ಒಳಮೀಸಲಾತಿ ಜಾರಿ ಸಂಭ್ರಮಾಚರಣೆ

ಒಳಮೀಸಲಾತಿ ಜಾರಿ ಸಂಭ್ರಮಾಚರಣೆ

ಒಳಮೀಸಲಾತಿ ಜಾರಿ ಸಂಭ್ರಮಾಚರಣೆ

 ಆಳಂದ:ಪಟ್ಟಣದ ಬಸ್ ನಿಲ್ದಾಣ ಎದುರುಗಡೆ ಆಳಂದ ತಾಲೂಕ ಛಲವಾದಿ ಮಹಾಸಭಾ ವತಿಯಿಂದ ಒಳ ಮೀಸಲಾತಿ ಜಾರಿಗೆಯಾದ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಹದೇವ ಮೋಘಾ ಮಾತನಾಡಿ ಒಳ ಮೀಸಲಾತಿ ಜಾರಿಗೆ ಸಮಾಧಾನಕರವಾಗಿದೆ ಒಳಮಿಸಲಾತಿ ಜಾರಿಗಾಗಿ ಹೋರಾಟ ಮಾಡಿದ ಎಲ್ಲರಿಗೂ ಧನ್ಯವಾದಗಳು ಸಲ್ಲಿಸಿದರು ನಮ್ಮ ಸಮುದಾಯ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನುಡಿದರು.ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಆಳಂದ ತಾಲೂಕ ಛಲವಾದಿ ಮಹಾಸಭಾದ ಅಧ್ಯಕ್ಷರಾದ ಚಂದ್ರಕಾಂತ್ ಜಂಗ್ಲೆ ಮಾತನಾಡಿ ನಮ್ಮ ಹೋರಾಟಕ್ಕೆ ಜಯವಾಗಿದೆ ಒಳಮೀಸಲಾತಿ ಜಾರಿಯಿಂದ ನಮ್ಮ ಸಮಾಜ ಅಭಿವೃದ್ಧಿಯಾಗಲಿದೆ ಎಂದರು.

ಮಲ್ಲಿಕಾರ್ಜುನ ಬೋಳಣಿ ಮಾತನಾಡಿ ಮೂರು ದಶಕದ ಹೋರಾಟಕ್ಕೆ ಇಂದು ಜಯ ದೊರೆತಿದೆ ಇದರ ಲಾಭ ನಾವೆಲ್ಲರೂ ಪಡೆಯೋಣ ಎಂದರು. 

ಡಾ. ಶಿವಪ್ಪ ಮಾತನಾಡಿ ನಮ್ಮ ಸಮಾಜ ಆರ್ಥಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಹಿಂದುಳಿದಿದೆ ಒಳ ಮೀಸಲಾತಿಯಿಂದ ನಮ್ಮ ಸಮಾಜಕ್ಕೆ ನ್ಯಾಯ ದೊರೆತಿದೆ ಎಂದರು. ಮಲ್ಲಿಕಾರ್ಜುನ ಶೃಂಗೇರಿ ಮಾತನಾಡಿ ಒಳ ಮೀಸಲಾತಿಯ ಲಾಭ ನಾವುಪಡೆದುಕೊಳ್ಳೋಣ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರು ನಮಗೆ ನೀಡಿರುವ ಭಿಕ್ಷೆ ಇದರ

 ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಡಾ.ಶಿವಪ್ಪ ಮಹಾದೇವ ಮೋಘಾ ಪಂಡಿತ್ ದೋಣಿ ಮಲ್ಲಿಕಾರ್ಜುನ್ ಶೃಂಗೇರಿ ಸುಧಾಕರ್ ಮೊದಲೇ ದತ್ತಾ ಮೇಲಿನಕೇರಿ ಚಂದ್ರಕಾಂತ್ ಜಂಗ್ಲೆ.ರತಿ ಕಾಂತ್ ಭರತ್ ಸಜ್ಜನ್ ಅಂಬುಶ ಮಾದನ ಹಿಪ್ಪರಗಾ ಲಕ್ಷ್ಮಿಕಾಂತ್ ಭಜನ್ ಮುಂತಾದವರು ಉಪಸ್ಥಿತರಿದ್ದರು .

ವರದಿ ಡಾ.ಅವಿನಾಶ S ದೇವನೂರ