ನಿಡಗುಂದಾದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಿರ್ಮಾಣಕ್ಕೆ ಅಡಿಗಲ್ಲು:-ಡಾ.ಶರಣ ಪ್ರಕಾಶ ಪಾಟೀಲ

ನಿಡಗುಂದಾದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಿರ್ಮಾಣಕ್ಕೆ ಅಡಿಗಲ್ಲು:-ಡಾ.ಶರಣ ಪ್ರಕಾಶ ಪಾಟೀಲ

ನಿಡಗುಂದಾದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಿರ್ಮಾಣಕ್ಕೆ ಅಡಿಗಲ್ಲು:-ಡಾ.ಶರಣ ಪ್ರಕಾಶ ಪಾಟೀಲ

ಕಲ್ಯಾಣ ಕಹಳೆ ವಾರ್ತೆ

ನಿಡಗುಂದಾ:- ನಿಡಗುಂದಾ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ನಿಡಗುಂದಾ ಗ್ರಾಮದಲ್ಲಿ ಹೊಸದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಿರ್ಮಾಣಕ್ಕೆ 1.5 ಕೋಟಿ ರೂ.ಗಳನ್ನು ಮಂಜೂರಾತಿ ನೀಡಲಾಗಿದ್ದು, ಈಗ ಅದರ ಅಡಿಗಲ್ಲು ಕೂಡ ನೇರವೇರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಶರಣ ಪ್ರಕಾಶ ಪಾಟೀಲ ಅವರು ಹೇಳಿದರು.

ಚಿಂಚೋಳಿ ತಾಲೂಕಿನ ಸೇಡಂ ಮತಕ್ಷೇತ್ರ ವ್ಯಾಪ್ತಿಯ ನಿಡಗುಂದಾ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ 2023-2024ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆ ಅಡಿಯಲ್ಲಿ ಹೊಸದಾಗಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೇರವೇರಿಸಿ ಅವರು ಮಾತನಾಡಿದರು.

ನಿಡಗುಂದಾದಿಂದ ಹಲಕೋಡ ಹಾಗೂ ಪೋತಂಗಲ್ ವರೆಗಿನ ರಸ್ತೆ, ಕೊಂಡಂಪಳ್ಳಿಯಿಂದ ಗಡಿಕೇಶ್ವರ ವರೆಗಿನ ರಸ್ತೆ, ಗಡಿಕೇಶ್ವರನಿಂದ ಹೊಡಬೀರನಹಳ್ಳಿವರೆಗಿನ ರಸ್ತೆ, ಸೇಡಂನಿAದ ಸುಲೇಪೇಟ್ ವರೆಗಿನ ರಸ್ತೆ, ಈರಪಳ್ಳಿ ರಸ್ತೆ,ಎಲ್ಲಮ್ಮ ಗೇಟ್ ನಿಂದ ರುದ್ನೂರ ಕಡೆಗಿನ ರಸ್ತೆ,ಛತ್ರಸಾಲನಿಂದ ಭಕ್ತಂಪಳ್ಳಿಯವರೆಗಿನ ರಸ್ತೆಗಳನ್ನು ಅಭಿವೃದ್ಧಿಗೊಳ್ಳಿಸುತ್ತಿದೆ ಎಂದು ಅವರು ಹೇಳಿದರು.

