ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಇವರ ಅಂತ್ಯಕ್ರಿಯೆ ಜೂನ್ 12 ರಂದು

ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಇವರ ಅಂತ್ಯಕ್ರಿಯೆ ಜೂನ್ 12 ರಂದು

ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಇವರ ಅಂತ್ಯಕ್ರಿಯೆ ಜೂನ್ 12 ರಂದು

ಕಲಬುರಗಿ: ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಡೇವಿಡ್ ಸಿಮೆಯೋನ್ ಇವರು ಬೆಂಗಳೂರಿನಲ್ಲಿ ಅನಾರೋಗ್ಯದ ನಿಮಿತ್ಯ ಜೂನ್ 10.ರಂದು ಮಂಗಳವಾರ ಮಧ್ಯಾಹ್ನ 12.15 ಗಂಟೆಗೆ ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರೀಯೇಯು ಅವರ ಕುಟುಂಬ ಸದಸ್ಯರು ಕಲಬುರಗಿಯಲ್ಲಿ ಜೂನ್ 12 ರಂದು ಜರುಗಿಸಲು ನಿರ್ಧರಿಸಿದ್ದಾರೆ.

 ದಿ. ಡೇವಿಡ್ ಸಿಮೆಯೋನ್ ಅವರ ಜೂನ್ 12 ರಂದು ಗುರುವಾರ ಕಲಬುರಗಿಯ ಕ್ರೈಸ್ತ ಮೆಥೋಡಿಸ್ಟ ಚರ್ಚ ಆವರಣ ಐವಾನ್-ಇ-ಶಾಹಿ ರಸ್ತೆ, ಕಲಬುರಗಿಯಲ್ಲಿ ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನ, ಮಧ್ಯಾಹ್ನ 3.00 ಗಂಟೆಗೆ ಕಲಬುರಗಿ ನಗರದ ಕ್ರೈಸ್ತ ರುದ್ರ ಭೂಮಿ ವೆಂಕಟೇಶ ನಗರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ಜರುಗಿಸಲಾಗುವುದು.

ಸದರಿ ವಿಷಯವನ್ನು ಕಾಂಗ್ರೇಸ್ ಕ್ರೈಸ್ತ ಮುಖಂಡರಾದ ಸಿಮೆಯೋನ್ ಸಾಮ್ಯೂವೆಲ್, ಜ್ಞಾನಮಿತ್ರ ಸಾಮ್ಯೂವೆಲ್, ಸಂಧ್ಯಾರಾಜ ಸಾಮ್ಯೂವೆಲ್ ಹಾಗೂ ಮೆಥೋಡಿಸ್ಟ ಚರ್ಚಿನ ಕಾರ್ಯದರ್ಶಿಗಳಾದ ಐ. ವಿಜಯಕುಮಾರವರು ಪ್ರಕಟಣೆಯ ಮುಖಾಂತರ ತಿಳಿಸಿದ್ದಾರೆ.