ಹಿಂದುತ್ವದ ರಕ್ಷಣೆಗೆ ಶಸ್ತ್ರಗಳ ಅವಶ್ಯಕತೆ ಇದೆ : ಆರ್ ಎಸ್ ಎಸ್ ಪ್ರಮುಖ ದುರ್ಗಣ್ಣ

ಹಿಂದುತ್ವದ ರಕ್ಷಣೆಗೆ ಶಸ್ತ್ರಗಳ ಅವಶ್ಯಕತೆ ಇದೆ : ಆರ್ ಎಸ್ ಎಸ್ ಪ್ರಮುಖ ದುರ್ಗಣ್ಣ

ಹಿಂದುತ್ವದ ರಕ್ಷಣೆಗೆ ಶಸ್ತ್ರಗಳ ಅವಶ್ಯಕತೆ ಇದೆ : ಆರ್ ಎಸ್ ಎಸ್ ಪ್ರಮುಖ ದುರ್ಗಣ್ಣ

ಕಲಬುರಗಿ : ವಿಶ್ವದಲ್ಲಿ ಭಾರತ ಅಪಾರ ಜ್ಞಾನ ಸಂಪತ್ತು ಹೊಂದಿದೆ. ಇಲ್ಲಿ ಜಾತಿಗಳ ನಡುವಿನ ವೈಷಮ್ಯ ಹೋಗಲಾಡಿಸಿ ಸಮಾಜದಲ್ಲಿ ಸಾಮರಸ್ಯ ಬೆಳೆಸುವಂತಹ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಬೌದ್ಧಿಕ ಪ್ರಮುಖ ದುರ್ಗಣ್ಣ ಹೇಳಿದರು.

 ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ವತಿಯಿಂದ ವಿಜಯದಶಮಿ ಉತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂ ಸೇವಕರಿಂದ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿ,ಕಳೆದ 99 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರ ನಿರ್ಮಾಣದ ಕಾರ್ಯ, ಸಮಾಜವನ್ನು ಒಗ್ಗೂಡಿಸುವ ಹಾಗೂ ಭಾರತವನ್ನು ಗತವೈಭವದತ್ತ ಕೊಂಡೊಯ್ಯುವ ಕೆಲಸದಲ್ಲಿ ನಿರತವಾಗಿದೆ ಎಂದರು.

ಪರಮ ಪೂಜ್ಯನೀಯ ಡಾ.ಕೇಶವ ಬಲಿರಾಮ ಹಡ್ಗೆವಾರ ಅವರು 1925 ರ ವಿಜಯದಶಮಿಯ ಪವಿತ್ರ ದಿನದಂದು ಸಂಘದ ಮೊದಲನೇ ಸರಸಂಘಚಾಲಕನ್ನೊಳಗೊಂಡು ಕೇವಲ 10 -15 ಬಾಲಕರಿಂದ ಪ್ರಾರಂಭಗೊಂಡ ಸಂಘವು, ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. 

ಆ ಸಮಯದಲ್ಲಿ ಅಪಹಾಸ್ಯ ಹಾಗೂ ಅವಮಾನವನ್ನು ಸಹಿಸಿಕೊಂಡು ಹಿಂದೂ ಸಮಾಜದ ರಕ್ಷಣೆಯಲ್ಲಿ ಸಂಘ ನಿರಂತರವಾಗಿ ಕೆಲಸ ಮಾಡುತ್ತಿದೆ. ನಮ್ಮ ದೇಶದಲ್ಲಿ ಜ್ಞಾನದ ಭಂಡಾರವಿದೆ . ಭಾರತದ ಜ್ಞಾನ ಹಾಗೂ ಹಿಂದುತ್ವ ಉಳಿಯಬೇಕಾದರೆ ನಮಗೆ ಶಸ್ತ್ರದ ಅವಶ್ಯಕತೆ ಇದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರತಿನಿತ್ಯ ಒಂದು ಗಂಟೆ ನಡೆಯುವ ಶಾಖೆಯಲ್ಲಿ ಶಾರೀರಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ವ್ಯಕ್ತಿಗಳನ್ನು ಬೆಳೆಸುವಂತಹ ಕೆಲಸ ಮಾಡುತ್ತಿದೆ. 

ನಾವೆಲ್ಲರೂ ಹಿಂದು ನಾವೆಲ್ಲರೂ ಒಂದು ಎಂಬ ಮೂಲ ಉದ್ದೇಶದಿಂದ ಸಂಘವು ಇಂದಿಗೆ 99 ವಸಂತಗಳನ್ನು ದಾಟಿ, 100ನೇ ವಸಂತಕ್ಕೆ ಕಾಲಿಟ್ಟಿದೆ. ದೇಶದಲ್ಲಿ ಧರ್ಮ ಉಳಿಯಬೇಕಾದರೆ ನಾವೆಲ್ಲರೂ ಸಂಘಟಿತರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೇಂದು ಹೇಳಿದರು.

