ಶೀರೂರು ಗುಡ್ಡ ದುರಂತ ಘಟನೆ ಸಂತ್ರಸ್ತರಿಗೆ ಶೀಘ್ರದಲ್ಲಿ ನ್ಯಾಯ: ಕೇಂದ್ರ ಸಚಿವ ಗಡ್ಕರಿ ಭರವಸೆ:
ಶೀರೂರು ಗುಡ್ಡ ದುರಂತ ಘಟನೆ ಸಂತ್ರಸ್ತರಿಗೆ ಶೀಘ್ರದಲ್ಲಿ ನ್ಯಾಯ: ಕೇಂದ್ರ ಸಚಿವ ಗಡ್ಕರಿ ಭರವಸೆ:
ಡಾ. ಪ್ರಣವಾನಂದ ಶ್ರೀ _ ಕೇಂದ್ರ ಸಚಿವ ನಿತಿನ್ ಗಡ್ಕರಿ ದೆಹಲಿಯಲ್ಲಿ ಭೇಟಿ
ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ದುರಂತ ಪ್ರಕರಣದಲ್ಲಿ 11 ಮಂದಿ ಮಣ್ಣಿನಡಿ ಬಿದ್ದು ಜೀವ ಕಳೆದುಕೊಂಡಿರುವ ಘಟನೆಯಲ್ಲಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿ ನ್ಯಾಯ ಕೊಡಬೇಕೆಂದು ಒತ್ತಾಯಿಸಿ ಕಲಬುರ್ಗಿ ಜಿಲ್ಲಾ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾಕ್ಟರ್ ಪ್ರಣವಾನಂದ ಶ್ರೀಗಳು ಕೇಂದ್ರ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಖಾತೆಯ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನವದೆಹಲಿಯಲ್ಲಿರುವ ನಿತಿನ್ ಗಡ್ಕರಿ ಅವರ ನಿವಾಸದಲ್ಲಿ ಆಗಸ್ಟ್ 19ರಂದು ಶಿವಮೊಗ್ಗದ ಸಂಸದರಾದ ಬಿ ವೈ ರಾಘವೇಂದ್ರ ಅವರ ಜೊತೆ ಭೇಟಿ ಮಾಡಿ ಶಿರೂರು ಗುಡ್ಡ ದುರಂತ ಪ್ರಕರಣದಲ್ಲಿ ಸಂತ್ರಸ್ತರಾದವರಿಗೆ ಕೂಡಲೇ ನ್ಯಾಯ ಒದಗಿಸಬೇಕು ಎಂದು ದಾಖಲೆ ಪತ್ರಗಳೊಂದಿಗೆ ಮಾಹಿತಿ ನೀಡಿ ಮನವಿ ಮಾಡಿದರು.
ಡಾ. ಪ್ರಣವಾನಂದ ಶ್ರೀಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿತಿನ್ ಗಡ್ಕರಿ
ಯವರು ಮಾತನಾಡುತ್ತಾ ಬೇಡಿಕೆಯು ನ್ಯಾಯಾಚಿತವಾಗಿದ್ದು ಸಂತ್ರಸ್ತರಿಗೆ ನ್ಯಾಯೋಚಿತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ಪರಿಹಾರ ಕಲ್ಪಿಸಲಾಗುವುದು. ಈ ಘಟನೆಯು ದುರದೃಷ್ಟಕರವಾಗಿದ್ದು ಸಂತ್ರಸ್ತರಿಗೆ ಸಾಂತ್ವನ ಹೇಳುವುದಾಗಿ ಅವರು ತಿಳಿಸಿದರು. ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಸಲಾಗುವುದು ಮತ್ತು ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸಲು ಬದ್ಧನಾಗಿರುವುದಾಗಿ ಗಡ್ಕರಿ ಹೇಳಿದರು. ಸಂಸದರಾದ ಬಿ ವೈ ರಾಘವೇಂದ್ರ ಘಟನೆ ಯ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು ಮತ್ತು ಸಂತ್ರಸ್ತರಿಗೆ ನ್ಯಾಯೋಚಿತವಾದ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಮನವಿ ಮಾಡಿದರು. ಕೇಂದ್ರ ಸಚಿವರ ಸಂದರ್ಭದಲ್ಲಿ ಇರೂರು ಗುಡ್ಡ ದುರಂತ ಪ್ರಕರಣದಲ್ಲಿ ಸಂತ್ರಸ್ತರಾದ ಮನಿಶಾ ಸುಭಾಷ್ ನಾಯಕ್ ಮತ್ತು ಶ್ರೀನಿವಾಸ್ ನಾಯಕ ಕೂಡ ಹಾಜರಿದ್ದರು. ಶಿರೂರು ಗುಡ್ಡ ದುರಂತ ಘಟನೆಯಲ್ಲಿ ಒಟ್ಟು 11ಮಂದಿ ಮೃತಪಟ್ಟಿದ್ದು ಅದರಲ್ಲಿ ಏಳು ಮಂದಿ ಈಡಿಗ ಸಮುದಾಯದ ನಾಯಕ್ ಪಂಗಡದವರು. ಇವರಿಗೆ ನ್ಯಾಯ ಕಲ್ಪಿಸಲು ಡಾ ಪ್ರಣವಾನಂದ ಶ್ರೀಗಳು ಈಗಾಗಲೇ ಹೆದ್ದಾರಿ ನಿರ್ಮಾಣ ಕಂಪನಿ, ಲೋಕಾಯುಕ್ತ ಹಾಗೂ ಕೋರ್ಟುಗಳಲ್ಲಿ ದಾವೆ ಸಲ್ಲಿಸಿದ್ದರು. ಈ ಮಧ್ಯೆ ಕೇಂದ್ರ ಸಚಿವರು ಮಾತುಕತೆಗೆ ಆಹ್ವಾನಿಸಿ, ತಕ್ಷಣವೇ ಪರಿಹಾರ ಕಲ್ಪಿಸಲು ಭರವಸೆ ನೀಡಿರುವುದು ಸಂತ್ರಸ್ತರಿಗೆ ಸಂತಸವನ್ನುಂಟು ಮಾಡಲಿದೆ ಮತ್ತು ಗಡ್ಕರ್ ಅವರಿಗೆ ಹಾಗೂ ಕೇಂದ್ರ ಸಚಿವರಿಗೆ ಸಂತ್ರಸ್ತರನ್ನು ಭೇಟಿ ಮಾಡಿಸಿದ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ಡಾ. ಪ್ರಣವಾನಂದ ಶ್ರೀಗಳು.ಹೇಳಿದ್ದಾರೆ