ವಿಕಲಚೇತನರು ಸರಕಾರಿ ಸೌಲಭ್ಯಗಳ ಪಡೆದುಕೊಳ್ಳಿ.

ವಿಕಲಚೇತನರು ಸರಕಾರಿ ಸೌಲಭ್ಯಗಳ ಪಡೆದುಕೊಳ್ಳಿ.
ಶಹಪುರ : ಸರಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳು ವಿಕಲಚೇತನರು ಸದುಪಯೋಗಪಡಿಸಿಕೊಳ್ಳಬೇಕೆಂದು ಪಂಚಾಯಿತಿ ಅಧಿಕಾರಿ ಯಮನೂರಪ್ಪ ಹೇಳಿದರು
ತಾಲೂಕಿನ ಇಬ್ರಾಹಿಂಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಜೀವನ ಜ್ಯೋತಿ ಸಂಜೀವಿನಿ ಒಕ್ಕೂಟ ( ಎನ್.ಆರ್.ಎಲ್.ಎಂ) ವತಿಯಿಂದ ವಿಶೇಷ ವಿಕಲಚೇತನರಿಗೆ ಒಂದುವರೆ ಲಕ್ಷ ರೂಪಾಯಿ ಸಾಲ ವಿತರಿಸಿ ಮಾತನಾಡಿದರು.
ಎನ್ ಆರ್ ಎಲ್ ಎಂ ನಿಂದ ಪಡೆದ ಸಾಲವನ್ನು ಸದುಪಯೋಗ ಮಾಡಿಕೊಂಡು ಅದರಿಂದ ಉತ್ತಮ ಲಾಭ ಪಡೆದು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಪಂಚಾಯಿತಿ ಅಧ್ಯಕ್ಷ ಸಮೀನಾ ಬೇಗಮ್ ಹೇಳಿದರು ಹೇಳಿದರು.
ಈ ಸಂದರ್ಭದಲ್ಲಿ ಸೂಗಣ್ಣ, ಶಿವಾನಂದ,ಬಸವರಾಜ್ ಗಡ್ಡೇಸುಗೂರು,ವಿ ಆರ್ ಡಬ್ಲ್ಯೂ ನಾಗರಾಜ ಗ್ರಾಮ ಪಂಚಾಯಿತಿ ಸದಸ್ಯ ನೀಲಮ್ಮ ದೇಸಾಯಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ರಾಮದ ಹಿರಿಯ ಮುಖಂಡರು ಸೇರಿದಂತೆ ಇನ್ನಿತರರು ಹಾಜರಿದ್ದರು.