ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡ ತಾಲೂಕ ಹೊರಾಂಗಣ ಕ್ರಿಡಾಂಗಣ ಕಣ್ಮುಚಿ ಗಾಢ ನಿದ್ರೆಗೆ ಜಾರಿದ ಅಧಿಕಾರಿಗಳು : ವಕೀಲ ಶ್ರೀಮಂತ ಕಟ್ಟಿಮನಿ ಆರೋಪ
ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡ ತಾಲೂಕ ಹೊರಾಂಗಣ ಕ್ರಿಡಾಂಗಣ
ಕಣ್ಮುಚಿ ಗಾಢ ನಿದ್ರೆಗೆ ಜಾರಿದ ಅಧಿಕಾರಿಗಳು : ವಕೀಲ ಶ್ರೀಮಂತ ಕಟ್ಟಿಮನಿ ಆರೋಪ
ಚಿಂಚೋಳಿ :ಪೋಲಕಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಲೂಕಿನ ಹೊರಾಂಗಣ ಕ್ರಿಡಾಂಗಣವು ಸಂಪೂರ್ಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿಕೊಂಡಿದ್ದಾರೆಂದು ವಕೀಲ ಶ್ರೀಮಂತ ಕಟ್ಟಿಮನಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಹೊರಾಂಗಣ ಕ್ರಿಡಾಂಗಣದ ಮೇಲುಸ್ತುವಾರಿ ಅಧಿಕಾರಿಗಳು ತಾಲೂಕಿನ ಕ್ರಿಡಾಂಗಣದ ಕಡೆಗೆ ಗಮನ ಹರಿಸದೆ ಗಾಢ ನಿದ್ರೆಯಲ್ಲಿ ಕುಳಿತುಕೊಂಡಂತೆ ಭಾಸವಾಗುತ್ತಿದೆ. ಕ್ರಿಡಾಂಗಣಕ್ಕೆ ಬಂದ ಕ್ರೀಡಾಪಟುಗಳಿಗೆ ಸರಿಯಾಗಿ ನೀರಿನ ವ್ಯವಸ್ಥೆಯಿಲ್ಲ. ವಾಯು ವಿಹಾರಕ್ಕೆ ಬಂದ ಹಿರಿಯ ನಾಗರಿಕರಿಗೆ ಅಲ್ಲಿ ಟ್ರ್ಯಾಕಿಂಗ್ ವ್ಯವಸ್ಥೆ, ವಾಯಮ ಪರಿಕರಗಳು ಅಳವಡಿಕೆ, ಶೌಚ್ಛಾಲಯ ವ್ಯವಸ್ಥೆ ಮತ್ತು ವಿದ್ಯುತ್ ದೀಪಗಳಂತಹ ಮೂಲಭೂ ಸೌಲಭ್ಯಗಳಿಂದ ಕ್ರಿಡಾಂಗಣ ವಂಚಿತವಾಗಿದೆ. ಇನ್ನೂ ಪಕ್ಕದಲ್ಲಿಯೇ ಮಹಿಳಾ ವಸತಿ ನಿಲಯ, ಕೈಗಾರಿಕ ತರಬೇತಿ ಕೇಂದ್ರ, ರಾಷ್ಟ್ರೀಯ ಮಾಧ್ಯಮಿಕ (ಆದರ್ಶ ವಿದ್ಯಾಲಯ) ಶಾಲೆಗಳಿದ್ದು, ನೂತನವಾಗಿ ನಿರ್ಮಾಣಗೊಳುತ್ತಿರುವ ಮೌಲಾನಾ ಆಜಾದ್ ಶಾಲೆಗಳಿದ್ದು, ಅಲ್ಲಿನ ಕ್ರಿಡಾಂಗಣದ ಹೊರಗೆ ಮತ್ತು ನಿಲಯ ಅಕ್ಕ ಪಕ್ಕದ ರಸ್ತೆಗಳಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ದೀಪಗಳಿಲ್ಲದ ಕಾರಣ ವಾಯುವಿಹಾರಗಾರರಿಗೆ ಕಾಲಲ್ಲಿ ವಿಷ ಜಂತುಗಳು ಕಾಣಿಸಿಕೊಳ್ಳುವುದಲ್ಲದೇ, ರಾತ್ರಿ ಕಳ್ಳಾಟಗಳಿಗೆ ಮತ್ತು ಕುಡುಕರ ವಾಸಕ್ಕೆ ಅನುವು ಮಾಡಿಕೊಡುತ್ತಿದೆ. ಕೆಲವೇ ದಿನಗಳಲ್ಲಿ 26 ಜನವರಿ ನಿಮಿತ್ಯವಾಗಿ ತಾಲೂಕ ಆಡಳಿತ ಧ್ವಜರೋಹಣ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಪೋಲಕಪಳ್ಳಿ ಗ್ರಾಮ ಪಂಚಾಯತ್ ಆಡಳಿತ ಮತ್ತು ಕ್ರಿಡಾಂಗಣದ ಮೇಲೂಸ್ತುವಾರಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಬಿಟ್ ಪೊಲೀಸ್ ಗಸ್ತು ಗಟ್ಟಿಗೊಳಿಸಿ ಅಲ್ಲಿನ ಸರಕಾರಿ ವಸತಿ ನಿಲಯಗಳಿಗೆ ಸುರಕ್ಷತೆಗೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕೆಂದು ಆಗ್ರಹಿಸಿದರಲ್ಲದೇ, ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವರಿಗೆ ಮಾತನಾಡಿ, ಕ್ರಿಡಾಂಗಣದ ಮೂಲಭೂತ ವ್ಯವಸ್ಥೆಯ ಬಗ್ಗೆ ಗಮನ ಸೆಳೆದಿದ್ದು, ಅದಕ್ಕೆ ಶಾಸಕರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಅವರು ತಿಳಿಸಿದರು.
