ಒಳ್ಳೆ ಸಂಸ್ಕಾರಕ್ಕೆ ಗುರುವಿನ ಪಾತ್ರ ಬಹಳ ಮುಖ್ಯವಾಗಿದೆ: ಪಟ್ಟದ್ದೇವರ ಹೇಳಿಕೆ.

ಒಳ್ಳೆ ಸಂಸ್ಕಾರಕ್ಕೆ ಗುರುವಿನ ಪಾತ್ರ ಬಹಳ ಮುಖ್ಯವಾಗಿದೆ: ಪಟ್ಟದ್ದೇವರ ಹೇಳಿಕೆ.

ಕಮಲನಗರ: ತಾಲೂಕಿನ ಡಾ|| ಚನ್ನಬಸವ ಪಟ್ಟದ್ದೇವರ ಪ್ರೌಢ ಶಾಲೆ, ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್ ಲ್ಲಿನಲ್ಲಿ ಗುರುವಂದನಾ ಮತ್ತು ಪತ್ರಕರ್ತರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು. 

ಕಮಲನಗರ: ಒಳ್ಳೆ ಸಂಸ್ಕಾರಕ್ಕೆ ಗುರುವಿನ ಪಾತ್ರ ಬಹಳ ಮುಖ್ಯವಾಗಿದೆ: ಪಟ್ಟದ್ದೇವರ ಹೇಳಿಕೆ.

 ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳಾದ ಪರಮ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮುಂದಿನ ಭವಿಷ್ಕಕ್ಕೆ ಶಿಕ್ಷರ ಪಾತ್ರ ದೇವರ ಪಾತ್ರೆಗೆ ಸಮವಾಗಿದೆ ಎಂದು ನುಡಿದರು.ಮತ್ತು ಅದು ಒಳ್ಳೆಯ ಸಂಸ್ಕಾರದಿಂದ ಕೂಡಿರುವ ನಡತೆ ಶುದ್ಧ ಬದುಕು ಪವಿತ್ರ ಕಾಯಕ ಶಿಕ್ಷಕನಲ್ಲಿ ಮೊದಲು ಇರಬೇಕು, ಮುಂದಿನ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಕರ ಒಳ್ಳೆಯ ಜೀವನದ ಮೌಲ್ಯಗಳು ಸಂಸ್ಕಾರಗಳು ದಯೆ ಪ್ರೀತಿ ಪ್ರೇಮ ಅಂತಃಕರಣದಿಂದ

ಒಳಗೊಂಡಿರಬೇಕು. ಮಕ್ಕಳಿಗೆ ಮೌಲಿಕವಾಗಿರುವ ಕಥೆಗಳ ದಷ್ಟಾಂತಗಳನ್ನು ಹಾಸ್ಯದೊಂದಿಗೆ ತಿಳಿಹೇಳಿದರು. ಅದೆ ರೀತಿ ತಾಲ್ಲೂಕಿನ ಎಲ್ಲಾ ಪತ್ರಕರ್ತರನ್ನು ಪೂಜ್ಯರಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀಯುತ ಚನ್ನಬಸವ ಘಾಳೆ ಮಾತನಾಡಿದರು. ಹಾಗೂ ನಿವೃತ ಶಿಕ್ಷಕರಾದ ರಾಜೇಂದ್ರ ಬಿರಾದರ ಹೊರಂಡಿ, ಶಶಿಕುಮಾರ ಕಟ್ಟೆ , ಪ್ರಶಾಂತ ರೆಡ್ಡಿರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು 

 ವಿಶೇಷವಾಗಿ ಶಿವನಂದ ವಡ್ಡೆ ಕಾರ್ಯಕ್ರಮವು ಉದ್ಘಾಟನೆ ನೆರವೇರಿಸಿದರು. ಪರಮಪೂಜ್ಯ ಶ್ರೀ ನಾಡೋಜಾ ಡಾಕ್ಟರ್ ಬಸವಲಿಂಗಪಟ್ಟದೇವರು ಶಿವಕುಮಾರ್ ಕಟ್ಟೆ ಪ್ರಶಾಂತ್ ರೆಡ್ಡಿ ರಾಜೇಂದ್ರ ಬಿರಾದಾರ್ ಪ್ರಾಂಶುಪಾಲರಾದ ಶ್ರೀಧರ ರೆಡ್ಡಿ ಪತ್ರಕರ್ತರಾದ ಡಾಕ್ಟರ್ ಎಸ್ ಎಸ್ ಮೈನಾಳೆ ಗಣಪತಿ ಕುರನಾಳೆ ಚಂದ್ರಕಾಂತ್ ಗಳಗೆ,ಶ್ರೀ ಅನಿಲ್ ಕುಲಕರ್ಣಿ ಉಪಸ್ಥಿತಿಯಲ್ಲಿ ಇದ್ದರು.

