ಸಾಗರ ಬಣದ ದಸಂಸ ಪದಾದಿಕಾರಿಗಳ ಆಯ್ಕೆ| ಸಂಘಟನೆ ಶೋಷಿತರ ಪರವಾಗಿ ಕೆಲಸ ಮಾಡಲಿ :ನಾಗರಾಜ ಸಿಂಗೆ.

|ಸಾಗರ ಬಣದ ದಸಂಸ ಪದಾದಿಕಾರಿಗಳ ಆಯ್ಕೆ|
ಸಂಘಟನೆ ಶೋಷಿತರ ಪರವಾಗಿ ಕೆಲಸ ಮಾಡಲಿ :ನಾಗರಾಜ ಸಿಂಗೆ.
ಶಹಾಬಾದ : - ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ ಸಾಗರ ಬಣ)ಯ ತಾಲ್ಲೂಕ ಕಾರ್ಯಕರ್ತರ ಸಭೆಯು ನಗರದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿ ನಗರ ಸಭೆ ಮಾಜಿ ಅಧ್ಯಕ್ಷ ನಾಗರಾಜ ಸಿಂಗೆ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಶೋಷಿತ ವರ್ಗದ ದ್ವನಿಯಾಗಿ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ, ಸಂಘಟನೆ ಶೋಷಿತರ ಪರವಾಗಿ ಕೆಲಸ ಮಾಡಲಿದೆ ಮತ್ತು ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಸಾಗರ ರವರ ನೇತೃತ್ವದಲ್ಲಿ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಿದ್ದಾರೆ, ಸಂಘಟನೆ ಅನ್ಯಾಯದ ವಿರುದ್ಧ ಚಳುವಳಿಯನ್ನು ಮಾಡುತ್ತಿರುವುದು ನಮಗೆ ಸಂತೋಷ ತಂದಿದೆ ಎಂದರು.
ಮುಖಂಡರಾದ ರಾಮ ಕುಮಾರ ಸಿಂಗೆ ಮತ್ತು ಕೃಷ್ಣಪ್ಪ ಕರಣಿಕ ಮಾತನಾಡಿದರು.
ಪದಾದಿಕಾರಿಗಳ ನೇಮಕ :..
ಸೇಡಂ ಉಪ ವಿಭಾಗದ ಸಂಚಾಲಕರಾಗಿ ಮಹಾದೇವ ತರನಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ತಾಲ್ಲೂಕು ಘಟಕದ ಸಂಚಾಲಕರಾಗಿ ತಿಪ್ಪಣ್ಣ ಧನ್ನೇಕರ, ಸಂಘಟನಾ ಸಂಚಾಲಕರಾಗಿ ಜೈ ಭೀಮ ರಸ್ತಾಪೂರ, ಪುನಿತ ಹಳ್ಳಿ, ಸುನೀಲ ಮೆಂಗನ, ಸಂತೋಷ ಭಂಡೇರ, ಖಜಾಂಚಿಯಾಗಿ ರಾಣೋಜಿ ಹಾದಿಮನಿ ಹಾಗೂ ತಾಲ್ಲೂಕ ದಲಿತ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಸುನೀಲ ದೊಡ್ಡಮನಿ, ಸಂಘಟನಾ ಸಂಚಾಲಕರಾಗಿ ವಿಶಾಲ ತರನಳ್ಳಿ, ಖಜಾಂಚಿಯಾಗಿ ಬಸಲಿಂಗ ಕಟ್ಟಿಮನಿ ಮತ್ತು ಹೋಬಳಿ ಶಾಖೆಗೆ ಸಂಚಾಲಕರಾಗಿ ಭೀಮಾಶಂಕರ ಕಾಂಬಳೆ, ಸಂಘಟನಾ ಸಂಚಾಲಕರಾಗಿ ರಾಕೇಶ ಜಾಯಿ, ಮಹಾದೇವ ಮೇತ್ರಿ, ಶಿವಲಿಂಗಪ್ಪ ಬೋರಿ, ಶಿವಲಿಂಗಪ್ಪ ಜೀವಣಗಿ, ಶರಣಬಸಪ್ಪ ಕಂಬಾನೂರ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂ. ಸಂಚಾಲಕರಾದ ಕೃಷ್ಣಪ್ಪ ಕರಣಿಕ ರವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜಲಂದರ, ನಾಗೇಂದ್ರಪ್ಪ ಹುಗ್ಗಿ, ಮಹಾದೇವ ತರನಳ್ಳಿ, ತಿಪ್ಪಣ್ಣ ಧನ್ನೇಕರ, ಸುನೀಲ ದೊಡ್ಡಮನಿ, ಬಿಎಸ ಕಾಂಬಳೆ ಉಪಸ್ಥಿತರಿದ್ದರು.