ನಿವೃತ್ತ ಸಹ ಶಿಕ್ಷಕರು ಸೂರ್ಯಕಾಂತ್ ಎನ್ ಮಹಾಜನ ಸೇವಾ ಗೌರವ ಮತ್ತು ಸನ್ಮಾನ ಸಮಾರಂಭ
ನಿವೃತ್ತ ಸಹ ಶಿಕ್ಷಕರು ಸೂರ್ಯಕಾಂತ್ ಎನ್ ಮಹಾಜನ ಸೇವಾ ಗೌರವ ಮತ್ತು ಸನ್ಮಾನ ಸಮಾರಂಭ
ಕಮಲನಗರ:ಪವಿತ್ರವಾದ ಕ್ಷೇತ್ರ ಯಾವುದಾದರೂ ಇದ್ದರೆ, ಅದು ಶಿಕ್ಷಣ ಕ್ಷೇತ್ರ. ಸಂಸ್ಕೃತ್ಕನಾಗಿ, ನಾಗರಿಕನಾಗಿ ಎತ್ತರಕ್ಕೆ ಕೊಂಡುವನೇ ಶಿಕ್ಷಕ.ಆತ ಹೃದಯ ಭಕ್ತಿ ಉಳ್ಳವನಾಗಿದರೆ, ಗೌರವಕ್ಕೆ ಪಾತ್ರರಾಗುತ್ತಾನೆ. ಆತನ ಬದುಕು ವಿದ್ಯಾರ್ಥಿಗಳಿಗೆ ಅನುಕರಣೆಯ ಮಾರ್ಗದರ್ಶನವಾಗಬೇಕು ಎಂದು ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು ನುಡಿದರು.
ಪಟ್ಟಣದ ಖತಗಾಂವ ಗ್ರಾಮದಲ್ಲಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸೂರ್ಯಕಾಂತ್ ಎನ್ ಮಹಾಜನ ಸಹ ಶಿಕ್ಷಕರು ಸೇವಾ ಗೌರವ ಮತ್ತು ಸನ್ಮಾನ ಸಮಾರಂಭದ ಕಾರ್ಯಕ್ರಮಕ್ಕೆ ದಿವ್ಯ ನೇತೃತ್ವ ವಹಿಸಿ ಪೂಜ್ಯ ಗುರುಬಸವ ಪಟ್ಟದೇವರು ಎತ್ತರಕ್ಕೆ ಹೋಗುವ ಮಾರ್ಗ ಕಂಡುಕೊಳ್ಳಬೇಕಾದರೆ ಅದು ಗುರು ಕೃಪೆಯಿಂದ ಸಾಧ್ಯ ಎಂದು ಹಿತ ನುಡಿಗಳನ್ನು ಮಕ್ಕಳಿಗೆ ದೃಷ್ಟಾಂತವನ್ನು ನೀಡುವುದರ ಜೊತೆಗೆ ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು.
ಉದ್ಘಾಟಕರಾದ ಶ್ರೀ ಎಸ್ ಎಲ್. ಪ್ರಸನ್ನಕುಮಾರ್ ಉಪ ನಿರ್ದೇಶಕರು ಶಾ.ಶಿ. ಮತ್ತು ಸಾ. ಇ. ಬೀದರ್ ಯಾರೆ ಇರಲಿ ತಮ್ಮ ಜೀವನದಲ್ಲಿ ಇಲಾಖೆ ಕಾರ್ಯಗಳು ಚಟುವಟಿಕೆಗಳು ನಿರ್ಲಕ್ಷ್ಯದಿಂದ ಮಾಡುವಂತಿಲ್ಲ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಕೆಲಸಕ್ಕೆ ಸೇರುವುದು ಸಹಜ ಬೀಳ್ಕೊಡುಗೆ ಕಾರ್ಯಕ್ರಮವನ್ನು ಅನಿವಾರ್ಯ ಗುಣಮಟ್ಟದ ಶಿಕ್ಷಣ ವಾಗಬೇಕಾದರೆ ಸಾರ್ಥಕ ಸೇವೆ ಮಾಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಸಂತೋಷ್ ಕುಮಾರ್ ಪೂಜಾರಿ, ಶ್ರೀ ಲಕ್ಷ್ಮಣ್ ತುರೆ, ಶ್ರೀ ಗೋವಿಂದ ರೆಡ್ಡಿ, ಶ್ರೀ ಕುಶಾಲರಾವ ಯರನಾಳೆ, ಶ್ರೀ ಪ್ರಕಾಶ್ ರಾಥೋಡ, ದೂಳಪ್ಪ ಮೂಳೆನೊರ, ಶ್ರೀ ಶಿವಕಾಂತ ಹಣಮಶೆಟ್ಟಿ , ಶ್ರೀ ಜೋಯಲ್, ಶ್ರೀ ರವೀಂದ್ರ ರೆಡ್ಡಿ ,ಶ್ರೀ ಸುನಿಲ್ ಕುಮಾರ್ ಕಸ್ತೂರೆ, ಶ್ರೀ ಸೂರ್ಯಕಾಂತ ಬಿರಾದಾರ, ಶ್ರೀ ಬಸವರಾಜ್ ಪಾಟೀಲ, ಶ್ರೀ ಪ್ರಶಾಂತ ಮಠಪತಿ, ಶ್ರೀರಾಮರಾವ ತೇಗಂಪುರೆ, ಶ್ರೀ ರಮೇಶ್ ಬಿರಾದಾರ, ಶ್ರೀ ಬಲಭೀಮ್ ಕುಲಕರ್ಣಿ, ಶ್ರೀ ರಾಜಕುಮಾರ ಹಾಲಮಂಡಗೆ, ಶ್ರೀ ಸಂಜಯ ಮೈತ್ರೆ, ಶ್ರೀ ಶಶಿಕಾಂತ್ ಬಿಡವೆ, ಶ್ರೀ ಸಂತೋಷ್ ರೆಡ್ಡಿ, ಗ್ರಾಮ ಪಂಚಾಯತ್ ಸರ್ವ ಸದಸ್ಯರು ಪಾಲಕರು ಗ್ರಾಮಸ್ಥರು ಶಿಕ್ಷಣ ಪ್ರೇಮಿಗಳು ಅನೇಕರು ಸೇರಿದಂತೆ ಹಲವಾರು ಇದ್ದರು.
ಉಮಾಕಾಂತ ಮಹಾಜನ ಸ್ವಾಗತಿಸಿದರು. ಶ್ರೀ ನಯಮೋದ್ದಿನ ನಿರೂಪಿಸಿದರು. ಮಹದೇವ ಬಿರಾದಾರ್ ವಂದಿಸಿದರು.