ಸಹಕಾರಿ ಸಂಘಗಳ ಕಾರ್ಯಗಳು ಕೃಷಿಗೆ ಪೂರಕವಾಗಿರಲಿ : ಶಿವಪ್ರಭು ಪಾಟೀಲ್

ಸಹಕಾರಿ ಸಂಘಗಳ ಕಾರ್ಯಗಳು ಕೃಷಿಗೆ ಪೂರಕವಾಗಿರಲಿ : ಶಿವಪ್ರಭು ಪಾಟೀಲ್

ಸಹಕಾರಿ ಸಂಘಗಳ ಕಾರ್ಯಗಳು ಕೃಷಿಗೆ ಪೂರಕವಾಗಿರಲಿ : ಶಿವಪ್ರಭು ಪಾಟೀಲ್

ಕಲಬುರಗಿ : ಸಹಕಾರಿ ಕ್ಷೇತ್ರದ ಮೇಲೆ ರಚನೆಯಾಗುವ ಸಹಕಾರಿ ಸಂಘಗಳು ಪ್ರಾಮಾಣಿಕ ಸೇವಾ ಕಾರ್ಯವೈಖರಿಯಿಂದ ಅಭಿವದ್ಧಿ ಹೊಂದುವ ಮೂಲಕ, ರೈತರ ಕೃಷಿ ಬದುಕಿಗೆ ಪೂರಕವಾಗಿರಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್ ಮಹಾಗಾಂವ ಹೇಳಿದರು.

ಅವರು, ಇತ್ತೀಚೆಗೆ ಕಲಮೂಡ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸತತವಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರಾಜಕುಮಾರ್ ಕೋಟೆ ಅವರನ್ನು ಅಭಿನಂದಿಸಿ ಮಾತನಾಡಿದರು.

ಹಿಂದಿನ ಆಡಳಿತ ವ್ಯವಸ್ಥೆಗೂ ಈಗಿನ ಆಡಳಿತ ವ್ಯವಸ್ಥೆಗೂ ಬದಲಾವಣೆಯಾಗಿದೆ. ಆದ್ದರಿಂದ ಆಡಳಿತ ಮಂಡಳಿಯ ನಿರ್ದೇಶಕರು, ಸಂಘಗಳ ಕಾರ್ಯದರ್ಶಿಗಳು, ಅಧ್ಯಕ್ಷರು, ಸಂಘಗಳ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು. 

ಈ ವೇಳೆ ಅಭಿನಂದನೆ ಸ್ವೀಕರಿಸಿ ಮಾತನಾಡಿದ, ಕಲಮೂಡ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ರಾಜಕುಮಾರ್ ಕೋಟೆ, ಸಂಘದ ಎಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ, ರೈತರ ಉನ್ನತಿಗಾಗಿ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ರೈತರ ಜೀವನಾಡಿಯಾಗಿ ಸೇವೆ ಸಲ್ಲಿಸಲು ನಿರಂತರವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

 ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರೊ ಯಶವಂತರಾಯ ಅಷ್ಠಗಿ ಮಾತನಾಡಿ, ಕೃಷಿ ತಜ್ಞ ವೆದ್ಯನಾಥನ್ ಸಮಿತಿಯ ವರದಿಯು ಜಾರಿಯಾಗಿದ್ದರಿಂದ ಸಹಕಾರಿ ಸಂಘಗಳು ಅಭಿವದ್ಧಿಯತ್ತ ದಾಪುಗಾಲು ಇಟ್ಟಿವೆ. ಈ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಜನಸಾಮಾನ್ಯರಲ್ಲಿ ವಿಶ್ವಾಸ ಬರುವಂತೆ ಪ್ರಾಮಾಣಿಕ ಸೇವೆ ನಮ್ಮದಾಗಬೇಕೇಂಬ ಆಶಯ ವ್ಯಕ್ತಪಡಿಸಿದರು.

ಸಮಾಜ ಸೇವಕಿ ಹಾಗೂ ನಾಲ್ಕು ಚಕ್ರ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ ಮಾತನಾಡಿ ಸಹಕಾರಿ ಇಲಾಖೆಯಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ಆಡಳಿತ ಮಂಡಳಿಯವರು ಹಾಗೂ ಕಾರ್ಯದರ್ಶಿಗಳು ಜನರಿಗೆ ಹಾಗೂ ಸಂಘದ ವ್ಯವಹಾರಗಳಲ್ಲಿ ಉತ್ತಮ ಸೇವೆಗಳನ್ನು ನೀಡುತ್ತಾರೊ ಇಲ್ಲವೊ ಎಂಬುದನ್ನು ಕಾಲಕಾಲಕ್ಕೆ ಸಂಘಗಳ ಸಭೆ ನಡೆಸಿ ಪರಿಶೀಲನೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ, ಹಿರಿಯ ಸಾಹಿತಿ ಡಾ ಕೆ. ಗಿರಿಮಲ್ಲ, ಜಾನಪದ ಕಲಾವಿದ ವಿಶ್ವನಾಥ ತೋಟ್ನಳ್ಳಿ, ಸಮಾಜ ಸೇವಕ ಲಿಂಗರಾಜ, ಶಿವು ಪಲ್ಲೇದ ಉಪಸ್ಥಿತರಿದ್ದರು.

[ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಪಡಿಸುವ ಮೂಲಕ ಸರ್ಕಾರಗಳು ಮತ್ತು ಪಾಲುಗಾರರು ಕೃಷಿಯ ಒಟ್ಟಾರೆ ಸ್ಥಿತಿಗತಿಗಳನ್ನು ಸುಧಾರಿಸಿ, ಗ್ರಾಮೀಣ ಜನರ ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಗುರಿಯನ್ನು ಹೊಂದಬೇಕು ಅಂದಾಗ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ.]

-ಪ್ರೊ ಯಶವಂತರಾಯ ಅಷ್ಠಗಿ

ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ, ಕಲಬುರಗಿ