ನಿಡಗುಂದಾ ಗ್ರಾಮದ ಸಿಸಿ ರಸ್ತೆ ಚರಂಡಿಗೆ 40 ಲಕ್ಷ, ನಿಡಗುಂದಾ ಅಗಸಿಯಿಂದ ವಿಜಯಕುಮಾರ ವರೆಗಿನ ಸಿಸಿ ರಸ್ತೆಗೆ 5 ಲಕ್ಷ, ನಿಡಗುಂದಾ ಗ್ರಾಮ ಅಗಸಿಯಿಂದ ಗ್ರಾಮ ದೇವತೆಯ ಮಂದಿರದವರೆಗೆ 5 ಲಕ್ಷ,ಅಣೆಕಲ್ಲು ಹೊಸ ಬಡವಣೆ ಸಿಸಿ ರಸ್ತೆಗೆ 20 ಲಕ್ಷ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಉನ್ನತಿಕರಣಕ್ಕೆ 20 ಲಕ್ಷ, ನಿಡಗುಂದಾ ಸರ್ಕಾರಿ ಶಾಲೆ ದುರಸ್ಥಿತಿಗೆ 35 ಲಕ್ಷ, ನಿಡಗುಂದಾ ಗ್ರಾಮದ ಟ್ಯಾಂಕ್ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 40 ಲಕ್ಷ, ನಿಡಗುಂದಾ ಗ್ರಾಮದ ಹನುಮನ ಮಂದಿರ ಅಭಿವೃದ್ಧಿ ಕಾಮಗಾರಿ 10 ಲಕ್ಷ, ನಿಡಗುಂದಾ ಗ್ರಾಮದಿಂದ ಚಿಂತಪಳ್ಳಿ ವರೆಗಿನ ರಸ್ತೆ ಅಭಿವೃದ್ಧಿಗೆ 5 ಲಕ್ಷ ಹೀಗೆ ಸುಮಾರು 3.83 ಕೋಟಿ ರೂ.ಗಳನ್ನು ಮಂಜೂರಾಗಿದೆ ಎಂದು ಅವರು ತಿಳಿಸಿದರು.

ಮಳೆಯಿಂದ ಬಹಳಷ್ಟು ರೈತರ ಬೆಳೆ ಹಾನಿಯಾಗಿದ್ದು, ಮಳೆಯಿಂದ ಹಾನಿಯಾಗಿರುವುದನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಿ,ರೈತರಿಗೆ ಪರಿಹಾರ ಕೋಡಲು ಕಂದಾಯ ಇಲಾಖೆಯ ಮಂತ್ರಿಗೆ ಪತ್ರ ಬರೆಯಲಾಗುವುದ್ದು, ವಿಶೇಷವಾಗಿ ನಮ್ಮ ರೈತರಿಗೆ ಮಳೆಯಿಂದ ಹೆಸರು, ಉದ್ದು, ತೊಗರಿಯೂ ಕೂಡ ನಷ್ಟವಾಗಿದ್ದು ಅದಷ್ಟು ಬೇಗ ಪರಿಹಾರವನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಕಳೆದ ಬಾರಿ ಬೆಲೆ ಹಾನಿಯಾಗಿ ಸುಮಾರು 600 ಕೋಟಿ ರೂ.ಗಳನ್ನು ಇನ್ಸೂರೆಸ್ ಅನ್ನು ಮಂಜೂರಾಗಿದ್ದು, ಅದರಲ್ಲಿ 350 ಕೋಟಿ ರೂ.ಗಳನ್ನು ಮಂಜೂರಾಗಿದ್ದು, ಅದು ರೈತರಿಗೆ ಹೀಗಾಗಲೇ ತಲುಪಿದೆ. ಇನ್ನುಳಿದ ಹಣವನ್ನು ಅದಷ್ಟು ಬೇಗ ಸಿಎಂ ಅವರನ್ನು ಭೇಟಿಯಾಗಿ ಮಂಜೂರು ಮಾಡಿಸಲಾಗುವುದು ಎಂದು ಅವರು ತಿಳಿಸಿದರು.

