ಇದಾತೆ ಆಯೋಗದ ವರದಿ ಅನುಷ್ಠಾನಕ್ಕೆ ಡಾ. ಉಮೇಶ್ ಜಾಧವ್ ಆಗ್ರಹ

ಇದಾತೆ ಆಯೋಗದ ವರದಿ ಅನುಷ್ಠಾನಕ್ಕೆ ಡಾ. ಉಮೇಶ್ ಜಾಧವ್ ಆಗ್ರಹ
"ವಿಮೋಚನಾ ಜಾತಿ ದಿನಾಚರಣೆ"ಯಲ್ಲಿ ಕೇಂದ್ರಕ್ಕೆ ಮನವಿ
ನವದೆಹಲಿ: ಭಾರತದಲ್ಲಿರುವ 190ಕ್ಕೂ ಹೆಚ್ಚು ಅನುಸೂಚಿತವಲ್ಲದ ಮತ್ತು ಅನುಸೂಚಿತ ಬುಡಕಟ್ಟು ಜಾತಿ ಜನಸಮುದಾಯಗಳ ಸಮಗ್ರ ಕಲ್ಯಾಣಕ್ಕಾಗಿ 2019ರಲ್ಲಿ ಭಿಕು ರಾಮಜಿ ಇದಾತೆ ಆಯೋಗವು ಶಿಫಾರಸ್ಸು ಮಾಡಿದ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಬಂಜಾರಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಒತ್ತಾಯಿಸಿದ್ದಾರೆ.
ನವ ದೆಹಲಿಯ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ದೆಹಲಿ ಸರಕಾರದಿಂದ ಮೊಟ್ಟ ಮೊದಲನೇ ಬಾರಿ ಆಗಸ್ಟ್ 31ರಂದು ಆಯೋಜಿಸಿದ "ವಿಮೋಚನಾ ಜಾತಿ ದಿನಾಚರಣೆ" ಸಂದರ್ಭದಲ್ಲಿ ಮಾತನಾಡಿ ಇಂದು, ನಾವು ವಿಮೋಚನಾ ಜಾತಿ ದಿನವನ್ನು ಆಚರಿಸಲು ಒಟ್ಟುಗೂಡುತ್ತಿರುವಾಗ ಇದು ಕೇವಲ ಒಂದು ದಿನವಲ್ಲ ಬ್ರಿಟಿಷ್ ಭಾರತದಲ್ಲಿ ಜಾರಿಗೆ ತಂದ ಬುಡಕಟ್ಟು ಕ್ರಿಮಿನಲ್ ಕಾಯ್ದೆ ನಮ್ಮನ್ನು ಬಂಧಿಸಿದ್ದ ಸರಪಳಿಗಳ, ನಮ್ಮ ಪೂರ್ವಜರು ಅನುಭವಿಸಿದ ಅವಮಾನದ ಮತ್ತು ಧೈರ್ಯದ ಕುರಿತಾಗಿ ಚಿಂತನೆ ಮಾಡುವ ಸಮಯವಾಗಿದೆ. 1871 ರ ಕ್ರಿಮಿನಲ್ ಬುಡಕಟ್ಟು ಕಾಯ್ದೆಯು ಬಹುಶಃ ಮಾನವ ಇತಿಹಾಸದಲ್ಲಿ ಅತ್ಯಂತ ಅನ್ಯಾಯದ ಕಾನೂನುಗಳಲ್ಲಿ ಒಂದಾಗಿತ್ತು. ನಮ್ಮ ಬಂಜಾರರು, ಪಾರ್ಧಿಗಳು, ಸಂಸಿಗಳು, ನಟ್ಸ್ ಮತ್ತು ಇತರ 190 ಕ್ಕೂ ಹೆಚ್ಚು ಸಮುದಾಯಗಳನ್ನು "ಆನುವಂಶಿಕ ಅಪರಾಧಿಗಳು" ಎಂದು ಬ್ರಾಂಡ್ ಮಾಡಲಾಗಿತ್ತು. ಈ ಸಮುದಾಯಗಳಲ್ಲಿ ಜನಿಸಿದ ನವಜಾತ ಶಿಶುವನ್ನು ಕೂಡಾ ತನ್ನ ಮೊದಲ ಹೆಜ್ಜೆ ಇಡುವ ಮೊದಲು ಅಪರಾಧಿ ಎಂದು ಘೋಷಿಸಲಾಯಿತು. ಇಡೀ ಕುಟುಂಬಗಳನ್ನು ಪೊಲೀಸ್ ಠಾಣೆಗಳಲ್ಲಿ ನೋಂದಾಯಿಸಲು ಒತ್ತಾಯಿಸಲಾಯಿತು. ಚಲನೆಯನ್ನು ಕೂಡಾ ನಿರ್ಬಂಧಿಸಲಾಯಿತು. ಸಮಾಜದಲ್ಲಿ ಜನರ ಕಣ್ಗಾವಲಿನಲ್ಲಿ ಕೈದಿಗಳಂತೆ ಬದುಕಬೇಕಾದ ಶಿಬಿರಗಳನ್ನು ಸ್ಥಾಪಿಸಲಾಯಿತು.
