ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯ ಮೇಲೆ ಸೂಕ್ತ ಕ್ರಮಕ್ಕೆ ದಲಿತ ಸೇನೆ ಒತ್ತಾಯ

ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯ ಮೇಲೆ ಸೂಕ್ತ ಕ್ರಮಕ್ಕೆ ದಲಿತ ಸೇನೆ ಒತ್ತಾಯ

ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯ ಮೇಲೆ ಸೂಕ್ತ ಕ್ರಮಕ್ಕೆ ದಲಿತ ಸೇನೆ ಒತ್ತಾಯ

ಚಿತ್ತಾಪುರ: ದಲಿತ ಸೇನೆ ರಾಜ್ಯಾಧ್ಯಕ್ಷ ಹಾಗೂ ನ್ಯಾಯವಾದಿ ಹಣಮಂತ ಯಳಸಂಗಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸೇನೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಘಟಕದ ಅಧ್ಯಕ್ಷ ಮೋಹನ್ ಎಸ್ ಚಿನ್ನ ಒತ್ತಾಯಿಸಿದ್ದಾರೆ.

ಗೃಹ ಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೆದಾರ ಅಶ್ವಥನಾರಾಯಣ ಕುಲಕರ್ಣಿ ಅವರಿಗೆ ಮಂಗಳವಾರ ಸಲ್ಲಿಸಿದರು.

ಸುಳ್ಳು ದಾಖಲೆ ಮಾಡಿದ ಮಹಿಳೆಯರು ರೌಡಿಶೀಟರ್‌ಗಳ ಕುಮ್ಮಕ್ಕಿನಿಂದ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಕಲಬುರಗಿಯಲ್ಲಿ ಕೆಲವು ಗುಂಡಾ ಪಡೆಗಳು ರೌಡಿಶೀಟರ್‌ಗಳು ದಲಿತ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಹಣಮಂತ್ ಯಳಸಂಗಿ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕಲಬುರಗಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗೃಹ ಮಂತ್ರಿಗಳು ಸೂಕ್ತ ತನಿಖೆಗೆ ಆದೇಶ ಮಾಡಬೇಕೆಂದು ಒತ್ತಾಯಿಸಿದರು.

ಹಣಮಂತ್ ಯಳಸಂಗಿಯವರು ಶೋಷಿತ ವರ್ಗದವರ ಹಿತಾಶಕ್ತಿ ಕಾಪಾಡುವ ದೃಷ್ಟಿಯಿಂದ ಹೆಸರುವಾಸಿ ಹೋರಾಟಗಾರರಾಗಿದ್ದಾರೆ. ಅವರ ವಿರುದ್ಧ ಅತ್ಯಂತ ಕೀಳು ಮಟ್ಟದ ಮಾಡಲಾಗಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಅವಿಶ್ವಾಸನೆಯವಾಗಿದ್ದು, ಹಣಮಂತ ಯಳಸಂಗಿಯವರ ಮಾನಹಾನಿ ಮಾಡಲು ಹಾಗೂ ದಲಿತ ಸೇನೆಯ ಚಟವಟಿಕೆಗಳಿಗೆ ಕೆಟ್ಟ ಹೆಸರು ತರಲು ದೊಡ್ಡ ಷಡ್ಯಾಂತರವಾಗಿದೆ. ಸುಳ್ಳು ಆರೋಪಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದಿದ್ದರೆ. ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದರು.

ಹಣಮಂತ ಯಳಸಂಗಿ ಮಾನಹಾನಿ ಉಂಟು ಮಾಡಿದ ಸುಳ್ಳು ದೂರು ನೀಡಿದ ಮಹಿಳೆಯರ ವಿರುದ್ಧ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸುಳ್ಳು ದೂರು ನೀಡಿದ ಕಾರಣಕ್ಕೆ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿ ಹನಿ ಟ್ರ‍್ಯಾಕ್ ತಂದೆಯ ಬಗ್ಗೆ ತನಿಖೆ ಮಾಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಸೇನೆ ತಾಲೂಕು ಉಪಾಧ್ಯಕ್ಷ ಅಂಬರೀಶ್ ರಂಗನೂರ್, ದಲಿತ ಸೇನೆ ತಾಲೂಕು ಕಾರ್ಯದರ್ಶಿ ಸಜ್ಜನ್ ಕುಮಾರ್ ಗಾಯಕ್ವಾಡ್ ಸೇರಿದಂತೆ ಇತರರಿದ್ದರು.