ಶಾಲಾ ಬಸ್ ಪಲ್ಟಿ : ಮಕ್ಕಳಿಗೆ ಸಣ್ಣ ಪುಟ್ಟ ಗಾಯ

ಶಾಲಾ ಬಸ್ ಪಲ್ಟಿ : ಮಕ್ಕಳಿಗೆ ಸಣ್ಣ ಪುಟ್ಟ ಗಾಯ
ಶಿರವಾಳ (ಅಫಜಲಪುರ ತಾಲೂಕು), ಜು. 11:ಅಫಜಲಪುರ ತಾಲೂಕಿನ ಶಿರವಾಳ ಗ್ರಾಮದ ಖಾಸಗಿ ಶಿಕ್ಷಣ ಸಂಸ್ಥೆಯಾದ ಶ್ರೀ ವೀರಸಂಗಮೇಶ್ವರ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳನ್ನು ಹೊತ್ತೊಯ್ದು ಬರುತ್ತಿದ್ದ ಶಾಲಾ ಬಸ್ ಇಂದು ಸಂಜೆ ಅಪಘಾತಕ್ಕೀಡಾದರೂ ಭಾರಿ ಅನಾಹುತ ತಪ್ಪಿದ ಭಗ್ನ ಘಟನೆಯೊಂದು ವರದಿಯಾಗಿದೆ.
ಶಾಲೆಯ ಅವಧಿ ಮುಗಿದ ನಂತರ ವಿದ್ಯಾರ್ಥಿಗಳನ್ನು ಉಡುಚಣ ಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ಸಮಯದಲ್ಲಿ, ವೇಗವಾಗಿ ಸಾಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯಲ್ಲಿ ನಿಂತಿದ್ದ ಆಟೋ ರಿಕ್ಷಾಗೆ ಡಿಕ್ಕಿಯಾಗಿ ಬಸ್ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದಿದೆ. ಘಟನೆ ಅಫಜಲಪುರ ತಾಲ್ಲೂಕಿನ ಬಂಕಲಗಿ ಮಧ್ಯೆ ಶುಕ್ರವಾರ ಸಂಜೆ 4:30ರ ಸುಮಾರಿಗೆ ನಡೆದಿದೆ.
ಅಪಘಾತದ ವೇಳೆ ಸುಮಾರು 52 ವಿದ್ಯಾರ್ಥಿಗಳು ಬಸ್ಸಿನಲ್ಲಿ ಇದ್ದರು. ಅದೃಷ್ಟವಶಾತ್ ಭಾರಿ ಅನಾಹುತವಿಲ್ಲದೇ ಬಚಾವಾಗಿದ್ದು, 4 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಚಾಲಕ ವಿಠ್ಠಲ ಮೇತ್ರಿ ವಿರುದ್ಧ ವಿದ್ಯಾರ್ಥಿಗಳ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯ ಚಾಲನೆಯು ಮಕ್ಕಳ ಪ್ರಾಣಕೆಸಿದ ಅಪಾಯಕ್ಕೆ ಕಾರಣವಾದ ಆರೋಪವನ್ನು ಮಾಡಿದ್ದಾರೆ. ಸದ್ಯದಲ್ಲಿ ಪೊಲೀಸ್ ತನಿಖೆ ಹಾಗೂ ಚಾಲಕನ ಮೇಲಿನ ಕ್ರಮದ ನಿರೀಕ್ಷೆಯಿದೆ.
ಸ್ಥಳಕ್ಕೆ ತಕ್ಷಣವೇ ಪೊಲೀಸ್ ಸಿಬ್ಬಂದಿ ಹಾಗೂ ಶಾಲೆಯ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ
.
---