ಭಾರತ ಸೇವಾದಳ ಸ್ಥಾಪಕ ಹರ್ಡಿಕರ್ ಪುಣ್ಯತಿಥಿ ಕಲಬುರ್ಗಿಯಲ್ಲಿ ಆಚರಣೆ
ಕಲಬುರಗಿ:ಇಂದು ನಗರದ ಗುರುಪಾದೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಸಂಸ್ಥಾಪಕ ಡಾ. ನಾರಾಯಣ ಸುಬ್ಬರಾವ್ ಹರ್ಡಿಕರ್ ಅವರ 49 ನೇ ಪುಣ್ಯತಿಥಿಯನ್ನು ಗುರುಪಾದೇಶ್ವರ ಕಾಲೇಜಿನ ಆಶ್ರಮದಲ್ಲಿ ಸೋಮವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುಪಾದೇಶ್ವರ ಕಾಲೇಜಿನ ಮುಖ್ಯಸ್ಥ ಹಿರಿಯ ಪತ್ರಕರ್ತ ವ್ಯಾದಿರಾಜ ವ್ಯಾಸಮುದ್ರ ಮಾತನಾಡುತ್ತ, ‘ಸ್ವಾತಂತ್ರ್ಯ ಚಳವಳಿಯಲ್ಲಿ ಲಕ್ಷಾಂತರ ಯುವಕರು ಪಾಲ್ಗೊಂಡಿದ್ದರು. ಆ ಯುವಕರಲ್ಲಿ ಶಿಸ್ತು ರೂಪಿಸಲು ಮಹಾತ್ಮಾ ಗಾಂಧೀಜಿ ಅವರ ಬೆಂಬಲದೊಂದಿಗೆ ಹರ್ಡಿಕರ್ ಅವರು ಸೇವಾದಳವನ್ನು ಸ್ಥಾಪಿಸಿ, ಮಕ್ಕಳಲ್ಲಿ ಶಿಸ್ತು ಮತ್ತು ದೇಶಪ್ರೇಮ ಮೂಡಿಸಲು ಸರ್ಕಾರಿ ಶಾಲೆಗಳಲ್ಲಿ ಭಾರತ ಸೇವಾದಳವನ್ನು ಪ್ರಾರಂಭಿಸಿದರು . ಇದು ಮಕ್ಕಳಿಗೆ ಭವಿಷ್ಯ ರೂಪಿಸುವುದಕ್ಕೂ ಸಹಕಾರಿಯಾಯಿತು’ ಎಂದರು.
ಭಾರತ ಸೇವಾದಳದ ಕಲಬುರಗಿ ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಶ ಬಡಿಗೇರ ಅವರು ಮಾತನಾಡಿದರು.ಜಿಲ್ಲಾ ಸಮಿತಿಯ ಸದಸ್ಯರಾದ ಮಂಜುನಾಥ ನಾಲವಾರಕರ, ಶಂಕರ ಕಟ್ಟಿಸಂಗಾವಿ ಜಿಲ್ಲಾ ಸಂಘಟಿಕರಾದ ಚಂದ್ರಶೇಖರ ಜಮಾದಾರ, ಶಿಕ್ಷಕರಾದ ಸಿ ಎಸ್ ಆನಂದ್, ಪತ್ರಕರ್ತ ದೇವೇಂದ್ರ ಆವOಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.