ರೈತರ ನೋವಿಗೆ ಸ್ಪಂದಿಸದ ಸರಕಾರ - ಪಂಚಮಸಾಲಿ ಶ್ರೀಗಳು

ರೈತರ ನೋವಿಗೆ ಸ್ಪಂದಿಸದ ಸರಕಾರ - ಪಂಚಮಸಾಲಿ ಶ್ರೀಗಳು
ಶಹಪುರ : ರೈತರ ನೋವಿಗೆ ಸ್ಪಂದಿಸದೆ ರಾಜ್ಯ ಸರ್ಕಾರ ರೈತರ ಸಂಪೂರ್ಣ ಹಕ್ಕನ್ನು ದಮನ ಮಾಡುವುದರ ಜೊತೆಗೆ ರೈತರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಶಹಪುರ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ರೈತ ಜಾಗೃತಿ ಸಮಾವೇಶ ಮತ್ತು ರೈತ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಮಾತನಾಡಿ ರೈತರ ಋಣ ನಮ್ಮ ನಿಮ್ಮಲ್ಲರ ಮೇಲಿದೆ ಯಾವುದೇ ಕಾರಣಕ್ಕೂ ಅವರ ಋಣ ತೀರಿಸಲಾಗದು ಎಂದು ಮಾರ್ಮಿಕವಾಗಿ ನುಡಿದರು.
ರೈತರು ಈ ದೇಶದ ಬೆನ್ನೆಲೆಬು,ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು.ರೈತರಿಗೆ ಸಮಸ್ಯೆ ಎದುರಾದಾಗ ನಿಮ್ಮೊಂದಿಗೆ ಸದಾ ಬೆಂಬಲವಾಗಿ ನಿಂತು ಹೋರಾಟದಲ್ಲಿ ಭಾಗಿಯಾಗುತ್ತೇವೆ ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸಂತೃಪ್ತಿ ಜೀವನ ನಡೆಸಿ ಎಂದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಮುಗಳಕೋಡ ಜಿಡಗಾ ಮಠದ ಪರಮಪೂಜ್ಯ ಡಾ. ಮುರಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದರು.
ಕರ್ನಾಟಕ ಸಂಘಗಳ ಏಕೀಕರಣ ಸಮಿತಿ ಮೈಸೂರಿನ ರಾಜ್ಯ ವರಿಷ್ಠರಾದ ಪಚ್ಚೆ ನಂಜುಂಡ ಸ್ವಾಮಿ ಮಾತನಾಡಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗದೇ ಸಾಲಗಾರನಾಗುತ್ತಿದ್ದಾನೆ. ಇದರಿಂದ ಹಲವಾರು ಸಾವು ನೋವುಗಳು,ಅವಮಾನ ಅಪಮಾನಗಳಿಗೆ ತುತ್ತಾಗುತ್ತಿದ್ದಾನೆ. ಕರ್ನಾಟಕದಾದ್ಯಂತ ಮುಂಬರುವ ದಿನಗಳಲ್ಲಿ ರೈತ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಂಡು ರೈತರಿಗೆ ಸರಕಾರದಿಂದ ಸಿಗುವ ಸಾಲ ಸೌಲಭ್ಯಗಳು ಕುರಿತು ಮನವರಿಕೆ ಮಾಡುವ ಕೆಲಸ ನಮ್ಮ ಸಂಘಟನೆ ಮಾಡುತ್ತದೆ ಎಂದು ನುಡಿದರು.
ಈ ಸಮಾರಂಭದ ವೇದಿಕೆ ಮೇಲೆ ಶ್ರೀಗಿರಿ ಲಕ್ಷ್ಮಪುರದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು,ಸುಕ್ಷೇತ್ರ ಸೊಂತ ಪರಮಪೂಜ್ಯ ಬಾಲಯೋಗಿ ದತ್ತ ದಿಗಂಬರ ಶ್ರೀ ಶರಣ ಶಂಕರಲಿಂಗ ಮಹಾರಾಜರು,ಹುಲಿಜಂತಿಯ ಪರಮಪೂಜ್ಯ ಮಾಳಿಂಗರಾಯ ಮಹಾರಾಜರು,ಮಖನಾಪುರದ ಪರಮಪೂಜ್ಯ ಸೋಮೇಶ್ವರ ಮಹಾಸ್ವಾಮಿಜಿಗಳು,ಇಂಚಿಗೇರಿ ಶ್ರೀಮಠ ಅಥಣಿ ಹಾರೂಗೇರಿ ಶಶಿಕಾಂತ್ ಗುರೂಜಿ ದಿವ್ಯ ಸಾನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಕಾರ್ಯಕ್ರಮಕ್ಕಿಂತ ಮುಂಚೆ ಶಪುರದ ಹಳೆ ಬಸ್ ನಿಲ್ದಾಣದಿಂದ ಮಂಟಪದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯ ಮೇಲೆ ಡಾ. ಚಂದ್ರಶೇಖರ ಸುಬೇದಾರ,ಡಾ. ಶ್ರೀಕಾಂತ ಶಿನ್ನೂರ,ಮಹಾಂತಗೌಡ ಸುಬೇದಾರ,ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ,ಬಸವಂತರೆಡ್ಡಿ ಸಾಹು ಹತ್ತಿಗುಡೂರ,ರೂಪ ಶ್ರೀನಿವಾಸ ನಾಯಕ,ಶ್ರೀಕಾಂತ ಸುಬೇದಾರ,ಗೌಡಪ್ಪಗೌಡ ಆಲ್ದಾಳ,ಹಾಗೂ ರೈತ ಸಂಘದ ಪದಾಧಿಕಾರಿಗಳಾದ ಮಹೇಶ ಸಾಹು ಆನೆಗುಂದಿ,ಶಿವರಾಜ ದೇಶಮುಖ,ಸಂಗಮೇಶ ಸಗರ, ರಾಜ್ಯ ಉಪಾಧ್ಯಕ್ಷರಾದ ಶಾಂತವೀರಪ್ಪಗೌಡ ಪೊಲೀಸ್ ಪಾಟೀಲ್,ಚಂದನಗೌಡ ಮಾಲಿ ಪಾಟೀಲ್,ಅಶೋಕ ಸಾಹುಕಾರ ಬಲಕಲ,ಧರ್ಮಣ್ಣ ಎಂ.ತಹಸಿಲ್ದಾರ್,ರಮೇಶ ಗಾಂಜಿ, ಸುರೇಶ ಪರಗನ್ನವರ ಹಾಗೂ ಇತರರು ಉಪಸ್ಥಿತರಿದ್ದರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಗಳೂರು ರಾಜ್ಯಾಧ್ಯಕ್ಷರಾದ ಚೂನಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು, ರಾಜ್ಯ ಕಾರ್ಯಧ್ಯಕ್ಷರಾದ ಮಹೇಶಗೌಡ ಎಂ.ಸುಬೇದಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಸದಾನಂದ ಮಾಡಿಗ್ಯಾಳ ನಿರೂಪಿಸಿ ವಂದಿಸಿದರು.