ಶಬರಿಮಲೈ ಯಾತ್ರಾ ಪ್ರಯುಕ್ತ ಸ್ಟಾರ್ ಕೇರ್ ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಶಬರಿಮಲೈ ಯಾತ್ರಾ ಪ್ರಯುಕ್ತ ಸ್ಟಾರ್ ಕೇರ್ ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ
ಕಲಬುರಗಿ : ನಗರದ ನಾಗನಹಳ್ಳಿ ಓವರ್‌ಬ್ರಿಜ್ ಹತ್ತಿರದ ಅಶೋಕ ಲೇಔಟ್ 27ನೇ ಕ್ರಾಸ್‌ನಲ್ಲಿ ಇರುವ ಗುರುಸ್ವಾಮಿ ಅಶೋಕ ಹೊನ್ನಳ್ಳಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ, ಗುರುಸ್ವಾಮಿ ರವಿರಾಜ ಕೋರವಿ ಅವರ 18ನೇ ಶಬರಿಮಲೈ ಯಾತ್ರೆಯ ಪ್ರಯುಕ್ತ ಸ್ಟಾರ್ ಕೇರ್ ಆಸ್ಪತ್ರೆಯ ವತಿಯಿಂದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಭಾನುವಾರ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಗುರುಸ್ವಾಮಿ ಅಶೋಕ ಹೊನ್ನಳ್ಳಿ, ಗುರುದೇವ ಕಳಸ್ಕರ್, ರವಿರಾಜ ಕೋರವಿ, ಡಾ. ಚರಣರಾಜ ಹೊನ್ನಳ್ಳಿ, ಡಾ. ಪ್ರಶಾಂತ ಮಾಲಿ, ಶರಣು ಮೂಲಗೆ, ಬನಶಂಕರಿ ಅಂಗಡಿ, ರೋಹನ ಕೋರವಿ ಸೇರಿದಂತೆ ಅನೇಕ ಮಾಲಾಧಾರಿಗಳು ಭಾಗವಹಿಸಿ ಶಿಬಿರ ಯಶಸ್ವಿಗೊಳಿಸಿದರು.