ಕೃಷಿ ಅಧಿಕಾರಿ ಶಶಿಕಾಂತ ಭರಣಿ ವಯೋ ನಿವೃತ್ತಿ ಸಮಾರಂಭ :..

ಕೃಷಿ ಅಧಿಕಾರಿ ಶಶಿಕಾಂತ ಭರಣಿ ವಯೋ ನಿವೃತ್ತಿ ಸಮಾರಂಭ :..
ಶಹಾಬಾದ : - ಬಡ ಕುಟುಂಬದಲ್ಲಿ ಜನಿಸಿ ಉನ್ನತ ಶಿಕ್ಷಣ ಪಡೆದು ಹಲವಾರು ಪರೀಕ್ಷೆಗಳನ್ನು ಬರೆದು ಪಾಸಾಗಿ 1989 ರಲ್ಲಿ ಕೃಷಿ ಇಲಾಖೆಗೆ ನೇಮಕಗೊಂಡ ಶಶಿಕಾಂತ ಭರಣಿ ಯವರು ಛಲದಂಕ ಮಲ್ಲನಂತೆ ಯಶಸ್ಸು ಸಾದಿಸಿದ್ದಾರೆ ಎಂದು ಕೃಷಿ ಅಧಿಕಾರಿ ಸುಷ್ಮಾ ಕಲಕೇರಿ ಹೇಳಿದರು.
ಅವರು ಕೃಷಿ ಇಲಾಖೆಯ ಅಧಿಕಾರಿ ಶಶಿಕಾಂತ ಭರಣಿ ಯವರ ವಯೋ ನಿವೃತ್ತಿಯ ಸಮಾರಂಭದ ಸಭೆ ಉದ್ದೇಶಿಸಿ ಮಾತನಾಡಿದರು.
ಮೃದು ಸ್ವಬಾವದ ವ್ಯಕ್ತಿ, ಕಪ್ಪು ಚುಕ್ಕಿ ಇಲ್ಲದೆ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು,
ಶಹಾಬಾದ ರೈತ ಸಂಪರ್ಕ ಕೇಂದ್ರದಲ್ಲಿ ೨೩ ವರ್ಷಗಳ ಕಾಲ ಸತತ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ನಿಜವಾಗಿಯು ಶ್ಲಾಘನೀಯ.
ಕೃಷಿಕರಿಗೆ ಸರಕಾರದಿಂದ ಹಲವಾರು ರೀತಿಯ ಸಾಕಷ್ಟು ಯೋಜನೆಗಳು ಬರುತ್ತಿವೆ, ಯಾವುದಕ್ಕೂ ಬೇಸರ ವ್ಯಕ್ತಪಡಿಸದೆ ರೈತರಿಗೆ ಯೋಜನೆಯ ಲಾಭ ನೀಡಿದ್ದಾರೆ, ಭರಣಿ ಯವರು ಸರಕಾರದ ಪ್ರತಿಯೊಂದು ಯೋಜನೆ ಪತ್ರಿಕಾ ಪ್ರಕಟಣೆಯ ಮೂಲಕ ರೈತರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದರು ಅವರ ಒಳ್ಳೆಯ ಗುಣ ಎಂದು ಹೋಗಳಿದರು.
ನಿವೃತ ಕೃಷಿ ಅಧಿಕಾರಿ ಎಸ.ಐ ಡಾಂಗೆ ಮಾತನಾಡಿ, ಕೃಷಿ ಇಲಾಖೆಯಲ್ಲಿ ವಿವಿಧ ತಾಲ್ಲೂಕಗಳಲ್ಲಿ ಅನೇಕ ವರ್ಷ ಉತ್ತಮ ಸೇವೆಯನ್ನು ಸಲ್ಲಿಸಿ ರೈತರ ಮಧ್ಯೆ ಒಳ್ಳೆ ಬಾಂಧವ್ಯ ಒಡನಾಟ ಹೊಂದಿ ಸ್ನೇಹಾಮಯವಾಗಿ ಕೆಲಸವನ್ನು ಮಾಡಿ, ಕಿರಿಯರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಆದರ್ಶವಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ, ಸಿದ್ದಲಿಂಗ ಶೆಟ್ಟಿ, ಸೈಯದ್ ಪಟೇಲ, ಸಾಬಣ್ಣ ಕೊಲ್ಲೂರ ಮಾತನಾಡಿದರು.
ತಾ.ಪಂ ಮಾಜಿ ಸದಸ್ಯ ಮನೋಹರ ಮಾಲಗತ್ತಿ, ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ, ಸುರೇಖಾ ಗುಂಡಗುರ್ತಿ, ಸುನೀತಾ ಭರಣಿ, ಆನಂದ ಕತ್ನಳ್ಳಿ ನಿರ್ಮಲಾ ಉದಯಕರ, ಸೂರ್ಯಕಾಂತ ಮಾಲೆ, ಸಿದ್ರಾಮ ಉದಯಕರ, ಪ್ರವೀಣ ಹಾಗೂ ಮಾಜಿ ಅನುಗಾರರು ಸೇರಿದಂತೆ ಅಭಿಮಾನಿಗಳು, ಕುಟುಂಬದ ಅನೇಕ ಜನ ಸದಸ್ಯರು ಉಪಸ್ಥಿತರಿದ್ದರು.
ಕೋಟ ಮಾಡಿ :..ರೈತರ ಮತ್ತು ಸಾರ್ವಜನಿಕರ ಸಹಕಾರದಿಂದ 32 ವರ್ಷಗಳಿಂದ ಕಳಂಕ ರಹಿತವಾಗಿ ದೇಶದ ಬೆನ್ನಲುಬಾದ ರೈತರ ಸೇವೆ ಮಾಡಿದ್ದೇನೆ ಸಹಕರಿಸಿದ ಎಲ್ಲರಿಗೂ ಧನ್ನವಾದಗಳು :.. ಶಶಿಕಾಂತ ಭರಣಿ ನಿವೃತ್ತ ಕೃಷಿ ಅಧಿಕಾರಿ.