ನಿರಾಶ್ರಿತರಿಗೆ ಹಾಗೂ ಅಬಲೆಯರಿಗೆ ಶಕ್ತಿ ತುಂಬುವ ಮುಖೇನ ಸಂಘ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

 ಹಿಂದೂ ಸಮಾಜ ಬಲಿಷ್ಠವಾಗಬೇಕಾದರೆ, ನಾವು ಶಕ್ತಿಶಾಲಿಯಾಗಬೇಕು.ನಮ್ಮ ಮಕ್ಕಳನ್ನು ಸಂಘಟಿತರನ್ನಾಗಿ ಮಾಡುವ ಅವಶ್ಯಕತೆ ಇದೆ.

ಶವಯಾತ್ರೆಯಲ್ಲಿ ಮಾತ್ರ ನಾಲ್ಕು ಜನ ಹಿಂದುಗಳು ಒಂದಾಗುತ್ತಾರೆ ಎಂಬುದನ್ನು ನಾವು ಮರೆತು, ಸಮಾಜದ ಒಳಿತಿಗಾಗಿ ಒಗ್ಗಟ್ಟಿನಿಂದ ಬಲ ತೋರಿಸುವ ಅಗತ್ಯವನ್ನು ಪ್ರತಿಪಾದಿಸಿದರು. 

ಕಲಬುರಗಿ, ಖ್ಯಾತ ಉದ್ಯಮಿ ಉಮೇಶ್ ತಳವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿ‌ಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ, ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ,

ಶ್ರೀಕಾಂತ್ ಸರಾಫ್, ಸುರೇಶ್ ಹೆರೂರ, ರಮೇಶ್ ತಿಪ್ಪನೂರ,ರಾಕೇಶ್ ಬಾಸುದಕರ್, ಮಹಾದೇವಯ್ಯ ಕರದಳ್ಳಿ, ನಗರ ಕಾರ್ಯವಾಹ ಸಂಜು ಹಲಮನಿ, ನಾಗರಾಜ್ ಪಾಟೀಲ್, ಚನ್ನಕೇಶವ ಮಾಳಾ, ನಾಗೇಂದ್ರ ಕಾಬಡೆ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಗಂಗಪ್ಪಗೌಡ ಪಾಟೀಲ್ ಬೋಧನ,ಗಿರಿರಾಜ್ ಯಳಮೇಲಿ, ಅರುಣಕುಮಾರ ಪಾಟೀಲ್, ,ಸವಿತಾ ಪಾಟೀಲ್,ಅಪ್ಪು ಕಣಕಿ,ವರದಾಶಂಕರ ಶೆಟ್ಟಿ ಸೇರಿದಂತೆ ಹಲವು ಮಹಿಳೆಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಇದಕ್ಕೂ ಮುನ್ನ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಆರಂಭಗೊಂಡ ಪಥಸಂಚಲನವು ಚಡ್ಡಿ ಹೋಟೆಲ್, ಮಿಜಗುರಿ,ಡಂಕಾ ಕ್ರಾಸ್, ಹಿಂಗುಲಾಂಬಿಕಾ ದೇವಸ್ಥಾನ, ಗಣೇಶ್ ಮಂದಿರ, ಸರಾಫ್ ಬಜಾರ್, ಜಾಜಿ ಅಂಗಡಿ ಎದುರುಗಡೆಯಿಂದ, ಕಪಡಾ ಬಜಾರ್, ಚೌಕ್, ಜನತಾ ಬಜಾರ್ ವೃತ್ತ, ಅಪ್ಪನ ಕೆರೆ ರಸ್ತೆ, ಲಾಲಗೇರಿ ಕ್ರಾಸ್ ಮೂಲಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಪನ್ನಗೊಂಡಿತು. ಮಾರ್ಗದೂದ್ದಕ್ಕೂ ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿಯಾಗಿ ಪಥಸಂಚಲನಕ್ಕೆ ಸಾರ್ವಜನಿಕರು ಸ್ವಾಗತಿಸಿದರು. ಘೋಷ, ದಂಡ ಪ್ರಯೋಗ ಹಾಗೂ ಉಪವಿಷ್ಯ ವ್ಯಾಯಾಮ ಒಳಗೊಂಡಂತೆ ಸ್ವಯಂಸೇವಕರಿಂದ ಶಾರೀರಿಕ ಪ್ರದರ್ಶನ ನಡೆಯಿತು.೫೮೩ ಸ್ವಯಂಸೇವಕರು ಪೂರ್ಣ ಗಣವೇಷದಲ್ಲಿ ಭಾಗಿಯಾಗಿದ್ದರು.

 { ನಮ್ಮ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಕುಸಿಯಲು ಬಿಡಬಾರದು.ಮನೆ ಮನಗಳನ್ನು ಸಧೃಡ ಗೊಳಿಸಬೇಕು.ಬಾಹ್ಯ ಶತ್ರುಗಳು ಬಂದಾಗ ನಮ್ಮಲ್ಲಿನ ಬೇಧ ಭಾವವನ್ನು ಮರೆತು, ಹಿಂದೂ ಧರ್ಮದ ರಕ್ಷಣೆಗೆ ಮುಂದಾಗಬೇಕು.

 -ದುರ್ಗಣ್ಣ,ಪ್ರಾಂತ ಬೌದ್ಧಿಕ ಪ್ರಮುಖ,ಕರ್ನಾಟಕ ಉತ್ತರ ಪ್ರಾಂತ}