ಆದರ್ಶ ಗ್ರಾಮ ಪಂಚಾಯತ್ ಗ್ರಂಥಾಲಯ ಕೊಡಂಬಲ.

ಆದರ್ಶ ಗ್ರಾಮ ಪಂಚಾಯತ್ ಗ್ರಂಥಾಲಯ ಕೊಡಂಬಲ.
ವರದಿ - ಸಂಗಮೇಶ ಎನ್ ಜವಾದಿ.
ಚಿಟಗುಪ್ಪ: ತಾಲೂಕಿನ ಕೊಡಂಬಲ ಗ್ರಾಮದ ಗ್ರಂಥಾಲಯದಲ್ಲಿ
ಸುಮಾರು ಒಂಭತ್ತು ನೂರಕ್ಕೂ ಹೆಚ್ಚು ಓದುಗರಿಂದ ನೊಂದಣಿ ಆಗಿರುತ್ತದೆ. ಡಿಜಿ ವಿಕಾಸ ಮಕ್ಕಳ ನೊಂದಣಿ ಆರನೂರಕ್ಕೂ ಹೆಚ್ಚು ಆಗಿದೆ.
ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು
ಹೊಂದಿರುವ ಕೊಡಂಬಲ ಗ್ರಾಮ ಪಂಚಾಯತ್ ಗ್ರಂಥಾಲಯ ಆದರ್ಶ ಗ್ರಂಥಾಲಯವಾಗಿ
ಹೊರಹೊಮ್ಮಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಬಿರಾದಾರ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು
ಚಿಟಗುಪ್ಪ ತಾಲೂಕಿನಲ್ಲಿಯೇ ಸ್ವತಃ ಸುಸಜ್ಜಿತ ಕಟ್ಟಡ ಹೊಂದಿದೆ. ಸುಂದರ ಹಾಗೂ ಮನಮೋಹಕ,ಸ್ವಚ್ಛ ಗ್ರಂಥಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.2013 ರಲ್ಲಿ ಗ್ರಂಥಾಲಯ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಗ್ರಂಥಾಲಯ ಸೇವಾ ಪುರಸ್ಕಾರಕ್ಕೂ ಭಾಜನವಾಗಿದೆ.
ಈ ಮೂಲಕ ಗ್ರಾಮಗಳಲ್ಲಿಯೂ ಒಂದು ಒಳ್ಳೆಯ ಗ್ರಂಥಾಲಯ ನಿರ್ಮಾಣ ಮಾಡಬಹುದು ಎಂಬುದು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಓದುಗರಿಗೆ ಒಳ್ಳೆಯ ಪುಸ್ತಕಗಳು ಜೊತೆಗೆ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲೂ ವೈಚಾರಿಕ ಪ್ರಜ್ಞೆ ಪುಸ್ತಕ ದೊರೆಯುತ್ತಿವೆ. ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ.
ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.ಜನರಲ್ಲಿ ಜ್ಞಾನವನ್ನು ಪ್ರಸಾರ ಮಾಡುವುದರಲ್ಲಿ ಇವು ಮಹತ್ವದ ಕೆಲಸವನ್ನು ಮಾಡುತ್ತಿವೆ ಎಂದರು.
ಗ್ರಂಥಪಾಲಕ ಭೀಮಶಾ ಭೋಸಗಿ
ಇಪ್ಪತ್ತು ನಾಲ್ಕು ವರ್ಷಗಳಿಂದ ಈ ಗ್ರಂಥಾಲಯದ ಗ್ರಂಥಪಾಲಕರಾಗಿ ಸೇವೆಯನ್ನು ಸಲ್ಲಿಸುತ್ತಾ, ಉತ್ತಮ ಗ್ರಂಥಾಲಯ ನಿರ್ಮಾಣ ಮಾಡಿ, ಓದುಗರರಿಗೆ ಪ್ರೇರೇಪಣೆ ಆಗಿದ್ದಾರೆ.ಈ ಗ್ರಂಥಾಲಯದಲ್ಲಿ ಗಣಕಯಂತ್ರ ಸೌಲಭ್ಯ ಸಹ ಇರುತ್ತದೆ.
ಇದರ ಉಪಯೋಗ ಸರ್ವರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.
ವರದಿ - ಸಂಗಮೇಶ ಎನ್ ಜವಾದಿ.