ಸುತ್ತೋಲೆ ಹಿಂಪಡೆಯಲು ತಳವಾರ ಮಹಾಸಭಾ ವತಿಯಿಂದ ಸಿಎಂಗೆ ಮನವಿ

ಸುತ್ತೋಲೆ ಹಿಂಪಡೆಯಲು ತಳವಾರ ಮಹಾಸಭಾ ವತಿಯಿಂದ ಸಿಎಂಗೆ ಮನವಿ

ಸುತ್ತೋಲೆ ಹಿಂಪಡೆಯಲು ತಳವಾರ ಮಹಾಸಭಾ ವತಿಯಿಂದ ಸಿಎಂಗೆ ಮನವಿ

ಕಲಬುರಗಿ: ರಾಜ್ಯದಲ್ಲಿ ನಾಯ್ಕಡ್, ನಾಯಕ್ ಸಮುದಾಯದ ಪರ್ಯಾಯ ಪದ ಜಾತಿಗಳಲ್ಲದ ತಳವಾರ ಮತ್ತುಪರಿವಾರಜಾತಿಯವರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದರಿಂದ ನೈಜ ಪರಿಶಿಷ್ಟಪಂಗಡದ ಸಮುದಾಯದವರು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಅವರು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ತಳವಾರ ಮಹಾಸಭಾ ಜಿಲ್ಲಾ ಘಟಕ ಒತ್ತಾಯಿಸಿದೆ.

ಈ ಸಂಬAಧ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಕಾAತ ತಳವಾರ ನೇತೃತ್ವದ ನಿಯೋಗ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ ತಳವಾರ ಸಮುದಾಯಕ್ಕೆ ಆಗುತ್ತಿರುವ ಈ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕ ಅಧ್ಯಕ್ಷ ಗಿರೀಶ್ ತುಂಬಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತಪ್ಪ ಕಾಚಾಪುರ್, ಕಾಳಗಿ ತಾಲೂಕ ಅಧ್ಯಕ್ಷ ಈರಣ್ಣ ದಂಡೋತಿ, ಅಫ್ಜಲ್ಪುರ್ ತಾಲೂಕ ಅಧ್ಯಕ್ಷ ಗುರು ಹವನೂರ, ಹಿರಿಯ ಮುಖಂಡ ಮಲ್ಲಿಕಾರ್ಜುನ್ ಗುಡ್ಡದ್, ಕಾಳಗಿ ಪ್ರಧಾನ ಕಾರ್ಯದರ್ಶಿ ಕಿರಣ್ ನಾಮದಾರ್ ಇದ್ದರು.