ವೀರೇಂದ್ರ ಪಾಟೀಲ್ ಬಡಾವಣೆಗೆ ಸಿಟಿ ಬಸ್ ಸೇವೆ ಆರಂಭ

ವೀರೇಂದ್ರ ಪಾಟೀಲ್ ಬಡಾವಣೆಗೆ ಸಿಟಿ ಬಸ್ ಸೇವೆ ಆರಂಭ
ಸಮಾಜಸೇವಕ ಉಮೇಶ್ ಶೆಟ್ಟಿ ಅಭಿನಂದನೆ
ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕಲಬುರಗಿ ನಗರದ ವೀರೇಂದ್ರ ಪಾಟೀಲ್ ಬಡಾವಣೆಗೆ ಸಿಟಿ ಬಸ್ ಸೇವೆ ಫೆಬ್ರವರಿ 9 ರಿಂದ ಪ್ರಾರಂಭಗೊಂಡಿದೆ.
ವೀರೇಂದ್ರ ಪಾಟೀಲ್ ಬಡಾವಣೆಗೆ ಕೆ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾ ಧಿಕಾರಿಗಳು ಹಾಗೂ ಇತರ ಅಧಿಕಾರಿಗಳ ನೆರವಿನಿಂದ ಸಿಟಿ ಸದಸ್ಯವೆ ಪ್ರಾರಂಭಗೊಂಡಿದೆ ಎಂದು ಸಮಾಜ ಸೇವಕರಾದ ಶ್ರೀ ಉಮೇಶ್ ಶೆಟ್ಟಿ ತಿಳಿಸಿದರು. ಸಿಟಿ ಬೆಸ್ಟ್ ಸೇವೆ ಪ್ರಾರಂಭಕ್ಕಾಗಿ ವೀರೇಂದ್ರ ಪಾಟೀಲ್ ಬಡಾವಣೆ ಶೇಮಾಭಿವೃದ್ಧಿ ಸಂಘವು ನಿರಂತರವಾಗಿ ಪ್ರಯತ್ನಿಸುತ್ತಿದ್ದು ಕೊನೆಗೂ ಬೇಡಿಕೆ ಈಡೇಸಿರುವುದಕ್ಕೆ ಕೆಕೆಆರ್ ಟಿಸಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಫೆಬ್ರವರಿ 9 ರಂದು ಬೆಳಿಗ್ಗೆ 8:45 ಕ್ಕೆ ನೂತನ ಸಿಟಿ ಬಸ್ ಸೇವೆ ಆರಂಭದ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರಾದ ಬಸವರಾಜ್ ನಾಯ್ಕರ್, ಬಿ ಎಸ್ ಬಿರಾದಾರ್, ಕಲ್ಯಾಣ್ ರಾವ್ ತೊನಸಲ್ಲಿ, ಪಾಂಡುರಂಗ ಕಾಳೆ, ಅಮರೇಶ್ವರ, ಅಶೋಕ್ ಚಳಗೇರಿ, ಶಿವಶರಣಪ್ಪ ಸರಡಗಿ, ಬಸವರಾಜ ಸರಡಗಿ, ಶಿವಕುಮಾರ ಚಟ್ಟಿ, ಸುಮಿತ್ರಾ ಕಾಳೆ, ವಿಶ್ವ ಲಿಂಗಪ್ಪ ಕಣ್ಣೂರ ಮಂಜುಳಾ ಹಿರೇಮಠ ಶಾಂತ ಹುಂಡೇಕಾರ್ ಹನುಮಂತ ರಾವ್ ಬಿರಾದಾರ್ , ರಾಜಶೇಖರ ಶೆಟ್ಟಿ, ಶಂಕರಪ್ಪ ಸೇರಿಕಾರ ಮಹಾದೇವ ಯ್ಯ ಕರದಳ್ಳಿ, ಸಿದ್ದಮ್ಮ ಹಾಗು ಶಿವಶರಣಪ್ಪ ಕಲಾ ಶೆಟ್ಟಿ ಮತ್ತಿತರ ಹಾಜರಿದ್ದರು.