ಸಾರ್ವಜನಿಕ ಹಿತರಕ್ಷಣಾ ಸಂಘದ ಮಾಸಿಕ ಸಭೆ

ಸಾರ್ವಜನಿಕ ಹಿತರಕ್ಷಣಾ ಸಂಘದ ಮಾಸಿಕ ಸಭೆ
ಕಲಬುರಗಿ: ನಗರದ ಸಾರ್ವಜನಿಕ ಹಿತರಕ್ಷಣಾ ಸಂಘದ ಕಾರ್ಯಾಲಯದಲ್ಲಿ ಆಗಸ್ಟ್ 31 ರಂದು ಸಂಘದ ಮಾಸಿಕ ಸಭೆ ನಡೆಯಿತು. ಸಭೆಯ ಆರಂಭದಲ್ಲಿ ಸಂಘದ ಸಂಸ್ಥಾಪಕರಾದ ಎಂ.ಎಂ. ಕಾದಾಡಿ ಹಾಗೂ ಚಂದ್ರಶೇಖರ ಮೇಕಿನ ಕೈಲಾಸವಾಸಿಯಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಖಜಾಂಚಿ ಮೇಘರಾಜ್ ಕುಲಕರ್ಣಿ ಅವರು ಸಭೆಗೆ ಆಗಮಿಸಿದ ಎಲ್ಲರಿಗೂ ಸ್ವಾಗತ ಕೋರಿದರು. ಸಂಘದ ಮಾರ್ಗದರ್ಶಕರಾದ ಕಾಶಾಪ್ಪ ವಾಂಜಾರಖೇಡ ಹಾಗೂ ಚಂದ್ರಶೇಖರ ಗುರಗುಂಟಿ ಸಂಘದ ಚಟುವಟಿಕೆಗಳನ್ನು ಮರುಸ್ಥಾಪಿಸಲು ಅಗತ್ಯ ಸೂಚನೆಗಳನ್ನು ನೀಡಿದರು.
ಸಂಘದ ಸಹ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೆ. ವಿನೋದಕುಮಾರ ಮಾತನಾಡಿ, ಕಾರ್ಯಕಾರಿ ಸದಸ್ಯರು ವಾರ್ಷಿಕ ವಂತಿಗೆ ಸಲ್ಲಿಸಿದಲ್ಲಿ ಮಾತ್ರ ಸಂಘದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಭೆಗೆ ಅಧ್ಯಕ್ಷತೆ ವಹಿಸಿದ ಪ್ರೊ. ಪ್ರತಾಪ್ ಸಿಂಗ್ ತಿವಾರಿ ಅವರು ಮಾತನಾಡಿ, ಸೆಪ್ಟೆಂಬರ್ 21ರಂದು ಸಂಘದ ವಿಶೇಷ ಸಭೆಯನ್ನು ಆಯೋಜಿಸಲಾಗಿದ್ದು, ಆ ದಿನ ಕಾರ್ಯಕಾರಿ ಸದಸ್ಯರು ತಮ್ಮ ಸಾರ್ವಜನಿಕ ಪ್ರಸ್ತಾವನೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದರೆ ಕಾರ್ಯದರ್ಶಿಗಳು ವಿವರವಾದ ಯೋಜನೆಗಳನ್ನು ರೂಪಿಸಿ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಕೊನೆಯಲ್ಲಿ ಕಾರ್ಯದರ್ಶಿ ಶಿವಶಂಕರ ಭೋಜಗ ಧನ್ಯವಾದಗಳನ್ನು ಸಲ್ಲಿಸಿದರು. ಸಭೆಯಲ್ಲಿ ವೀರಣ್ಣ, ರಾಜಶೇಖರ್, ರಾಜೇಶ್ವರ, ಡಾ. ಶಿವಪುತ್ರಪ್ಪ ಮಹಾಂತಪುರ, ಶಿವಲಿಂಗಪ್ಪ ಅಷ್ಟಗಿ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.