ಸಮಾಜ ಸೇವೆಯಲ್ಲಿ ಪ್ರಭಾವ ಬೀಸಿದ ಪಿ.ಎಂ. ಮಣ್ಣೂರರ 77ನೇ ಜನ್ಮದಿನ ಆಚರಣೆ”

ಸಮಾಜ ಸೇವೆಯಲ್ಲಿ ಪ್ರಭಾವ ಬೀಸಿದ ಪಿ.ಎಂ. ಮಣ್ಣೂರರ 77ನೇ ಜನ್ಮದಿನ ಆಚರಣೆ”

ಸಮಾಜ ಸೇವೆಯಲ್ಲಿ ಪ್ರಭಾವ ಬೀಸಿದ ಪಿ.ಎಂ. ಮಣ್ಣೂರರ 77ನೇ ಜನ್ಮದಿನ ಆಚರಣೆ” 

ಪಿಎಂ ಮಣ್ಣೂರರ 77ನೇ ಜನ್ಮದಿನ ಆಚರಣೆ: ಸಮಾಜ ಸೇವೆ, ಸಾಹಿತ್ಯ, ಪತ್ರಿಕೋದ್ಯಮಕ್ಕೆ ಮೌಲ್ಯಮಾಪನ 

ಕಲಬುರಗಿ, ಜು.1: ಸಮಾಜ ಚಿಂತಕ, ಸಾಹಿತಿ, ಪತ್ರಕರ್ತ, ಕಲಾವಿದ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾಗಿರುವ ಪಿ.ಎಂ. ಮಣ್ಣೂರ ಅವರ 77ನೇ ಜನ್ಮದಿನವನ್ನು ಕೆ.ಕೆ.ಸಿ.ಸಿ.ಐ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಗದ್ದುಗೆ ಮಠ ಮುಕ್ತಂಪರದ ಮ.ನಿ.ಪ್ರ ಚರಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಡಾ. ಲಿಂಗರಾಜಪ್ಪ ಅಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನಿ ಹಾಗೂ ನಿವೃತ್ತ ಯೋಜನಾ ನಿರ್ದೇಶಕರಾದ ಡಾ.ಡಿ.ಎಂ. ಮಣ್ಣೂರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಪ್ಪಾರಾವ್ ಅಕ್ಕೋಣಿ, ದೇವೇಂದ್ರಪ್ಪ ಕಪನೂರ, ವೈದ್ಯ ಡಾ. ಎಸ್.ಎಸ್. ಗುಬ್ಬಿ, ಕೆ.ಕೆ.ಸಿ.ಸಿ.ಐ ಅಧ್ಯಕ್ಷ ಶರಣು ಪಪ್ಪಾ, ಪತ್ರಕರ್ತರು ಬಾಬುರಾವ್ ಯಡ್ರಾಮಿ, ಗುರುರಾಜ್ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸತ್ಯಕಾಮ ಪತ್ರಿಕೆಯ ಸಂಪಾದಕರಾದ ಆನಂದ ಮಣ್ಣೂರ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತಂದೆಯ ಹೆಸರು ಮರೆಯಲಾರದ ಹಾಗೆ ಮಾಡಿದರೆ ಎಂದು ಲಿಂಗರಾಜ ಅಪ್ಪಾ ಬಣ್ಣಿಸಿದರು.

ಪೂರ್ಣ ವ್ಯಕ್ತಿತ್ವದ ಪ್ರತೀಕ ಮಣ್ಣೂರ:

ಮಣ್ಣೂರ ಅವರ ಬಡತನದಿಂದ ಶುರುವಾದ ಜೀವನ, ಪತ್ರಿಕೋದ್ಯಮ, ಸಾಹಿತ್ಯ, ಸಂಘಟನಾ ಚಟುವಟಿಕೆಗಳಲ್ಲಿ ನಿರಂತರ ಸೇವೆ ನೀಡಿದ ಬಗ್ಗೆ ಅವರ ಸಹೋದರ ಡಾ. ಡಿ.ಎಂ. ಮಣ್ಣೂರ ಭಾವುಕರವಾಗಿ ನುಡಿದರು. ಮಣ್ಣೂರರಿಂದ ನಗುವು ಮತ್ತು ಸ್ನೇಹದ ಗುಣ ಕಲಿತೆ ಎಂಬುದಾಗಿ ವೈದ್ಯ ಡಾ. ಎಸ್.ಎಸ್. ಗುಬ್ಬಿ ಹೇಳಿದರು.

            ಸಂಗೀತ, ಸ್ಮರಣಾ ನುಡಿಗಳು, ಗೌರವ:

ಬಾಬುರಾವ್ ಕೋಬಾಳ, ಬಸಯ್ಯ ಗುತ್ತೇದಾರ, ಕಿರಣ ಪಾಟೀಲ, ಸಂತೋಷ ಕೋಡ್ಲಿ, ಮಾಹಾಂತೇಶ ಹರವಾಳ ಸಂಗಡಿಗರಿಂದ ಭಾವಗೀತೆ ಕಾರ್ಯಕ್ರಮ ನಡೆಯಿತು.

                    ಸತ್ಯಕಾಮ ಪ್ರಶಸ್ತಿ ಪ್ರದಾನ:

ಶಂಕರ ಕೋಡ್ಲಾ, ಅಜೀಜುಲ್ಲಾ ಸರಮಸ್ತ್, ರಾಮಕೃಷ್ಣ ಬಡಶೇಷಿ, ಹನುಮಂತರಾವ್ ಬೈರಾಮಡಗಿ, ಚಂದ್ರಕಾಂತ ಹುಣಸಗಿ, ಪ್ರದೀಪ್ ಕುಲಕರ್ಣಿ ಇವರಿಗೆ ಸತ್ಯಕಾಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣಗೌಡ ಪಾಟೀಲ ಪಾಳಾ, ಅಂಬಾರಾಯ ಕೋಣೆ, ಬಸವರಾಜ ಶಿವಗೋಳ, ಪ್ರೊ. ಶಿವರಾಜ ಪಾಟೀಲ, ಜರಣಪ್ಪ ಚಿಂಚೋಳಿ, ಚಾಮರಾಜ ದೊಡ್ಡಮನಿ, ಬಸವರಾಜ ಚೀನೀವಾರ, ಸಂಗಮನಾಥ, ಜಯತೀರ್ಥ ಪಾಟೀಲ, ದೇವೇಂದ್ರಪ್ಪ ಆವಂಟಿ, ರಾಜಕುಮಾರ ಉದನೂರ ಮತ್ತಿತರರು ಭಾಗವಹಿಸಿದ್ದರು.

ಮಣ್ಣೂರರ ಕುಟುಂಬದ ಸದಸ್ಯರಾದ ಆನಂದ, ಸ್ವರೂಪಾರಾಣಿ, ಅನೂರೂಪ, ಅನುಷಾ ಉಪಸ್ಥಿತರಿದ್ದರು.