ಅಪರೂಪದ ಕಲಾರಾಧಕ ಕರಬಸಯ್ಯ ಸ್ವಾಮಿಗಳು - ಹಾರಕೂಡ ಶ್ರೀ

ಅಪರೂಪದ ಕಲಾರಾಧಕ ಕರಬಸಯ್ಯ ಸ್ವಾಮಿಗಳು - ಹಾರಕೂಡ ಶ್ರೀ
ಬಸವಕಲ್ಯಾಣ ಹಾರಕೂಡ,ಕಲೆ ಮತ್ತು ಧರ್ಮಸೇವೆಯನ್ನು ಮೌಲ್ಯವಾಗಿ ಸ್ವೀಕರಿಸಿಕೊಂಡು ಇಡೀ ಬದುಕಿನುದ್ದಕ್ಕೂ ವೃತದ ರೂಪದಲ್ಲಿ ಅನುಸರಿಸಿಕೊಂಡು ಬಂದಿರುವ ಅಪರೂಪದ ಕಲಾರಾಧಕ ಹಾರಕೂಡ ಪೂಜ್ಯ ಕರಬಸಯ್ಯ ಸ್ವಾಮಿಗಳು ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ರೇವಣಸಿದ್ದ ಹೂಗಾರ ರವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾದ ಪೂಜ್ಯಶ್ರೀ ಹಾರಕೂಡ ಕರಬಸಯ್ಯ ಸ್ವಾಮಿ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಕಲಬುರ್ಗಿ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಕಲೆ ಮತ್ತು ಗುರು ಸೇವೆ ಪೂಜ್ಯ ಕರಬಸಯ್ಯನವರ ಎರಡು ಕಣ್ಣುಗಳಾಗಿದ್ದವು.
ಸಂಗೀತ ಮತ್ತು ಹಾರಕೂಡ ಶ್ರೀ ಮಠದ ಉನ್ನತಿಗಾಗಿ ತಮ್ಮ ಇಡಿ ಬದುಕನ್ನೇ ಭಕ್ತಿಯಿಂದ ಸಮರ್ಪಿಸಿದ ಶತಾಯುಷಿ ಕರಬಸಯ್ಯನವರು.
ಕರ, ಉರ, ಶಿರವನ್ನು ಒಂದಾಗಿಸಿಕೊಂಡು ದಣಿವರಿಯದೆ ದುಡಿದ ಮಾಹಾನುಭಾವರು, ತಮ್ಮ ಕಲಾ ಪ್ರತಿಭೆಯಿಂದ ಅಪಾರ ಶಿಷ್ಯ ಬಳಗ ಹೊಂದಿರುವ ಕರಬಸಯ್ಯ ಸ್ವಾಮಿಗಳು ತಮ್ಮ ಜೀವನದಲ್ಲಿ ಮೂವರು ಯತಿಗಳ ಸೇವೆ ಮಾಡಿ, ಶಿವಾನುಗ್ರಹಕ್ಕೆ ಪಾತ್ರರಾಗಿ ಸಾರ್ಥಕ ಬದುಕಿನ ಸಿರಿಕಂಡವರು.
ಕಲೆ ಮತ್ತು ಸೇವೆ ಒಂದಾಗಿಸಿಕೊಂಡು ಬಾಳಿದರೆ ದಿವ್ಯಾನುಭವದ ರಸಧಾರೆ ಸವಿಯಲು ಸಾಧ್ಯ ಎನ್ನುವುದಕ್ಕೆ ಪೂಜ್ಯ ಕರಬಸಯ್ಯ ಸ್ವಾಮಿಗಳವರು ದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ.
ಇಂತಹವರ ಹೆಸರಲ್ಲಿ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಕಟ್ಟಿರುವ ರೇವಣಸಿದ್ದ ಹೂಗಾರ ರವರಿಗೆ ಹಾರಕೂಡ ಧೀಶ ಹೇರಳವಾದ ಶಕ್ತಿ ಸಾಮರ್ಥ್ಯ ಕರುಣಿಸಲಿ ಹಾಗೂ ಸರ್ವರಿಗೂ ಶುಭ ಪ್ರಾಪ್ತವಾಗಲಿ ಎಂದು ಹಾರೈಸಿದರು.
ಎಚ್.ಕೆ.ಇ. ಸೊಸೈಟಿಯ ನಿರ್ದೇಶಕರಾದ ಅರುಣ್ ಕುಮಾರ ಎಂ ಪಾಟೀಲ ಮಾತನಾಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರು, ಬಸವಕಲ್ಯಾಣ, ಸಿದ್ರಾಮಪ್ಪ ಗುದಗೆ ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷರು, ಬಸವಕಲ್ಯಾಣ, ಶಂಕರರಾವ ಮಾಣಿಕೆ, ಧರ್ಮರಾಜ ಹೇರೂರ, ಆನಂದರಾವ ಝಳಕೆ, ಪಂಡಿತರಾವ ದೇಗಾಂವ, ವಿಜಯಕುಮಾರ ಸಂಗೋಳಗಿ, ನಾಗೇಂದ್ರ ಪಾಟೀಲ, ಪ್ರಭು ಪಸರ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ರೇವಣಸಿದ್ದ ಹೂಗಾರ ಸ್ವಾಗತಿಸಿದರು.
ಕಲ್ಯಾಣ ಕರ್ನಾಟಕದ ಹೆಸರಾಂತ ಸಂಗೀತ ಕಲಾವಿದರಾದ ಮಲ್ಲಿಕಾರ್ಜುನ ಮಣ್ಣೂರ, ಜಗದೀಶ ನಗರನೂರ, ಸಂಗಮೇಶ ನೀಲಾ, ಸಿದ್ದಣ್ಣ ಹೂಗಾರ, ಅಂಬರೀಶ ಹೂಗಾರ, ಕಲ್ಮೇಶ್ ಹೂಗಾರ, ಜಗದೀಶ ಹೂಗಾರ, ರಾಜಶ್ರೀ ದಿಲೀಪಕುಮಾರ ಸ್ವಾಮಿ, ಮನೋಹರ ವಿಶ್ವಕಮರ ಸಂಗೀತ ಸೇವೆ ಸಲ್ಲಿಸಿದರು.
ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.ಉದಯಕುಮಾರ ಶಾಸ್ತ್ರಿಗಳು ಭೀಮಳ್ಳಿ ನಿರುಪಣೆ ಮಾಡಿದರು.
ಸಮಾರಂಭದ ಸಾನಿಧ್ಯ ವಹಿಸಿದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಹಾರಕೂಡ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ರೇವಣಸಿದ್ಧ ಹೂಗಾರ ಮುಂತಾದವರು ಉಪಸ್ಥಿತರಿದ್ದರು.