ಜೈನ ಧರ್ಮದ ಅಮೂಲ್ಯ ಕೊಡುಗೆ: ಡಾ. ಸುನೀಲಕುಮಾರ ಕಾಂಬಳೆ

ಜೈನ ಧರ್ಮದ ಅಮೂಲ್ಯ ಕೊಡುಗೆ: ಡಾ. ಸುನೀಲಕುಮಾರ ಕಾಂಬಳೆ
ಆಳಂದ: ಕಡಗಂಚಿಯ ಸಾಯಿ ಪ್ರತಾಪ್ ಪದವಿ ಮಹಾವಿದ್ಯಾಲಯದಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೈನ ಧರ್ಮದ ತತ್ವ, ಸಿದ್ಧಾಂತಗಳ ಕುರಿತು ಮಾಹಿತಿಪೂರ್ಣ ಉಪನ್ಯಾಸವನ್ನು ನೀಡಿದ ಡಾ. ಸುನೀಲಕುಮಾರ ಕಾಂಬಳೆ ಮಾತನಾಡಿದರು.
ಅವರು, “ಜೈನ ಧರ್ಮವು ಅಹಿಂಸೆಯ ಮಾರ್ಗವನ್ನು ತೋರಿಸಿದ ಅಪರೂಪದ ಧರ್ಮವಾಗಿದೆ. ಇದರ ತತ್ವಸಿದ್ಧಾಂತಗಳು ಮತ್ತು ನೈತಿಕ ಮೌಲ್ಯಗಳು ಇಂದಿನ ಸಮಾಜಕ್ಕೂ ಆಧರ್ಶವಾಗುತ್ತವೆ. ಜೈನ ಧರ್ಮದ ಕೊಡುಗೆಗಳು ಅಪಾರವಾಗಿವೆ ಮತ್ತು ಅವುಗಳನ್ನು ಮರೆಯಲಾಗದು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ಉಪನ್ಯಾಸಕಿ ಅನಿತಾ ಚೆಂಗಟಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಸುಮಿತ್ರಾ, ಇತಿಹಾಸ ಉಪನ್ಯಾಸಕಿ ಶೀಲಾ, ಅಂದಪ್ಪ ಡೋಣಿ ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅವಿನಾಶ ಎಸ್. ದೇವನೂರ ಉಪಸ್ಥಿತರಿದ್ದರು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಹ ಭಗವಾನ್ ಮಹಾವೀರ ಜಯಂತಿಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಧರ್ಮದ ತಾತ್ವಿಕ ವಿಚಾರಗಳಲ್ಲಿ ಆಸಕ್ತಿ ತೋರುತ್ತಿದ್ದರು.
– ವರದಿ: ಡಾ. ಅವಿನಾಶ ಎಸ್. ದೇವನೂರ