ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ ಶರಣಬಸಪ್ಪ ಅಪ್ಪಾ – ಚರಲಿಂಗ ಶ್ರೀ

ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ ಶರಣಬಸಪ್ಪ ಅಪ್ಪಾ – ಚರಲಿಂಗ ಶ್ರೀ

ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ ಶರಣಬಸಪ್ಪ ಅಪ್ಪಾ – ಚರಲಿಂಗ ಶ್ರೀ

ಕಲಬುರಗಿ, 21 ಆಗಸ್ಟ್ 2025: ಹಾನಗಲ್ಲ ಶಿವಕುಮಾರ ಶ್ರೀಗಳ ಪುರಾಣ ಕಾರ್ಯಕ್ರಮದ ಅಂಗವಾಗಿ ವಿದ್ಯಾನಗರದ ವೆಲ್‌ಫೇರ್ ಸೊಸೈಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ **“ಅಪ್ಪಾ ನುಡಿನಮನ”** ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಸ್ಥಾಪಕ ಡಾ. ಶರಣಬಸಪ್ಪ ಅಪ್ಪಾರವರ ಸೇವೆಯನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚರಲಿಂಗ ಶ್ರೀಗಳು, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರು ಹೊರಗಡೆ ಬರದಂತಹ ಪರಿಸ್ಥಿತಿಯಲ್ಲಿದ್ದ ಕಾಲದಲ್ಲಿ ಅಪ್ಪಾ ಅವರು ಮಹಿಳೆಯರಿಗಾಗಿ ಪ್ರತ್ಯೇಕ ಪದವಿ ಮಹಾವಿದ್ಯಾಲಯ ಹಾಗೂ ನಂತರ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದರು. ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ದಾಸೋಹದ ಮೂಲಕ ಸಾವಿರಾರು ಜನರನ್ನು ವಿದ್ಯಾವಂತರನ್ನಾಗಿ ಮಾಡಿ, ಉನ್ನತ ಹುದ್ದೆಗಳಿಗೆ ತಲುಪುವಂತೆ ಮಾಡಿದ ಅಪ್ಪಾರವರ ಸೇವೆ ಮರೆಯಲಾಗದು” ಎಂದು ಶ್ಲಾಘಿಸಿದರು.

ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ, ಗುರುಲಿಂಗಯ್ಯ ಮಠಪತಿ, ನಾಗರಾಜ ಹೆಬ್ಬಾಳ, ವಿನೋದಕುಮಾರ ಜನೆವರಿ ಅವರು ತಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಂಡು, ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಾಗಭೂಷಣ ಹಿಂದೊಡ್ಡಿ, ಬಸವರಾಜ ಪುಣ್ಯಶೆಟ್ಟಿ, ಬಸವರಾಜ ಸಜ್ಜನ, ಆರ್.ಎಸ್. ಗುಗ್ಗವಾಡ, ಗಂಗಾಧರ ಕಣ್ಣಿ, ಬಸವಂತರಾವ ಜಾಬಶೆಟ್ಟಿ, ಶಾಂತಯ್ಯ ಬೀದಿಮನಿ, ವಿನೋದ ಗೋರೆ, ಡಾ. ಸಂಗಣ್ಣ ಚಿಟಗಿ, ಶರಣಯ್ಯ ಮಠಪತಿ, ಮಧು ಹಿಂದೊಡ್ಡಿ, ರಾಜೇಶ್ವರಿ ಕಂಠಿ, ತಾರಾ ಪಾಟೀಲ, ಶರಣಮ್ಮ ಬೀದಿಮನಿ, ಸುಮಂಗಲಾ ನಾಗಶೆಟ್ಟಿ, ಸುರೇಖಾ ಯಾದಗಿರಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.