ಅಧಿಕಾರಿಗಳ ನಿರ್ಲಕ್ಷದಿಂದ ಜೀವ ಹಾನಿಗಾಗಿ ಕೈಬೀಸಿ ಕರೆಯುತ್ತಿರುವ ವಿದ್ಯುತ್ ತಂತಿಗಳು
ಗುರುಮಠಕಲ್ ತಾಲೂಕ ವರದಿಗಾರರು :ಭೀಮರಾಯ ಯಲ್ಹೇರಿ.
ಅಧಿಕಾರಿಗಳ ನಿರ್ಲಕ್ಷದಿಂದ ಜೀವ ಹಾನಿಗಾಗಿ ಕೈಬೀಸಿ ಕರೆಯುತ್ತಿರುವ ವಿದ್ಯುತ್ ತಂತಿಗಳು
ಯಾದಗಿರ/ಗುರುಮಠಕಲ್ : ಗುರುಮಠಕಲ್ ತಾಲೂಕಿನ ಯಲ್ಹೇರಿ ಗ್ರಾಮದ ಸಾರ್ವಜನಿಕರು ಓಡಾಡುವ ಪ್ರಮುಖ ರಸ್ತೆಯಲ್ಲಿ ವಿದ್ಯುತ್ ತಂತಿಗಳು ಜೋತು ಬಿದಿದ್ದು ಅಲ್ಲದೆ ವಿದ್ಯುತ್ ತಂತಿಗಳ ಮಧ್ಯದಲ್ಲಿ ತುಂಡು ಆಗುತ್ತಿವೆ. ಈ ರಸ್ತೆಯಲ್ಲಿ ಶಾಲಾ ವಾಹನಗಳು ಓಡಾಡುತ್ತವೆ,ವಿದ್ಯುತ್ ತಂತಿ ಜೋತು ಬಿದ್ದಿರುವುದರಿಂದ ಶಾಲಾ ವಾಹನಗಳು ಬೇರೆ ಮಾರ್ಗವಾಗಿ ಸಂಚರಿಸುತ್ತಿವೆ. ಅಲ್ಲದೆ ಸಾರ್ವಜನಿಕರು,ರೈತರು ಕಬ್ಬಿಣದ ಸಲಕರಣೆಗಳನ್ನು ಮನೆಗಳ ಕಟ್ಟಡಕ್ಕಾಗಿ, ಹೊಲಗಳ ಕಾಮಗಾರಿಗಾಗಿ ವಾಹನಗಳ ಮೇಲೆ ಸಾಗಾಟ ಮಾಡುವಾಗ ಸ್ವಲ್ಪ ಮರೆತು ಕಬ್ಬಿಣದ ವಸ್ತುಗಳನ್ನು ಮೇಲೆ ಏತ್ತಿದರೂ ವಾಹನದಲ್ಲಿ ಸಂಚರಿಸುವ ಎಲ್ಲರಿಗೂ ಜೀವ ಹಾನಿ ಆಗುವ ಸಂಭವವಿದೆ. ಈ ಬಗ್ಗೆ ಲೈನ್ ಮ್ಯಾನ್, ಜೆ.ಇ, ಎಇ ಇ, ಮತ್ತು ಇ.ಇ ರವರಿಗೆ ಎಷ್ಟೋ ಬಾರಿ ಕರೆಯ ಮೂಲಕ ಹಾಗೂ ನೇರವಾಗಿ ಭೇಟಿಯಾಗಿ ತಿಳಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಅಪಾಯ ಸಂಭವಿಸುವುದಕ್ಕಿಂತ ಮುಂಚೆ ಸಾರ್ವಜನಿಕರಿಗೆ,ಶಾಲಾ ಮಕ್ಕಳಿಗೆ, ತೊಂದರೆಯಾಗದಂತೆ ಆದಷ್ಟ ಬೇಗ ಸಮಸ್ಯೆಯನ್ನು ಬಗೆಹರಿಸಬೇಕು. ಕಟ್ಟಾಗುತ್ತಿರುವ ಜೋತು ಬಿದ್ದ ವಿದ್ಯುತ್ ತಂತಿಯಿಂದ ಯಾವುದೇ ಅಪಾಯ ಸಂಭವಿಸಿದರೆ ಇದಕ್ಕೆ ನೇರ ಹೊಣೆಗಾರರು ಸಂಬಂಧಪಟ್ಟ ಜೇಸ್ಕಾಂ ಅಧಿಕಾರಿಗಳು ಆಗಿರುತ್ತಾರೆ. ಬಡ ರೈತರ ಬಗ್ಗೆ ,ಶಾಲಾ ಮಕ್ಕಳ ಬಗ್ಗೆ,ಸಾರ್ವಜನಿಕರ ಬಗ್ಗೆ ಕಾಳಜಿ ಇದ್ದರೆ ಜಿಲ್ಲಾಧಿಕಾರಿಗಳು ಹಿತ್ತ ಗಮನಹರಿಸಿ ಆದಷ್ಟು ಬೇಗ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಹೇಳಿ, ಸಮಸ್ಯೆ ಪರಿಹರಿಸದಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.