"ಸ್ವಾಮಿ ವಿವೇಕಾನಂದರ ಹಾಗು ಹವಾ ಮಲ್ಲಿನಾಥರ ಜೀವನ ದೇಶದ ಯುವಶಕ್ತಿಗೆ ಮಾದರಿ- ಮಾಜಿ ಸಚಿವ ಶಿವನಗೌಡ ನಾಯಕ"

"ಸ್ವಾಮಿ ವಿವೇಕಾನಂದರ ಹಾಗು ಹವಾ ಮಲ್ಲಿನಾಥರ ಜೀವನ ದೇಶದ ಯುವಶಕ್ತಿಗೆ ಮಾದರಿ- ಮಾಜಿ ಸಚಿವ ಶಿವನಗೌಡ ನಾಯಕ"

"ಸ್ವಾಮಿ ವಿವೇಕಾನಂದರ ಹಾಗು ಹವಾ ಮಲ್ಲಿನಾಥರ ಜೀವನ ದೇಶದ ಯುವಶಕ್ತಿಗೆ ಮಾದರಿ- ಮಾಜಿ ಸಚಿವ ಶಿವನಗೌಡ ನಾಯಕ"

ಆಂಧ್ರಪ್ರದೇಶದ ಶ್ರೀಶೈಲದ ಶ್ರೀ ಶರಣಬಸವೇಶ್ವರ ಸದಾಶಿವಯ್ಯ ವೀರಶೈವ ಅನ್ನಸತ್ರ ಸಭಾಭವನದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ (ರಿ ) ನವದೆಹಲಿ ವತಿಯಿಂದ ರವಿವಾರ 12 ನೇ ಜನವರಿ 2025 ರಂದು ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ ಜಯಂತಿಯೋತ್ಸವ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಸಮಿತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನೀರಗುಡಿ, ಮಾಜಿ ಸಚಿವರಾದ ಶಿವನಗೌಡ ನಾಯಕ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಹರ್ಷಾನಂದ ಗುತ್ತೆದಾರ, ಶಾಹಜಿ ರಾವಪಾಟೀಲ, ಆಚಾರ್ಯ ಪ್ರಮೋದ ಶಾಸ್ತ್ರಿ ಸೇರಿದಂತೆ ಅತಿಥಿಗಳು ಜ್ಯೋತಿ ಬೆಳಗಿಸಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಾಷ್ಟ್ರ ಗಿತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವರಾದ ಶಿವನಗೌಡ ನಾಯಕ ಮಾತನಾಡಿ ಈ ಹಿಂದೆ ದೇಶ - ಧರ್ಮದ ಗೌರವಕ್ಕಾಗಿ ವಿವೇಕಾನಂದರು ನಿಸ್ವಾರ್ಥ ಜೀವಮಾನದ ಸೇವೆ ನಲ್ಲಿಸಿದ್ದು ಸಧ್ಯ ಹ ವಾ ಮಲ್ಲಿನಾಥರು ಸರ್ವಧರ್ಮಗಳ ಒಳತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ನಮ್ಮ ದೇಶದ ಯುವಕರಿಗೆ ಸ್ವಾಮಿ ವಿವೇಕಾನಂದರ ಹಾಗೂ ಹವಾ ಮಲ್ಲಿನಾಥರ ಜೀವಮಾನದ ಮಾಹನ ಕಾರ್ಯಗಳು ಸ್ಪೂತೀಯಾಗಿವೆ ಎಂದರು, ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಜಿಲ್ಲಾಪಂಚಾಯತ ಸದಸ್ಯ ಹರ್ಷಾನಂದ ಗುತ್ತೆದಾರ ಮಾತನಾಡಿ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜರ ನಿಸ್ವಾರ್ಥ ದೇಶಭಕ್ತಿ - ಸಮಾಜ ಸೇವೆ ಕಾರ್ಯಗಳು ನಮಗೆ ವಿವೇಕಾನಂದರ ಆದರ್ಶ ಜೀವನ ನೆನಪಿಸುತ್ತಿದ್ದು ನಿರಗುಡಿ ಅಪ್ಪಾಜಿ ಅವರು ಸರ್ವಧರ್ಮದ ಶ್ರೇಷ್ಟ ಸಂತರಾಗಿ ವಿಶ್ರಾಂತಿರಹಿತವಾಗಿ ಶ್ರಮಿಸುತ್ತಿದ್ದು ಸಮಸ್ತ ದೇಶಬಾಂಧವರು ಪರಮ ಪೂಜ್ಯರ ತತ್ಪ ಸಿದ್ಧಾಂತ ಗಳನ್ನು ಪಾಲಿಸಬೇಕು ಎಂದರು , ಈ ಕಾರ್ಯಕ್ರಮದಲ್ಲಿ ಮುಖಂಡರಾದ ವಿಜಯ ಕುಮಾರ ಅಡಕಿ, ಸಂದೇಶ ಪವಾರ , ಮಲ್ಲಿಕಾರ್ಜುನ ಸಾರವಾಡ, ಪಪ್ಪು ಪಾಟೀಲ, ಮಂಜುನಾಥ ಬಿರಾದಾರ, ರಾಜಶೇಖರ ರೆಡ್ಡಿ, ಭೂಮಿಕಾ ಚಿತ್ತಾಪುರ, ಗುರುಸಿದ್ದಪ್ಪಾ ಬೆನಕನಳ್ಳಿ, ಪ್ರಕಾಶ ಕೊಳಾರ, ಆನಂದ ಪಾಟೀಲ, ಗಂಗಪ್ಪ ಗೌಡ ಬೋಧಾನ, ಸಂತೋಷ ಅಲ್ದೆ, ವಿಷ್ಣು ಮದನೆ ಲಾತುರ, ಗಂಗಾಧರ ಶಾಸ್ತ್ರಿ, ಸಹದೇವ ಬೊಸ್ಲೆ ಹಾಗೂ ಯಶಸ್ವಿ ಗ್ರುಪನ ಮುಖ್ಯಸ್ತರಾದ ಶ್ರೀಮತಿ ಕಾವೇರಿ ಅವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು, ಕುಮಾರಿ ಸಾಕ್ಷಿ - ಪ್ರೀತಿ ಸಹೋದರಿಯರು, ಸಂಗಮೇಶ ಶಾಸ್ತ್ರಿ ಹಾಗೂ ತಂಡದವರು ದೇಶಭಕ್ತಿ ಸಂಗಿತ ಕಾರ್ಯಕ್ರಮ ನಡೆಸಿ ಕೊಟ್ಟರು, ಈ ಕಾರ್ಯಕ್ರಮದಲ್ಲಿ ದೇಶದ ಅನೇಕ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದೇಶಬಾಂಧವರು ಆಗಮಿಸಿದ್ದು ಎಲ್ಲರಿಗೂ ಉತ್ತರ ಕರ್ನಾಟಕ ಶೈಲಿಯ ರುಚಿಯಾದ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ವೈಜನಾಥ ಎಸ್ ಝಳಕಿ ಮಾಧ್ಯಮಕ್ಕೆ ಪ್ರಕಟಣೆ ಮೂಲಕ ತಿಳಿಸಿದರು.