ಕಿರಿಯರು-ಹಿರಿಯರ ಸಮ್ಮೀಲನವೇ ಸಮಾಜಕ್ಕೆ ಆದರ್ಶ: ಶ್ರೀ ಘನಲಿಂಗ ದೇವರು

ಕಿರಿಯರು-ಹಿರಿಯರ ಸಮ್ಮೀಲನವೇ ಸಮಾಜಕ್ಕೆ ಆದರ್ಶ: ಶ್ರೀ ಘನಲಿಂಗ ದೇವರು

ಕಿರಿಯರು-ಹಿರಿಯರ ಸಮ್ಮೀಲನವೇ ಸಮಾಜಕ್ಕೆ ಆದರ್ಶ: ಶ್ರೀ ಘನಲಿಂಗ ದೇವರು

ಕಲಬುರಗಿ: ಸಮಾಜದಲ್ಲಿ ಹಿರಿಯರ ಅನುಭವ, ಕಿರಿಯರ ಉತ್ಸಾಹ ಒಂದಾಗಿ ಸೇರಿದಾಗ ಅದ್ಭುತ ಸಾಧನೆ ಸಾಧ್ಯವಾಗುತ್ತದೆ. ಇದಕ್ಕಾಗಿ ತ್ಯಾಗ, ರಾಜಿ ಮನೋಭಾವ ಹಾಗೂ ಹೃದಯ ವೈಶಾಲ್ಯ ಅಗತ್ಯ ಎಂದು ವಿಜಯಪೂರದ ಶ್ರೀ ಘನಲಿಂಗ ದೇವರು ಅಭಿಪ್ರಾಯಪಟ್ಟರು.

ವಿದ್ಯಾನಗರ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಆಯೋಜಿಸಲಾದ ಗಣೇಶೋತ್ಸವ – 2025 ಹಾಗೂ ಸಂಘದ 27ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

“ಹಿರಿಯರು-ಕಿರಿಯರು ಒಟ್ಟಾಗಿ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಇಂದಿನ ಸಮಾಜಕ್ಕೆ ಮಾದರಿಯಾಗಿದೆ” ಎಂದು ಅವರು ಯುವಕರನ್ನುದ್ದೇಶಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ, ಶ್ರೀ ಗಂಗಾಧರ ಸ್ವಾಮೀ ಅಗ್ಗಿಮಠ, ಅರವಿಂದ ಮಂಗಾಣೆ, ಮಲ್ಲಿನಾಥ ದೇಶಮುಖ, ವಿರೇಶ ನಾಗಶೆಟ್ಟಿ, ಕರಣ ಆಂದೋಲಾ, ಗುರುರಾಜ ಮುಗಳಿ ಉಪಸ್ಥಿತರಿದ್ದರು.

ಆರಂಭದಲ್ಲಿ ರೇಖಾ ಅಂಡಗಿ ಪ್ರಾರ್ಥನೆ ಸಲ್ಲಿಸಿದರು, ವಿಶ್ವನಾಥ ಮಂಗಲಗಿ ವಚನ ಗಾಯನ ಮಾಡಿದರು. ಗುರುರಾಜ ಮುಗಳಿ ನಿರೂಪಣೆ ನಡೆಸಿ, ಗುರುಲಿಂಗಯ್ಯ ಮಠಪತಿ ಸ್ವಾಗತಿಸಿದರು.

ಜುಲೈ 28ರಿಂದ 31ರವರೆಗೆ ಮಧ್ಯಾಹ್ನ 3ರಿಂದ 6 ಗಂಟೆಯವರೆಗೆ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ಹಮ್ಮಿಕೊಳ್ಳಲಾಗುತ್ತಿದ್ದು, ಶಶಿಧರ ಪ್ಯಾಟಿ, ಶ್ರೀವತ್ಸ ಸಂಗೋಳಗಿ, ಸಂಗಮೇಶ ಹೆಬ್ಬಾಳ, ಧರ್ಮರಾಜ ಹೆಬ್ಬಾಳ ಹಾಗೂ ಶಿವರಾಜ ಕೋಳಕೂರ ಅವರನ್ನು ಸ್ಪರ್ಧೆಗಳ ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.