 ಅದೇ ರೀತಿಯಲ್ಲಿ ಸಂಜುಕುಮಾರ ಹಡಪದ, ಪಲ್ಲವಿ ನಾಯ್ಕ, ಶೇಖರ ಚಂದ್ರಕಾಂತ ಗಳಗೆ, ವಿಜಯಕುಮಾರ ಶೆಗೆದಾರ, ವಿಶಾಲ ಸೋಲಾಪುರೆ, ಕಾಮಾಕ್ಷಸುತ್ತಾರ, ವಿಜಯಲಕ್ಷಮಿ ಎಕಲಾರೆ, ರಾಜೇಶ್ರ ಸಿರಸಿಗೆ, ರಾಜೇಶ್ವರಿ ಬಿರಾದಾರ, ರಂಜನಾ ಪಾಟೀಲ, ಶಿವಲಿಲಾ ದರೆಗಾವೆ, ಶೋಭಾ ಪಾಟೀಲ, ಜ್ಯೋತಿ ಘಾಳೆ, ಗ್ರೇಸ್.ಡಿ.ಎಮ್, ಶಿವಕುಮಾರ ಎಕಲಾರೆ, ಮೇಘರಾಜ ಪವಾರ, ಹಾವಗಿರಾವ ಮಠಪತಿ , ಅನೇಕರು ಸಿಬ್ಬಂದಿ ವರ್ಗದವರು ಉಪಸ್ಥಿದ್ದರು 

ನಿರೂಪಣೆ ಕುಮಾರಿ ವೈಷ್ಣವಿ ಶಿವಕುಮಾರ್ ಹಾಗೂ ಮಾನಸಿ ವಿಕಾಸ ನಡೆಸಿ ಕೊಟ್ಟಿರುತ್ತಾರೆ ವಂದನಾರ್ಪಣೆ ಕುಮಾರಿ ಲಕ್ಷ್ಮೀ ಪಾಂಡುರಂಗ ಮಾಡಿದರು.

ಕಾರ್ಯಕ್ರಮದಲ್ಲಿ ಅಪ್ಪಾಜಿ ಅವರನ್ನು ಭಕ್ತಿ ಪೂಜೆ ಸಲ್ಲಿಸಿದರು.: ಡಾಕ್ಟರ್ ಚನ್ನಬಸವ ಪಟ್ಟದೇವರು ಪ್ರೌಢಶಾಲೆ ,ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯಪಬ್ಲಿಕ್ ಸ್ಕೂಲ್ ನಲ್ಲಿ, ಅಪ್ಪಾಜಿಯವರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ವಿಶೇಷ 41 ಪುಷ್ಪಗಳಿಂದ ಭಕ್ತಿಯ ಪೂಜೆ ನೆರವೇರಿತು

ಡಾ ಚನ್ನಬಸವ ಪಟ್ಟದ್ದೇವರು ಪ್ರೌಢಶಾಲೆ ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರು ಕಾರುಣ್ಯ ಪಬ್ಲಿಕ್ ಸ್ಕೂಲ್ ನಲ್ಲಿ ಬಹಳ ವಿಜೃಂಭಣೆಯಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಶಾಲೆಯ ಎಲ್ಲಾ ಮಕ್ಕಳಿಂದ 60 ಕ್ಕುಹೆಚ್ಚು ಸಾಲಾಗಿ ಶಾಲಾ ಗುರುಗಳನ್ನು ಕೂಡಿಸಿ ವಿಶೇಷ ರೀತಿಯಲ್ಲಿ ಆರತಿ ದೀಪ ಪುಷ್ಪಗಳಿಂದ ಬೆಳಗಿಸಿ ಗುರುವಂದನೆ ಭಕ್ತಿ ಭಾವದಿಂದ ಶಾಲಾ ಮಕ್ಕಳು ಪೂಜೆ ಸಲ್ಲಿಸಿದರು.

ವರದಿ,ಸಂಗಮೇಶ್ವರ ಎಸ್ ಮುರ್ಕೆ ಹೊಳೆಸಮುದ್ರ ತಾಲೂಕು ಕಮಲನಗರ