ಸಚಿವ ಪ್ರೀಯಾಂಕ್ ಖರ್ಗೆ ಅವರಿಗೆ ಅಭಿನಂದನೆ: ಶೈಲೇಂದ್ರ ಅಂಭಾರಾಯ ದಂಡಿನ
ಸಚಿವ ಪ್ರೀಯಾಂಕ್ ಖರ್ಗೆ ಅವರಿಗೆ ಅಭಿನಂದನೆ: ಶೈಲೇಂದ್ರ ಅಂಭಾರಾಯ ದಂಡಿನ
ಕಲಬುರಗಿ:ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಪುತ್ಥಳಿ ಅನಾವರಣಕ್ಕೆ ಅವ್ಹಾನ ನೀಡಿರುವ ಸಚಿವ ಪ್ರೀಯಾಂಕ್ ಖರ್ಗೆ ಅವರಿಗೆ ಅಭಿನಂದನೆ: ಶೈಲೇಂದ್ರ ಅಂಭಾರಾಯ ದಂಡಿನ
ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಪುತ್ಥಳಿ ಅನಾವರಣಕ್ಕೆ ಅವ್ಹಾನ ನೀಡಿರುವ ಸಚಿವ ಪ್ರೀಯಾಂಕ್ ಖರ್ಗೆ ಅವರಿಗೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಶೈಲೇಂದ್ರ ಅಂಭಾರಾಯ ದಂಡಿನ ಅವರು ಸಚಿವರನ್ನು ಭೇಟಿ ಮಾಡಿ ಅಭಿನಂದನೆಗಳು ಸಲ್ಲಿಸಿದ್ದಾರೆ.
ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಪುತ್ಥಳಿ ಅನಾವರಣಕ್ಕೆ ಅವ್ಹಾನ ನೀಡಿಲಾಯಿತು. ಇದಕ್ಕೆ ಸಚಿವರು ಸ್ಪಂದಿಸಿ ಎರಡು ತಿಂಗಳೊಳಗಡೆ ದಿನಾಂಕ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೇಶ ಭಾವಿಮನಿ, ವೆಂಕಟೇಶ ಎಂ. ಸಾಗರ, ಅರುಣಕುಮಾರ ಎಂ. ದಂಡಿನ, ಅಮೃತ ಭಾವಿಮನಿ, ಮಲ್ಲಿಕಾರ್ಜುನ ನಾಗೂರ, ಉಮೇಶ ಆರ್. ಸಾಗರ ಸೇರಿದಂತೆ ಗ್ರಾಮದ ಮುಖಂಡರು, ಮಹಿಳೆಯರು ಇದ್ದರು
.