ಶತಮಾನಗಳಿಂದ ಭಾರತದ ಸಾರಿಗೆ ಮತ್ತು ವ್ಯಾಪಾರದ ಜೀವನಾಡಿ ಎಂದು ಕರೆಯಲ್ಪಡುವ, ಉಪ್ಪು, ಧಾನ್ಯಗಳು ಮತ್ತು ಸರಕುಗಳನ್ನು ರಾಜ್ಯಗಳಾದ್ಯಂತ ಸಾಗಿಸುವ ನಮ್ಮ ಮಹಾನ್ ಬಂಜಾರಾ ಸಮುದಾಯವನ್ನು "ಶಂಕಿತರು" ಎಂದು ಕರೆಯಲಾಯಿತು.
ವಸಾಹತುಶಾಹಿ ಕಾನೂನು ನಮಗೆ ಮಾಡಿದ ಘೋರ ಅನ್ಯಾಯವನ್ನು ಎಸಗಿತ್ತು.ಆದರೆ ಸ್ವತಂತ್ರ ಭಾರತದಲ್ಲಿ 1952 ರಲ್ಲಿ ಕಾಯ್ದೆ ರದ್ದು ಮಾಡುವುದರ ಮೂಲಕ ಬುಡಕಟ್ಟು ಜನಾಂಗಕ್ಕೆ ನ್ಯಾಯ ಒದಗಿಸಲಾಯಿತು. ಆದರೆ ಕಳಂಕವು ದಶಕಗಳವರೆಗೆ ಉಳಿಯಿತು.
ಅದಕ್ಕಾಗಿಯೇ ಈ ದಿನಾಚರಣೆ ಬಹಳ ಮುಖ್ಯವಾಗಿದೆ. ಇದು ಕಾನೂನಿನಿಂದ ವಿಮೋಚನೆಯ ದಿನ ಮಾತ್ರವಲ್ಲ - ಇದು ಕಳಂಕ, ಬಡತನ ಮತ್ತು ಅಸಮಾನತೆಯಿಂದ ವಿಮೋಚನೆ ಎಂದು ಬಣ್ಣಿಸಲಾಗಿದೆ.
ರೆಂಕೆ ಆಯೋಗವು ಬುಡಕಟ್ಟು ಸಮುದಾಯಗಳ 10 ಕೋಟಿಗೂ ಹೆಚ್ಚು ಭಾರತೀಯರನ್ನು - "ಅತ್ಯಂತ ವಂಚಿತ ಮತ್ತು ಅಂಚಿನಲ್ಲಿರುವ ಸಮುದಾಯಗಳು" ಎಂದು ಬಣ್ಣಿಸಿದೆ. 2018 ರಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ನಿರ್ದೇಶನದಂತೆ
ಭಿಕು ರಾಮಜಿ ಇದಾತೆ ನೀಡಿದ ವರದಿಯಂತೆ 2019ರಲ್ಲಿ ಇದಾತೆ ಆಯೋಗವು ಬುಡಕಟ್ಟು ಅಲೆಮಾರಿ ಅರೆ ಅಲೆಮಾರಿ ಜನ ಸಮುದಾಯಗಳ ಕಲ್ಯಾಣಕ್ಕಾಗಿ ವಸತಿ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕಾಗಿ ಶಾಶ್ವತ ಕಾರ್ಯವಿಧಾನಗಳ ಅಗತ್ಯವನ್ನು ಒತ್ತಿಹೇಳಿತು.
2019 ರಲ್ಲಿ, ಸರ್ಕಾರ ಅನುಸೂಚಿತವಲ್ಲದ ಬುಡಕಟ್ಟು ಜನಾಂಗಗಳ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿತು.
2022 ರಲ್ಲಿ ಸೀಡ್ ಯೋಜನೆ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಯನ್ನು ಪ್ರಾರಂಭಿಸಿತು, ವಿದ್ಯಾರ್ಥಿವೇತನಗಳು, ಉಚಿತ ವಸತಿ, ಆರೋಗ್ಯ ವಿಮೆ ಮತ್ತು ಜೀವನೋಪಾಯ ಬೆಂಬಲದ ಭರವಸೆಗಳೊಂದಿಗೆ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿತು. ಈ ಯೋಜನೆಗಳು ಸಾಕಾಗುವುದಿಲ್ಲ. ಅದು ಹಳ್ಳಿಯಲ್ಲಿರುವ ಮಗುವನ್ನು, ಹಳ್ಳಿಯಲ್ಲಿರುವ ಮಹಿಳೆಯನ್ನು, ಉದ್ಯೋಗ ಹುಡುಕಲು ಹೆಣಗಾಡುತ್ತಿರುವ ಯುವಕರನ್ನು ತಲುಪಬೇಕು. ಅದಕ್ಕಾಗಿ ಹಿದಾಯತೆ ವರದಿ ಮಾಡಿದ ಶಿಫಾರಸುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವುದು ಅತ್ಯಂತ ಅಗತ್ಯ ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿಗಳಾದ ಶ್ರೀಮತಿ ರೇಖಾ ಗುಪ್ತ ದೆಹಲಿ ಸರಕಾರದ ಸಚಿವರಾದ ಕಪಿಲ್ ಮಿಶ್ರಾ ,ರವೀಂದ್ರ ಇಂದ್ರಾಜ್ ಸಿಂಗ್ ಸಮಿತಿಯ ಸದಸ್ಯರಾದ ಭರತ್ ಭಾಯಿ ಪಟ್ನಿ, ರಾಜ್ಯಸಭಾ ಸಂಸದರಾದ ಬ್ರಿಜ್ ಲಾಲ್ ಉಪಸ್ಥಿತರಿದ್ದರು.