ಕಲಬುರಗಿ ಡಿ.ದೇವರಾಜ ಅರಸು 110ನೇ ಜನುಮದಿನ

ಕಲಬುರಗಿ ಡಿ.ದೇವರಾಜ ಅರಸು 110ನೇ ಜನುಮದಿನ

ಕಲಬುರಗಿ ಡಿ.ದೇವರಾಜ ಅರಸು 110ನೇ ಜನುಮದಿನ 

ಕಾರ್ಯಕ್ರಮ ವೀರಶೈವ ಕಲ್ಯಾಣ ಮಂಟಪದಲ್ಲಿ ಆಚರಣೆ

ಕಲಬುರಗಿ:ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರರಾದ ಡಿ. ದೇವರಾಜ ಅರಸುರವರ 110ನೇ ಜಯಂತಿಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಹಾಗೂ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಕಾ ಪರಮೇಶ್ವರ ಅವರು ದೇವರಾಜ ಅರಸುರವರಿಗೆ ನಮನ ಸಲ್ಲಿಸಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಸೋಮಶೇಖರ್ ವೈ, ಕುಮಾರ ಕೆ. ಯಾಧವ್, ಆನಂದ ವಾರಿಕ್, ಬಸವರಾಜ ರಾವೂರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದೇವರಾಜ ಅರಸುರವರ ಸಾಮಾಜಿಕ ನ್ಯಾಯದ ಕಾರ್ಯಗಳನ್ನು ಸ್ಮರಿಸಲಾಯಿತು ಮತ್ತು ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವಲ್ಲಿ ಅವರ ಪಾತ್ರವನ್ನುವಹಿಸುತ್ತವೆ ಎಂದು ಹೇಳಿದರು