ನಮ್ಮ ಸರ್ಕಾರ ಸಮಾನ್ಯ ಜನರ, ಬಡವರ ಪರವಾಗಿರುವಂತಹ ಸರ್ಕಾರ, ತಮಗೆ ಗೊತ್ತಿರುವ ಹಾಗೆ ಈ ಎರಡು ವರ್ಷದಲ್ಲಿ ನಾವು 5 ಗ್ಯಾರಂಟಿಗಳನ್ನು ಜಾರಿಗೆ ಸುಮಾರು 52 ಸಾವಿರ ಕೋಟಿ ರೂ.ಗಳನ್ನು ಹಣವನ್ನು ನೇರವಾಗಿ ಬಡವರ ಮನೆಗೆ ತಲುಪುತ್ತಿದೆ ಎಂದು ಅವರು ತಿಳಿಸಿದರು.

ನಮ್ಮ ಸರ್ಕಾರ ಅಭಿವೃದ್ಧಿ ಪರ ಇರುವಂತಹ ಸರ್ಕಾರ, ಬಡವರ ಪರವಾಗಿರುವಂತಹ ಸರ್ಕಾರವಾಗಿದೆ. ಐದು ಗ್ಯಾರಂಟಿ ಜೊತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5000 ಕೋಟಿ ರೂ.ಗಳನ್ನು ನಮ್ಮ ಸರ್ಕಾರ ನೀಡುವ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಒತ್ತು ಕೊಟ್ಟಿದೆ ಎಂದು ಅವರು ಹೇಳಿದರು.

ಗ್ರಾ.ಪಂ ಸದಸ್ಯ ಮಹಮ್ಮದ್ ಖುರೇಷಿ, ರಫೀಕ್ ಟಾಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತರಾದ ಪ್ರಭುರೆಡ್ಡಿ, ಚಿಂಚೋಳಿ ತಾಲೂಕಿನ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಸೇಡಂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಶರಣ ರೆಡ್ಡಿ, ಬಸವರಾಜ ಪಾಟೀಲ ಊಡಗಿ, ನಿಡಗುಂದಾ ಗ್ರಾ..ಪಂ ಅಧ್ಯಕ್ಷೆ ಲಲಿತಾ ಎಸ್. ಮಳ್ಳೂರ, ಉಪಾಧ್ಯಕ್ಷ ರಾಜು ನಿಷ್ಠಿ, ಗ್ರಾಮ ಪಂಚಾಯತ ಸದಸ್ಯ ಅರವಿಂದ ರೆಡ್ಡಿ ಮಾಜಿ ಗ್ರಾ..ಪಂ ಅಧ್ಯಕ್ಷ ಹಾಗೂ ಹಾಲಿ ಸದಸ್ಯ, ಶಂಕರ ಸಜ್ಜನ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ ಗೌತಮ್, ಮಾಜಿ ತಾಲೂಕಾ ಪಂಚಾಯತ ಸದಸ್ಯ ಮಹೇಶಪ್ಪ ದೊಡ್ಡಮನಿ, ಜಟ್ಟೂರ ಮಾಜಿ ಗ್ರಾ.ಪಂ ಅಧ್ಯಕ್ಷ ಬಿಚ್ಚರೆಡ್ಡಿ ಪಾಟೀಲ, ಯುವ ವಿಲಾಸ ಗೌತಮ್ ನಿಡಗುಂದಾ, ನಿಡಗುಂದಾ ಗ್ರಾಮದ ಹಿರಿಯ ಮುಖಂಡರು, ಯುವ ಮುಖಂಡರು ಹಾಗೂ ನಿಡಗುಂದಾ ಗ್ರಾಮದ ಸುತ್ತಮುತ್ತಲಿನ ಹಳ್ಳಿಯ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಚಂದ್ರಕಾಂತ ಕೊರಬಾ ನಿರೂಪಣೆ,ಸುರೇಶ ಪೂಜಾರಿ ಪ್ರಸ್ತಾವಿಕ, ಸಂಪತ್ ಕುಮಾರ ಸಜ್ಜನ ಸ್ವಾಗತ, ರಾಜು ಹಲಗಿ ಸನ್ಮಾನ ಕಾರ್ಯಕ್ರಮ ನಡೆಸಿ ಕೊಟ್ಟರು.