ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ : ಜೀಬಾ ತಬಾಸುಮ್ ಖಂಡನೆ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ : ಜೀಬಾ ತಬಾಸುಮ್ ಖಂಡನೆ
ಕಲಬುರಗಿ: ಬಿಜಾಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯು ಮುಸ್ಲಿಂ ಮಹಿಳೆಯರ ಮೇಲೆ ಮಾತ್ರವಲ್ಲದೆ ಎಲ್ಲಾ ಮಹಿಳೆಯರ ಘನತೆ, ಹಕ್ಕುಗಳು ಮತ್ತು ಸಮಾನತೆಯ ಮೇಲಿನ ನೇರ ದಾಳಿಯಾಗಿದೆ ಇಂತಹ ಮಾತುಗಳು ದ್ವೇಷ, ಕಿಡಿಗೇಡಿತನವನ್ನು ಹರಡುವ ಮತ್ತು ಸಮಾಜದಲ್ಲಿ ಹಿಂದೂ-ಮುಸ್ಲಿA ಏಕತೆಯನ್ನು ನಾಶಮಾಡುವ ಪಿತೂರಿಯಾಗಿದ್ದು, ಇದು ಕ್ಷಮಿಸಲಾಗದು.
ಯಾವುದೇ ಜವಾಬ್ದಾರಿಯುತ ವ್ಯಕ್ತಿ ಈ ನಾಚಿಕೆಗೇಡಿನ ಮತ್ತು ಅವಮಾನಕರ ಮಾತುಗಳು ನೀಡಲು ಧೈರ್ಯ ಮಾಡದಂತೆ ಅವರ ವಿರುದ್ಧ ವಿಚಾರಣೆ ನಡೆಸಬೇಕು ಈ ಗಂಭೀರ ಹೇಳಿಕೆಯ ಬಗ್ಗೆ ತಕ್ಷಣ ಮತ್ತು ಬಲವಾದ ವಿಚಾರಣೆಯನ್ನು ನಡೆಸಬೇಕು ಎಂದು ಅಖಿಲ ಭಾರತ ಉರ್ದು ಕಲ್ಯಾಣ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ನ್ ಅಧ್ಯಕ್ಷರಾದ ಜೀಬಾ ತಬಾಸುಮ್ ಅವರು ಪ್ರಕಣೆಯ ಮೂಲಕ ಖಂಡಿಸಿದ್ದಾರೆ.