಿಯುತ ಜಗತ್ತು ನಿರ್ಮಿಸುವುದು 2024 ಧೆಯ್ಯ
ನ್ಯೂಯಾರ್ಕ್ : ಪ್ರತಿವರ್ಷ ಸೆಪ್ಟೆಂಬರ್ 21ರಂದು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಶಾಂತಿ ದಿನ ಆಚರಿಸಲಾಗುತ್ತದೆ. ಈ ದಿನದಂದು 24 ಗಂಟೆ ಕಾಲ ಜಾಗತಿಕವಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಅಹಿಂಸೆ ಪಾಲಿಸುವುದು ಮತ್ತು ಕದನ ವಿರಾಮ ಆಚರಿಸುವ ಮೂಲಕ ಶಾಂತಿಯ ಆದರ್ಶಗಳನ್ನು ಬಲಪಡಿಸಲು ಮೀಸಲಿಡುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಘೋಷಿಸಿದೆ. ವಿಶ್ವಶಾಂತಿ ಎಂದರೆ ಕೇವಲ ಯುದ್ಧ ವಿರಾಮ ಮಾತ್ರವಲ್ಲ. ಯಾವುದೇ ಹಿಂಸಾಚಾರವಿಲ್ಲದೆ, ದೇಶಗಳ ನಡುವೆ ಪರಸ್ಪರ ಸಹಕಾರ, ಶಾಂತಿ ಕಾಪಾಡುವುದಾಗಿದೆ.
2024ರ ಧೆಯ್ಯವಾಕ್ಯ : ಈ ವರ್ಷದ ಧೈಯ 'ಶಾಂತಿಯುತ ಜಗತ್ತನ್ನು ನಿರ್ಮಿಸುವುದು' (Creating a Peaceful World) ಎಂದಾಗಿದೆ. ಜಾಗತಿಕ ಸಂಘರ್ಷ ಮತ್ತು ಸಾಮರಸ್ಯವನ್ನು ರೂಪಿಸುವಲ್ಲಿ ಮಾನವ ಪ್ರಜ್ಞೆಯ ಪಾತ್ರವನ್ನು ಇದು ಒತ್ತಿ ಹೇಳುತ್ತದೆ. ಶಾಂತಿಯುತ ಜಗತ್ತನ್ನು ಸಾಧಿಸಲು, ದೈಹಿಕ ಹಿಂಸೆ ನಿಲ್ಲಿಸಬೇಕು, ಸಹಿಷ್ಣುತೆ ಮತ್ತು ಪರಸ್ಪರ ಗೌರವಯುತ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಇದು ಸೂಚಿಸುತ್ತದೆ.