ಬಸವಣ್ಣ ದೇವಸ್ಥಾನ ಜೀರ್ಣೋದ್ದಾರಕ್ಕೆ ಮುಗುಳನಾಗಾವಿ ಸ್ವಾಮೀಜಿಗಳಿಂದ ಭೂಮಿಪೂಜೆ

ಬಸವಣ್ಣ ದೇವಸ್ಥಾನ ಜೀರ್ಣೋದ್ದಾರಕ್ಕೆ ಮುಗುಳನಾಗಾವಿ ಸ್ವಾಮೀಜಿಗಳಿಂದ ಭೂಮಿಪೂಜೆ

ಬಸವಣ್ಣ ದೇವಸ್ಥಾನ ಜೀರ್ಣೋದ್ದಾರಕ್ಕೆ ಮುಗುಳನಾಗಾವಿ ಸ್ವಾಮೀಜಿಗಳಿಂದ ಭೂಮಿಪೂಜೆ

ಶಹಾಬಾದ: ನಗರದ ಬೋವಿ ವಡ್ಡರ ಸಂಘ ಬಡಾವಣೆಯಲ್ಲಿರುವ ಬಸವಣ್ಣ ದೇವಸ್ಥಾನ ಅಡವಿ ತಾತಾ ಮಠದ ಜೀರ್ಣೋದ್ದಾರ ಮಾಡುವ ಉದ್ದೇಶದಿಂದ ಮುಗುಳನಗಾವಿ ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಭೂಮಿ ಪೂಜೆ ನೇರವೇರಿಸಿದರು.

ವಿಶ್ವರಾಧ್ಯರ ಗುರುಗಳಾದ ಅಡವಿ ತಾತನವರು ತಪೋಭೂಮಿ, ಗುರುವಿನ ಅಣತಿಯಂತೆ ಕಾಶಿಯ ಗಂಗೆಯನ್ನು ವಿಶ್ವರಾಧ್ಯರು ಇಲ್ಲಿ ಪ್ರತ್ಯಕ್ಷಗೊಳಿಸಿದ ಸ್ಥಳವಾಗಿರುವ ಬಸವಣ್ಣ, ಅಡವಿ ತಾತ ದೇವಸ್ಥಾನ, ಮೂಲತ ಮುಗುಳುನಾಗಾವಿ ಕಟ್ಟಿಮನಿ ಹಿರೇಮಠದ ಶಾಖಾ ಮಠವಾಗಿದ್ದರಿಂದ, ಶ್ರೀಗಳು ಶನಿವಾರ ಇಲ್ಲಿಯ ವೀರಶೈವ ಸಮಾಜದ ಮುಖಂಡರು, ಗಣ್ಯರೊಂದಿಗೆ ಶಾಖಾ ಮಠದ ಜೀರ್ಣೋದ್ಧಾರ ಕುರಿತು ಚರ್ಚೆ ನಡೆಸಿದರು.

ಶಾಖಾ ಮಠದ ಜೀರ್ಣೋದ್ಧಾರಕ್ಕೆ ಎಲ್ಲರ ಒಪ್ಪಿಗೆ ಮೆರೆಗೆ, ಭೂಮಿ ಪೂಜೆ ನೇರವೇರಿಸಿಸಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೂಜ್ಯರು ಪ್ರತಿ ತಿಂಗಳು ಒಂದು ದಿನ ಸದರಿ ಮಠಕ್ಕೆ ಆಗಮಿಸಿ, ಭಕ್ತರಿಗೆ ಅಶೀರ್ವಾದ ಮಾಡುವದಾಗಿ ಅಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಶಹಾಬಾದ ಅಧ್ಯಕ್ಷ ಭೀಮಾಶಂಕರ ಕುಂಬಾರ, ಮುಖಂಡರಾದ ಮಹಾಲಿಂಗಪ್ಪ ಇಂಗಿನಶೆಟ್ಟಿ, ವಿಜಯಕುಮಾರ ಮುಟ್ಟತ್ತಿ, ಅಣವೀರ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ಅಶೋಕ ವಾಗಣಗೇರಿ, ವಿಶ್ವರಾಧ್ಯ ಬಿರಾಳ, ಭೀಮರಾವ ಮೇಟಿ, ಬಸವರಾಜ ಸಾತೀಹಾಳ, ರಾಜು ಕೋಬಾಳ, ನಾಗಣ್ಣಗೌಡ ಪಾಟೀಲ, ಶಾಂತಯ್ಯ ಮಠ, ಸಿದ್ರಾಮ ಕುಸಾಳೆ, ಶಿವಾನಂದ ಪಾಟೀಲ, ಶರಬು ಪಟ್ಟೇದಾರ, ಶರಣಯ್ಯ ಸ್ವಾಮಿ ಮಠಪತಿ, ಸೂರ್ಯಕಾಂತ ಕೋಬಾಳ, ಶಂಕರ ಕುಂಬಾರ, ದೇವೇಂದ್ರಪ್ಪ ವಾಲಿ, ಮಹೇಶ ಮಲಕೂಡ, ವಿಜಯಕುಮಾರ ಪಾಲ್ಗೊಂಡಿದ್ದರು.

ಶಹಾಬಾದ್ ವಾರ್ತೆ ನಾಗರಾಜ್ ದಂಡಾವತಿ