ಹಿರಿಯ ಜೀವಿಗಳೊಂದಿಗೆ ಡಾ.ಗಂಗಾಧರ ಶ್ರೀಗಳ ಜನುಮ ದಿನ ಆಚರಣೆ

ಹಿರಿಯ ಜೀವಿಗಳೊಂದಿಗೆ ಡಾ.ಗಂಗಾಧರ ಶ್ರೀಗಳ ಜನುಮ ದಿನ ಆಚರಣೆ
ಕಲಬುರಗಿ : ಯಾದಗಿರಿ ತಾಲೂಕಿನ ಶ್ರೀ ಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳ ಜನುಮ ದಿನದ ನಿಮಿತ್ಯ ಮಠದ ಭಕ್ತವೃಂದ ಯಕ್ಕಂಚಿ ಕುಟುಂಬದ ಚಂದ್ರಕಾಂತ ನೇತೃತ್ವದಲ್ಲಿ ಇಲ್ಲಿನ ಸೈಯದ್ ಚಿಂಚೋಳಿ ಕ್ರಾಸ್ ಬಳಿ ಇರುವ ಮಹಾದೇವಿ ವೃದ್ಧಾಶ್ರಮದಲ್ಲಿ ಶ್ರಾವಣ ಮಾಸದ ಗೋಷ್ಠಿ ಮತ್ತು ಮಹಾಪ್ರಸಾದ ವ್ಯವಸ್ಥೆ ಮಾಡಿತ್ತು.
ಈ ವೇಳೆ ಮಾತನಾಡಿದ ಶಾಂತಾ ಚಂದ್ರಕಾಂತ ಯಕ್ಕಂಚಿ, ಹಿರಿಯ ಜೀವಿಗಳಿಗೆ ಮಮತೆಯಿಂದ ನೋಡಿಕೊಳ್ಳಬೇಕು. ಇಳಿವಯಸ್ಸಿನಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೇ ರಕ್ಷಣೆ ನೀಡುವ ಕೆಲಸ ನಮ್ಮೆಲ್ಲರದಾಗಿದೆ ಎಂದರು.
ವಿಶ್ವಾರಾಧ್ಯರು ಮತ್ತು ಗಂಗಾಧರ ಸ್ವಾಮಿಗಳು ಸಕಲ ಭಕ್ತರ ಏಳಿಗೆ ಬಯಸುವವರಾಗಿದ್ದಾರೆಂದರು. ಶ್ರೀಗಳ ಜನುಮ ದಿನ ನಮ್ಮೊಂದಿಗೆ ಆಚರಿಸಿದ್ದಕ್ಕೆ ಹಿರಿಯ ಜೀವಿಗಳು ಸಂತಸಗೊಂಡರು.
ಈ ವೇಳೆ ಮಹೇಶ ಯಕ್ಕಂಚಿ, ಸಂದ್ಯಾ, ಹರ್ಷವರ್ಧನ, ಸುರೇಖಾ, ನಂದಿನಿ ಸೇರಿದಂತೆಯೇ ಇತರರಿದ್ದರು
.