ಮುಗುಳನಾಗಾಂವ ಶ್ರೀಗಳ ಗುರುವಂದನಾ ಹಾಗೂ “ಮುಗುಳ್ನಗೆಯ ಮಂದಾರ” ಪ್ರಶಸ್ತಿ ಪ್ರದಾನ ಸಮಾರಂಭ
ಮುಗುಳನಾಗಾಂವ ಶ್ರೀಗಳ ಗುರುವಂದನಾ ಹಾಗೂ“ಮುಗುಳ್ನಗೆಯ ಮಂದಾರ” ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ : ಶಹಾಬಾದ್ ತಾಲೂಕಿನ ಮುಗುಳನಾಗಾಂವ ಗ್ರಾಮದ ಶ್ರೀ ಮಠದಲ್ಲಿ ಶನಿವಾರ ಸಾಯಂಕಾಲ 7-45ಕ್ಕೆ
ಜನೇವರಿ 25 ರಂದು ಪೂಜ್ಯರಿಗೆ 48ನೇ ವರ್ಷದ ಜನ್ಮದಿನದಂದು “ಗುರುವಂದನಾ” ಹಾಗೂ ರಕ್ತದಾನ ಶಿಬಿರ “ಮುಗುಳ್ನಗೆಯ ಮಂದಾರ” ಪ್ರಶಸ್ತಿ ಕಾರ್ಯಕ್ರಮ ಜರುಗಲಿದೆ ಎಂದು ನಾಗರಾಜ ಕಲ್ಲಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಹಾಬಾದ್ ತಾಲೂಕಿನ ಮುಗುಳನಾಗಾಂವ ಗ್ರಾಮದ ಕಟ್ಟಿಮನಿ ಸಂಸ್ಥಾನ ಹಿರೇಮಠವು ಸುಮಾರು 9 ನೂರು ವರ್ಷಗಳ ಇತಿಹಾಸ ಹೊಂದಿದೆ ಶ್ರೀ ಮಠದ ಗುರುಗಳು
ತಪಸ್ವಿಗಳು, ಧರ್ಮಬೋಧಕರು, ಆಯುರ್ವೇದ ತಜ್ಞರು ಆಗಿ ಹೋಗಿದ್ದಾರೆ.ಮಠಗಳು ಧರ್ಮದ ಉಗಮ ಸ್ಥಾನಗಳುವಾಗಿದ್ದು, ಮಠಗಳು ಸಾಮಜಮುಖಿ ಕೆಲಸ ಮಾಡುತ್ತ ಮಾನವೀಯ ಮೌಲ್ಯಗಳಾದ ಪ್ರೀತಿ, ದಯೆ, ಅಂತಃಕರುಣೆ ಮೌಲ್ಯಯುತ ವಿಚಾಗಳನ್ನು ಬಿತ್ತುತ್ತಾ , ಅನ್ನ, ಅರಿವು, ಅರಿವೆ, ಔಷಧಗಳನ್ನು ನೀಡಿ ತನ್ನ ನಂಬಿ ಬಂದ ಭಕ್ತರಿಗೆ ಕಾಮಧೇನು ಕಲ್ಪವೃಕ್ಷವೇ ಮುಗಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠ ಎಂದು ಹೇಳಿದರು.
ಇದೆ ಜನೇವರಿ 25 ರಂದು ಶ್ರೀ ಷ.ಬ್ರ.ಅಭಿನವ ಸಿದ್ದಲಿಂಗ ಶಿವಾಚಾರ್ಯರ 48 ವರ್ಷದ ಜನ್ಮದಿನ, ಇದು ಭಕ್ತರಿಗೆ ಮಾತ್ರ ಪೂಜ್ಯರ ಜನ್ಮದಿನ ಅಥವಾ “ಗುರುವಂದನಾ” ಕಾರ್ಯಕ್ರಮವಾಗಿದೆ. ಆದರೇ ಪೂಜ್ಯರು ಮಾತ್ರ ತಮ್ಮ ಜನ್ಮದಿನವನ್ನು “ಭಕ್ತರ ಆರೋಗ್ಯದಿನ”ವನ್ನಾಗಿ ಮಾರ್ಪಾಡು ಮಾಡಿದ್ದು, ಅವರ ಭಕ್ತರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದರು
15 ವರ್ಷಗಳಿಂದ ತಮ್ಮ ಜನ್ಮದಿನದಂದು ಬೆಳಿಗ್ಗೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಉಚಿತ ನೇತ್ರ ಪರೀಕ್ಷೆ, ಜೊತೆಗೆ ನೇತ್ರ ಶಸ್ತ್ರ ಚಿಕಿತ್ಸೆ (ಆಪರೇಶನ್) ಕೂಡಾ ಮಾಡಿಸಿ ಪ್ರತಿವರ್ಷ 150 ಕ್ಕಿಂತಲೂ ಹೆಚ್ಚೂ ಭಕ್ತರಿಗೆ ಬಾಳಿಗೆ ಬೆಳಕಾಗಿದ್ದಾರೆ.
ದುಶ್ಚಟಗಳಿಗೆ ಬಲಿಯಾದ ಭಕ್ತರಿಗೆ ತಮ್ಮ ಉಪದೇಶಗಳನ್ನು ನೀಡಿ ಅವರ ಮನಸ್ಸು ಪರಿವರ್ತನೆಗೊಳಿಸಿ ದುಶ್ಚಟಗಳಿಂದ ಮುಕ್ತಗೊಳಿಸಿದ್ದಾರೆ.
2025 ನೇ ಸಾಲಿನ , ಶ್ರೀಮಠದ ಪ್ರತಿಷ್ಠಿತ ಪ್ರಶಸ್ತಿ "ಮುಗುಳ್ನಗೆಯ ಮಂದಾರ" ಪ್ರಶಸ್ತಿಗೆ ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಅವರು ಆಯ್ಕೆಯಾಗಿದ್ದಾರೆ, ಪ್ರಶಸ್ತಿಯು 5ಗ್ರಾಂ ಚಿನ್ನ ಮತ್ತು ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಸರ್ವಭಕ್ತರು ಪಾಲ್ಗೊಂಡು ಪುನೀತರಾಗಬೇಕೆಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ
ನಾಗಣ್ಣಗೌಡ ಕಂಠಿ ಮುಗುಳನಾಗಾಂವ, ರಾಜು ಎಂ. ಚವ್ಹಾಣ, ಭಾಗಿರಥಿ ಗುನ್ನಾ, ಶಿವಕುಮಾರ ಹಿರೇಗೌಡ, ಪ್ರಮೋದ್ ಪಾಟೀಲ,ಬಸವರಾಜ ಪಾಳಾ, ಡಾ.ನಾಯಕ,ಬಸವಂತರಾಯ ಹುಗಾರ ಉಪಸ್ಥಿತರಿದ್ದರು.