ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ವಿ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ವಿ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ವಿ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಕಲಬುರ್ಗಿ: 31 ವರ್ಷ ವಯಸ್ಸಿನ ಲಕ್ಷ್ಮಿ ಎಂಬ ಮಹಿಳೆಯು ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದಳು. ಚಿಕಿತ್ಸೆಗಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಳು. ಇವಳಿಗೆ ಜೀವಕ್ಕೆ ಅಪಾಯಕಾರಿಯಾದ ಅಪರೂಪದ ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿದ್ದಳು ಈಕೆ 8 ತಿಂಗಳು ಗರ್ಭಿಣಿಯಾಗಿರುವ ಇವಳಿಗೆ ಆಂಟಿ ಪಾರ್ಟಂ ಎಕ್ಲಾಂಪ್ಸಿಯಾ ತೊಂದರೆಯಿದೆ ಎಂದು ಗುರುತಿಸಿ ತಕ್ಷಣವೆ ಆಸ್ಪತ್ರೆಯಲ್ಲಿ ಇಂಟ್ಯುಬೇಷನ್ ಮಾಡಿ ಆಂಟಿ ಹೈಪರ್ ಟೆನ್ಸಿವ್ ಗಳಿಂದ ಚಿಕಿತ್ಸೆ ನೀಡಲಾಯಿತು ಆದರೆ ಅವಳು ಗರ್ಭಾವಸ್ಥೆಯ ಮಧುಮೇಹ ( Gestational Diabetes), ಮತ್ತು ಹೈಪೋಥೈರಾಯಿಡಿಸಂ ಹಾಗೂ HBsag ಪಾಸಿಟಿವ್ ಇರುವುದು ಕಂಡು ಬಂತು. ಗರ್ಭಿಣಿಯ ಜೀವ ಉಳಿಸುವ ಸಲುವಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಲಾಯಿತು ಅವಳಿಗೆ ಅವಳಿ ಎರಡು ಹೆಣ್ಣು ಮಕ್ಕಳು ಜನಿಸಿದವು ಶಸ್ತ್ರ ಚಿಕಿತ್ಸೆ ಸುಗಮವಾಗಿ ನಡೆದು ಮಕ್ಕಳು ಸಹ ಸುರಕ್ಷಿತವಾಗಿದ್ದವು ಆದರೆ ಗರ್ಭಿಣಿಗೆ ಟಕೋಟ್ಸುಬೋ ಕಾರ್ಡಿಯೋಮ್ಯೋಪತಿ ( Takotsubo cardiomyopathy) ಎಂಬ ಅಪರೂಪದ ಹೃದಯರೋಗ ತಗುಲಿ ಕೊಂಡಿತು. ಇದರಲ್ಲಿ ಹೃದಯದ ಇಜೇಕ್ಷನ್ ಫ್ರಾಕ್ಷನ್ ಕೇವಲ ಪ್ರತಿಶತ 40 ಇತ್ತು. ತಕ್ಷಣ ಎಂ ಆರ್ ಐ ಮಾಡಲು ನಿರ್ಧರಿಸಲಾಯಿತು ಪರೀಕ್ಷೆಯಲ್ಲಿ ಆ ಹೆಣ್ಣು ಮಗಳಿಗೆ ಪೋಸ್ಟೀರಿಯರ್ ರಿವರ್ಸಿಬಲ್ ಎನ್ಸೆಫಲೋಪತಿ ಸಿಂಡ್ರೋಮ್ (PRES) ಲಕ್ಷಣಗಳು ಕಂಡು ಬಂದವು. ಇದನ್ನು ಗಮನಿಸಿದ ಆಸ್ಪತ್ರೆಯ ನುರಿತ ವೈದ್ಯರ ತಂಡ ತಕ್ಷಣ ಚಿಕಿತ್ಸೆ ಮುಂದುವರಿಸಿತು ಕೂಡಲೆ ಚಿಕಿತ್ಸೆಗೆ ಸ್ಪಂದಿಸಿದ ಆ ರೋಗಿಗೆ ಶಸ್ತ್ರಚಿಕಿತ್ಸಯ ಎರಡನೆಯ ದಿನವೆ ಎಕ್ಸ್ಟ್ಯಬೇಟ್ ಮಾಡಿ ಚಿಕಿತ್ಸೆ ಮುಂದುವರಿಸಿದಾಗ ಅವಳ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿತು. ಐದನೆಯ ದಿನ ಅವಳನ್ನು ಪರೀಕ್ಷೆಗೆ ಒಳಪಡಿಸಿದಾಗ ಎಕೋಕಾರ್ಡಿಯೋಗ್ರಾಂ ಪರೀಕ್ಷೆಯಲ್ಲಿ ಹೃದಯದ ಸಾಮರ್ಥ್ಯ ಅತ್ಯುತ್ತಮವಾಗಿರುವದು ದೃಢಪಟ್ಟಿದ್ದು ಅವಳು ಅಪಾಯದಿಂದ ಪಾರಾಗಿದ್ದರಿಂದ ಅವಳಿಗೆ ನಿರಂತರ ಚಿಕಿತ್ಸೆ ನೀಡಿದ ವೈದ್ಯಕೀಯ ತಂಡಕ್ಕೆ ಸಂತೋಷವಾಯಿತು.

ಈ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರ ತಂಡದಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಡಾ ಮೀನಾಕ್ಷಿ ದೇವರಮನಿ ನೇತ್ರತ್ವ ವಹಿಸಿದ್ದರು. ಹಿರಿಯ‌ ತಜ್ಞ ವೈದ್ಯರಾದ ಡಾ ನೀತಾ ಹರವಾಳ, ಡಾ ಭಾಗ್ಯಶ್ರೀ ಪಾಟೀಲ್,ಡಾ ಸಂಜನಾ ಪಾಟೀಲ್,ಡಾ ಪೂಜಾ ಪಾಟೀಲ್ ಹೃದಯ ರೋಗ ತಜ್ಞರಾದ ಡಾ ಈರಣ್ಣ ಹೀರಾಪೂರ,ಡಾ ಸೋಹೈಲ್,ಡಾ ವಿಕಾಸ ಜೋಶಿ ,ಡಾ ಮಂಜುಶ್ರೀ ಅವರ ಜೋತೆ ಸ್ನಾತಕೋತ್ತರ ಪದವಿ ವೈದ್ಯರಾದ ಡಾ ಮೇರಿ,ಆಶಾ ಡಿ, ಡಾ ಅನುಪಮಾ ಎವಳೆ, ಹಾಗೂ ಡಾ ಅನುಶ್ರೀ ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ತಾಯಿ ಮತ್ತು ಮಕ್ಕಳ ಸುರಕ್ಷತೆಗೆ ಶ್ರಮಿಸಿದ ವೈದ್ಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್, ವೈದ್ಯಕೀಯ ಅಧಿಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ ಅಭಿನಂದನೆ ಸಲ್ಲಿಸಿದ್ದಾರೆ.