ಜಮಖಂಡಿ ರಸ್ತೆ ಕೆಸರಿನ ಗದ್ದೆ: ಗ್ರಾಮ ಪಂಚಾಯತಿ ಸದಸ್ಯ ಅಯ್ಯಣಗೌಡ ಮಾಲಿ ಪಾಟೀಲ್ ಆಕ್ರೋಶ

ಜಮಖಂಡಿ ರಸ್ತೆ ಕೆಸರಿನ ಗದ್ದೆ: ಗ್ರಾಮ ಪಂಚಾಯತಿ ಸದಸ್ಯ ಅಯ್ಯಣಗೌಡ ಮಾಲಿ ಪಾಟೀಲ್ ಆಕ್ರೋಶ
ಯಡ್ರಾಮಿ ತಾಲೂಕಿನ ಜಮಖಂಡಿ ಗ್ರಾಮದ ರಸ್ತೆ ಇತ್ತೀಚೆಗೆ ಕೆಸರಿನ ಗದ್ದೆಯಂತಾಗಿದ್ದು, ಸಂಚಾರಕ್ಕೆ ತೀವ್ರ ಅಸೌಕರ್ಯ ಉಂಟುಮಾಡುತ್ತಿದೆ. ವಾಹನ ಸವಾರರು ಹಾಗೂ ದಿನನಿತ್ಯದ ಕೃಷಿ ಮತ್ತು ಜೀವನೋಪಾಯ ಕಾರ್ಯಗಳಿಗೆ ತೆರಳುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದನ್ನು ಗ್ರಾಮ ಪಂಚಾಯತಿ ಸದಸ್ಯ ಅಯ್ಯಣಗೌಡ ಮಾಲಿ ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ. “ಜಮಖಂಡಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದೆಯೇ ಇಲ್ಲ, ಗ್ರಾಮವು ಸೊನ್ನೆ ಅಭಿವೃದ್ಧಿಯ ಹಾದಿಯಲ್ಲಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸಲು ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸಿ, ಕೂಡಲೇ ಸಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಅವರು ಆಗ್ರಹಿಸಿದರು.
ವರದಿ: ಜೇಟ್ಟೆಪ್ಪ ಎಸ್. ಪೂಜಾರಿ