ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳ ನೇಮಕ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ಪದಾಧಿಕಾರಿಗಳ ನೇಮಕ
ಕಲಬುರಗಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಸಭೆ ನಡೆಸಿ ಈ ಸಭೆಯಲ್ಲಿ ರಾಷ್ಟ್ರೀಯ ಸಂಸದೀಯ ಸದಸ್ಯ ಎ.ಬಿ. ಹೊಸಮನಿ ಹಾಗೂ ಪಾಂಡುರಂಗ ಕೊಟ್ರೆ, ಜಿಲ್ಲಾಧ್ಯಕ್ಷ ರಾಜಕುಮಾರ ಪಿ. ನಡಗೇರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಶಿವಕುಮಾರ ಮುಡ್ಡಿ, ಜಿಲ್ಲಾಘಟಕದ ಕಾರ್ಯದರ್ಶಿ ಮಿಲಿಂದ ಕಣಮಸ ಅಪ್ಪಣೆಯ ಮೇರೆಗೆ ಹಾಗೂ ಸರ್ವ ಪದಾಧಿಕಾರಿಗಳ ಒಪ್ಪಿಗೆಯ ಮೇರೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ಕಲಬುರಗಿ ಜಿಲ್ಲಾ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ವಿಠಲ ಆರ್. ಬಾಚನಾಳ ಮತ್ತು ಜಿಲ್ಲಾ ಕಾರ್ಮಿಕ ಘಟಕದ ಕಾರ್ಯದರ್ಶೀಯನ್ನಾಗಿ ವಸಂತ್ ಆರ್. ಲೇಂಗಟಿ ಇವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಜುನ ಬಂಡೆ, ಮಹಾದೇವ ಅಣವಾರಕ ಇತರರು ಉಪಸ್ಥಿತರಿದ್ದರು. ಈ ಆದೇಶ ಇಂದಿನಿAದಲೇ ಜಾರಿಗೆ ಬರುತ್ತದೆ. ಸದರಿಯವರು ಪಕ್ಷದ ತತ್ವ. ಸಿದ್ಧಾಂತಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧ್ಯಕ್ಷ ರಾಜಕುಮಾರ ಪಿ. ನಡಗೇರಿ ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.