ಶಂಕರ್ ಹೂವಿನಹಿಪ್ಪರಗಿಗೆ ಒಲಿದ ರಾಜ್ಯ ಮಟ್ಟದ ಪ್ರಶಸ್ತಿ

ಶಂಕರ್ ಹೂವಿನಹಿಪ್ಪರಗಿಗೆ ಒಲಿದ ರಾಜ್ಯ ಮಟ್ಟದ ಪ್ರಶಸ್ತಿ

ನಾಟಕಕಾರ ಶಂಕರಜಿ‌ಹೂವಿನ ಹಿಫ್ಪರಗಿ ಅವರಿಗೆ ಒಲಿದ ರಾಜ್ಯಮಟ್ಟದ ದತ್ತಿ ಪ್ರಶಸ್ತಿ

 ಚಿಂಚೋಳಿ: ನಾಟಕಕಾರ ಶಂಕರಜಿ‌ ಹೂವಿನ ಹಿಫರಗಿ ಅವರನ್ನು 2023-24ನೇ ಸಾಲಿನ ಮಾಲತಿಶ್ರೀ‌ ಮೈಸೂರು ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ‌ ನಾಟಕ‌ ಅಕಾಡೆಮಿಯ ಈ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಮೊದಲಿಗರು ಎನ್ನುವ ಹೆಗ್ಗಳಿಕೆಗೆ ಶಂಕರಜಿ ಹೂವಿನ ಹಿಪ್ಪರಗಿ ಪಾತ್ರರಾಗಿದ್ದಾರೆ.

ಮೂಲತ: ವಿಜಯಪುರ ಜಿಲ್ಲೆಯ ಬಸವನ ಬಾಗೆವಾಡಿ ತಾಲ್ಲೂಕಿನ ಹೂವಿನ ಹಿಪ್ಪರಗಿ ಗ್ರಾಮದವರಾದ ಇವರು 35 ವರ್ಷಗಳಿಂದ ಚಿಂಚೋಳಿ ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿ ನೆಲೆಸಿದ್ದಾರೆ. 25ಕ್ಕೂ ಹೆಚ್ಚು ನಾಟಕ ಕೃತಿಗಳನ್ನು ರಚಿಸಿದ ಬಹುಮುಖ ಪ್ರತಿಭೆಯ ಇವರು 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಶಂಕರಜಿ ಅವರಿಗೆ ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ, ಕೆಂಡ ಕಾರಿದ ಕನ್ಯೆ, ಜಿಲ್ಲಾಧಿಕಾರಿ, ದ್ವೇಷ ಅಳಿಸಬೇಕು ದೇಶ ಉಳಿಯಬೇಕು ಮೊದಲಾದ ನಾಟಕಗಳು ಖ್ಯಾತಿ ತಂದು ಕೊಟ್ಟಿವೆ. ಅಭಿನಂದನೆಗಳು: ಕರ್ನಾಟಕ ಅಕಾಡೆಮಿಯ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಶಂಕರಜಿ ಹೂವಿನ ಹಿಪ್ಪರಗಿ ಅವರಿಗೆ ಕಸಾಪ‌ಮಾಜಿ ಅಧ್ಯಕ್ಷ ಅಶೋಕ ಪಾಟೀಲ,ನಾಟಕಕಾರ ಎಸ್.ಎನ್ ದಂಡಿನಕುಮಾರ, ಕವಯಿತ್ರಿ ಜ್ಯೋತಿ ಬೊಮ್ಮಾ, ಶಿಕ್ಷಕ ರಾಜಶೇಖರ ಮುಸ್ತಾರಿ, ಪತ್ರಕರ್ತ ಜಗನ್ನಾಥ ಶೇರಿಕಾರ, ಉಮಾ ಪಾಟೀಲ, ರಂಗಭೂಮಿ ಕಲಾವಿದರಾದ ರೇವಣಸಿದ್ದಯ್ಯ ಸ್ವಾಮಿ, ಶಾಮರಾವ ಕೊರವಿ, ಚಂದ್ರಶೇಖರ ಲಕಶೆಟ್ಟಿ, ಮಲ್ಲಯ್ಯ ಸ್ವಾಮಿ ಹಸರಗುಂಡಗಿ, ಪ್ರಮುಖರಾದ ಲಕ್ಷ್ಮಣ ಅವುಂಟಿ, ಜಗನ್ನಾಥ ಕಟ್ಟಿ ಮೊದಲಾದವರು ಅಭಿನಂದಿಸಿದ್ದಾರೆ